ಯೆಶಾಯ 51:18 - ಕನ್ನಡ ಸತ್ಯವೇದವು J.V. (BSI)18 ಹೆತ್ತ ಮಕ್ಕಳಲ್ಲೆಲ್ಲಾ ಅವಳನ್ನು ಕರೆದುಕೊಂಡು ಹೋಗುವವನು ಯಾರೂ ಇಲ್ಲ; ಸಾಕಿದ ಆ ಸಕಲ ಕುಮಾರರಲ್ಲಿ ಅವಳ ಕೈ ಹಿಡಿಯುವವನು ಒಬ್ಬನೂ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಅವಳು ಹೆತ್ತ ಮಕ್ಕಳಲ್ಲಿ ಅವಳನ್ನು ನಡೆಸಿಕೊಂಡು ಹೋಗುವವನು ಯಾರೂ ಇಲ್ಲ. ಸಾಕಿದ ಆ ಸಕಲ ಕುಮಾರರಲ್ಲಿ ಅವಳ ಕೈ ಹಿಡಿಯುವವನು ಒಬ್ಬನೂ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ಅವಳನ್ನು ಕರೆದುಕೊಂಡು ಹೋಗುವವನಾರೂ ಇಲ್ಲ, ಆಕೆ ಹೆತ್ತಾ ಮಕ್ಕಳೊಳು; ಅವಳ ಕೈಹಿಡಿದು ನಡೆಸುವವನು ಒಬ್ಬನೂ ಇಲ್ಲ, ಆಕೆ ಸಾಕಿದ ಕುವರರೊಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ಜೆರುಸಲೇಮಿನಲ್ಲಿ ಅನೇಕ ಜನರಿದ್ದರೂ ಅವರಲ್ಲಿ ಯಾರೂ ಅವಳಿಗಾಗಿ ನಾಯಕರಾಗಲಿಲ್ಲ. ಆಕೆಯು ಅನೇಕ ಮಕ್ಕಳನ್ನು ಪಡೆದವಳಾಗಿದ್ದರೂ ಆಕೆಯನ್ನು ನಡೆಸಲು ಮಾರ್ಗದರ್ಶಕರು ಯಾರೂ ಆಗಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ಅವಳು ಹೆತ್ತ ಎಲ್ಲಾ ಪುತ್ರರಲ್ಲಿ ಅವಳನ್ನು ನಡೆಸುವುದಕ್ಕೆ ಒಬ್ಬನೂ ಇಲ್ಲ. ಅವಳು ಬೆಳೆಯಿಸಿದ ಎಲ್ಲಾ ಪುತ್ರರಲ್ಲಿ, ಅವಳ ಕೈಯನ್ನು ಹಿಡಿಯುವವನು ಒಬ್ಬನೂ ಇಲ್ಲ. ಅಧ್ಯಾಯವನ್ನು ನೋಡಿ |