Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 57:9 - ಕನ್ನಡ ಸತ್ಯವೇದವು J.V. (BSI)

9 ಬಹು ಸುಗಂಧದ್ರವ್ಯಗಳನ್ನು ಕೂಡಿಸಿ ತೈಲವನ್ನೂ ತೆಗೆದುಕೊಂಡು ಪರರಾಜನ ಬಳಿಗೆ ಪ್ರಯಾಣಮಾಡಿದ್ದೀ; ನಿನ್ನ ರಾಯಭಾರಿಗಳನ್ನು ದೂರ ದೂರ ಕಳುಹಿಸಿದ್ದೀ. ನಿನ್ನನ್ನು ಪಾತಾಳದವರೆಗೂ ತಗ್ಗಿಸಿಕೊಂಡಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಬಹು ಸುಗಂಧದ್ರವ್ಯಗಳನ್ನು ಕೂಡಿಸಿ, ತೈಲವನ್ನೂ ತೆಗೆದುಕೊಂಡು, ಪರರಾಜನ ಬಳಿಗೆ ಪ್ರಯಾಣಮಾಡಿದ್ದಿ; ನಿನ್ನ ರಾಯಭಾರಿಗಳನ್ನು ದೂರ ದೂರ ಕಳುಹಿಸಿದ್ದಿ; ನಿನ್ನನ್ನು ಪಾತಾಳದವರೆಗೂ ತಗ್ಗಿಸಿಕೊಂಡಿದ್ದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಬೇಕಾದಷ್ಟು ಪರಿಮಳ ದ್ರವ್ಯವನ್ನು ಕೂಡಿಸಿಕೊಂಡು, ಸುಗಂಧ ತೈಲವನ್ನು ತೆಗೆದುಕೊಂಡು ‘ಮೋಲೆಕ್’ ದೇವತೆಯ ಬಳಿಗೆ ಯಾತ್ರೆಗೈದಿರುವೆ. (ಹೊಸ ದೇವತೆಗಳನ್ನು ಹುಡುಕಲು) ನಿನ್ನ ದೂತರನ್ನು ದೂರದೂರ ನಾಡುಗಳಿಗೆ ಕಳಿಸಿರುವೆ. ಪಾತಾಳದವರೆಗೂ ನಿನ್ನನ್ನು ತಗ್ಗಿಸಿಕೊಂಡಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಮೋಲೆಕನಿಗೆ ಅಂದವಾಗಿ ತೋರುವಂತೆ ನೀವು ನಿಮಗೆ ಎಣ್ಣೆ, ಸುಗಂಧದ್ರವ್ಯಗಳನ್ನು ಹಚ್ಚಿಕೊಂಡು ಹೋಗುವಿರಿ. ನಿಮ್ಮ ದೂತರನ್ನು ದೂರದೇಶಕ್ಕೆ ಕಳುಹಿಸುತ್ತೀರಿ. ಇವೇ ನಿಮ್ಮನ್ನು ನರಕಕ್ಕೆ ನಡಿಸುತ್ತವೆ. ಅಲ್ಲಿ ಮರಣವಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಬಹು ಸುಗಂಧದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ. ದೂರಕ್ಕೆ ನಿನ್ನ ರಾಯಭಾರಿಗಳನ್ನು ಕಳುಹಿಸಿದ್ದೀ. ಪಾತಾಳದಷ್ಟು ನೀಚಸ್ಥಿತಿಗೆ ಇಳಿದಿದ್ದೀಯೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 57:9
12 ತಿಳಿವುಗಳ ಹೋಲಿಕೆ  

ಇವಳು ಮೋಹಗೊಂಡು ಕಸ್ದೀಯದೇಶಕ್ಕೆ ಆ ಮನುಷ್ಯರ ಬಳಿಗೆ ದೂತರನ್ನು ಕಳುಹಿಸಿದಳು.


ಕೆಲವರು ಅತಿ ವಿನಯದಲ್ಲಿಯೂ ದೇವದೂತರ ಪೂಜೆಯಲ್ಲಿಯೂ ಆಸಕ್ತರಾಗಿದ್ದಾರೆ,


ಎಫ್ರಾಯೀಮು ಮೇಯಿಸುವ ಮಂದೆಯು ಗಾಳಿಯೇ, ಹಿಂದಟ್ಟುವ ಬೇಟೆಯು ಮೂಡಣ ಗಾಳಿಯೇ; ಅದು ಮೋಸವನ್ನೂ ಹಿಂಸೆಯನ್ನೂ ನಿರಂತರ ಹೆಚ್ಚೆಚ್ಚಾಗಿ ನಡಿಸುತ್ತದೆ; ಅಶ್ಶೂರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ; ಐಗುಪ್ತಕ್ಕೆ ಎಣ್ಣೆಯನ್ನು [ಕಾಣಿಕೆಯಾಗಿ] ಕಳುಹಿಸುತ್ತದೆ.


ಎಫ್ರಾಯೀಮು ಬುದ್ಧಿವಿವೇಕಗಳಿಲ್ಲದ ಪಾರಿವಾಳದಂತಿದೆ; ಅದರ ಜನರು ಐಗುಪ್ತವನ್ನು ಕೂಗುತ್ತಾರೆ, ಅಶ್ಶೂರಕ್ಕೆ ಹೊರಡುತ್ತಾರೆ;


ಇಷ್ಟಲ್ಲದೆ ದೂತನನ್ನು ಕಳುಹಿಸಿ ಪುರುಷರನ್ನು ದೂರದಿಂದ ಕರೆಯಿಸಿಕೊಂಡರು; ಇಗೋ, ಅವರು ಬಂದರು; [ಎಲೈ ಹೆಂಗಸೇ,] ಅವರಿಗಾಗಿ ನೀನು ಸ್ನಾನಮಾಡಿ ಕಣ್ಣಿಗೆ ಕಾಡಿಗೆಹಚ್ಚಿ


ಎಲ್ಲಾ ಕಡೆ ಸೂಳೆಯರಿಗೆ ಹಣಕೊಡುವದುಂಟು; ನೀನಾದರೂ ನಿನ್ನ ಎಲ್ಲಾ ವಿುಂಡರಿಗೆ ನೀನೇ ಕೊಡುತ್ತೀ; ಅವರು ಎಲ್ಲಾ ಕಡೆಯಿಂದಲೂ ಬಂದು ನಿನ್ನಲ್ಲಿ ವ್ಯಭಿಚಾರಮಾಡುವಂತೆ ಅವರಿಗೆ ಇನಾಮು ಕೊಡುತ್ತಿ.


ಹೀಗಿರಲು ಅಧಮರಾಗಲಿ ಉತ್ತಮರಾಗಲಿ ತಗ್ಗಿಸಲ್ಪಡುವರು; (ಅವರನ್ನು ಕ್ಷವಿುಸಬೇಡ).


ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ, ಚಕ್ಕೆ, ಇವುಗಳ ಚೂರ್ಣವನ್ನು ಉದರಿಸಿದ್ದೇನೆ.


ರಾಜನು ಮನಸ್ಸುಬಂದ ಹಾಗೆ ನಡೆದು ತಾನು ಎಲ್ಲಾ ದೇವರುಗಳಿಗಿಂತ ದೊಡ್ಡವನೆಂದು ತನ್ನನ್ನು ಹೆಚ್ಚಿಸಿಕೊಂಡು ಉಬ್ಬಿ ದೇವಾಧಿದೇವನನ್ನು ವಿುತಿಮೀರಿ ದೂಷಿಸಿ [ನಿಮ್ಮ ಮೇಲಿನ] ದೇವೋಗ್ರವು ತೀರುವ ತನಕ ವೃದ್ಧಿಯಾಗಿರುವನು; ದೈವಸಂಕಲ್ಪವು ನೆರವೇರಲೇಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು