ಯೆಶಾಯ 57:8 - ಕನ್ನಡ ಸತ್ಯವೇದವು J.V. (BSI)8 ಕದದ ಮತ್ತು ನಿಲುವಿನ ಹಿಂಭಾಗದಲ್ಲಿ ನೀನು ವಿಗ್ರಹವನ್ನು ಇಟ್ಟುಕೊಂಡಿದ್ದೀ; ನನ್ನನ್ನು ಬಿಟ್ಟುಬಿಟ್ಟು ನಿನ್ನ ಮಂಚದ ಗವಸಣಿಗೆಯನ್ನು ತೆಗೆದು ಅದನ್ನು ಹತ್ತಿ ಅದರಲ್ಲಿ ಅನ್ಯರಿಗೆ ಸ್ಥಳಕೊಟ್ಟು ಅವರೊಂದಿಗೆ ಒಪ್ಪಂದಮಾಡಿಕೊಂಡಿದ್ದೀ. ಅವರ ಸಂಗಮವನ್ನು ಆಶಿಸಿ ಸ್ಥಳವನ್ನು ಸಂಕೇತಮಾಡಿಕೊಂಡಿದ್ದೀ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಬಾಗಿಲಿನ ಮತ್ತು ನಿಲುವಿನ ಹಿಂಭಾಗದಲ್ಲಿ ನೀನು ವಿಗ್ರಹವನ್ನು ಇಟ್ಟುಕೊಂಡಿದ್ದಿ; ನನ್ನನ್ನು ಬಿಟ್ಟುಬಿಟ್ಟು, ನಿನ್ನ ಮಂಚದ ಗವಸಣಿಗೆಯನ್ನು ತೆಗೆದು, ಅದನ್ನು ಹತ್ತಿ ಅದರಲ್ಲಿ ಅನ್ಯರಿಗೆ ಸ್ಥಳಕೊಟ್ಟು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಿ. ಅವರ ಸಂಗಮವನ್ನು ಆಶಿಸಿ, ನಿನ್ನನ್ನು ತೋರ್ಪಡಿಸಿಕೊಂಡಿದ್ದಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಬಾಗಿಲಿನ ಹಾಗು ಬಾಗಿಲಿನ ನಿಲುವಿನ ಹಿಂಭಾಗದಲ್ಲಿ ಅಶ್ಲೀಲ ಸ್ಮಾರಕಗಳನ್ನು ಇಟ್ಟುಕೊಂಡಿರುವೆ. ನನ್ನನ್ನು ತ್ಯಜಿಸಿಬಿಟ್ಟು, ನಿನ್ನ ಹಾಸಿಗೆಯನ್ನು ಬಿಚ್ಚಿರುವೆ. ಅನ್ಯರ ಸಂಗಮವನ್ನು ಬಯಸಿ ಅವರೊಂದಿಗೆ ಬೆಲೆಗೆ ಒಪ್ಪಂದ ಮಾಡಿಕೊಂಡಿರುವೆ; ಬಳಿಕ ಕಾಮವಿಲಾಸದಲ್ಲಿ ತೊಡಗಿರುವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆ ಬಳಿಕ ಆ ಹಾಸಿಗೆಯ ಮೇಲೆ ಮಲಗಿ ಆ ದೇವರುಗಳನ್ನು ಪ್ರೀತಿಸಿ ನನಗೆ ವಿರುದ್ಧವಾಗಿ ಪಾಪ ಮಾಡುತ್ತೀರಿ. ನೀವು ಆ ದೇವರುಗಳನ್ನು ಪ್ರೀತಿಸುತ್ತೀರಿ. ಅವುಗಳ ಬೆತ್ತಲೆ ಶರೀರಗಳನ್ನು ನೋಡುವದರಲ್ಲಿ ಸಂತೋಷಿಸುವಿರಿ. ನೀವು ನನ್ನೊಂದಿಗೆ ಇದ್ದಿರಿ. ಆದರೆ ಈಗ ನನ್ನನ್ನು ತೊರೆದು ಅವುಗಳನ್ನು ಸೇರಿಕೊಂಡಿದ್ದೀರಿ. ನನ್ನನ್ನು ಜ್ಞಾಪಕ ಹುಟ್ಟಿಸುವ ವಿಷಯಗಳನ್ನು ನೀವು ಅಡಗಿಸಿಡುತ್ತೀರಿ. ಅವುಗಳನ್ನು ಬಾಗಿಲ ಹಿಂದೆ ಅಡಗಿಸಿಡುತ್ತೀರಿ. ಅನಂತರ ನೀವು ಹೋಗಿ ಆ ಸುಳ್ಳುದೇವರೊಂದಿಗೆ ಒಪ್ಪಂದ ಮಾಡುತ್ತೀರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ ನಿನ್ನ ಜ್ಞಾಪಕದ ಚಿಹ್ನೆಯನ್ನು ಇಟ್ಟಿದ್ದೀಯೆ. ಏಕೆಂದರೆ ನನ್ನನ್ನು ಬಿಟ್ಟು ಬೇರೊಬ್ಬನಿಗೆ ನಿನ್ನನ್ನು ತೋರ್ಪಡಿಸಿಕೊಂಡಿದ್ದೀ. ಏರಿಹೋಗಿ ನಿನ್ನ ಮಂಚವನ್ನು ಅಗಲಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ. ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿ ಮಾಡಿದ್ದೀಯೆ. ಅಧ್ಯಾಯವನ್ನು ನೋಡಿ |