ಯೆಶಾಯ 5:29 - ಕನ್ನಡ ಸತ್ಯವೇದವು J.V. (BSI)29 ಸಿಂಹದಂತೆ ಗರ್ಜಿಸುತ್ತಾರೆ, ಪ್ರಾಯದ ಸಿಂಹಗಳ ಹಾಗೆ ಆರ್ಭಟಿಸುತ್ತಾರೆ, ಗುರುಗುಟ್ಟುತ್ತಾ ಬೇಟೆಹಿಡಿದು ಹೊತ್ತುಕೊಂಡು ಹೋಗುತ್ತಾರೆ, ರಕ್ಷಿಸುವವರು ಯಾರೂ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಅವರು ಸಿಂಹದಂತೆ ಘರ್ಜಿಸುತ್ತಾರೆ. ಪ್ರಾಯದ ಸಿಂಹಗಳ ಹಾಗೆ ಆರ್ಭಟಿಸುತ್ತಾರೆ. ಗುರುಗುಟ್ಟುತ್ತಾ ಬೇಟೆ ಹಿಡಿದು ಹೊತ್ತುಕೊಂಡು ಹೋಗುತ್ತಾರೆ. ರಕ್ಷಿಸುವವರು ಯಾರೂ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಗರ್ಜಿಸುತಿಹರು ಸೈನಿಕರು ಸಿಂಹದಂತೆ, ಆರ್ಭಟಿಸುತಿಹರವರು ಪ್ರಾಯದ ಸಿಂಹಗಳಂತೆ, ಗುರುಗುಟ್ಟುತಿಹರು ಬೇಟೆ ಹಿಡಿದ ಕೇಸರಿಯಂತೆ. ಅದನ್ನೆತ್ತಿಕೊಂಡು ಓಡುತಿಹರು, ಬಿಡಿಸುವರಾರೂ ಇಲ್ಲದಂತೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್29 ಶತ್ರುಗಳು ಆರ್ಭಟಿಸುವರು, ಆ ಆರ್ಭಟವು ಪ್ರಾಯದ ಸಿಂಹಗಳ ಗರ್ಜನೆಯಂತಿರುವುದು. ಶತ್ರುಗಳು ಹೂಂಕರಿಸುತ್ತಾ ತಮ್ಮೊಂದಿಗೆ ಯುದ್ಧ ಮಾಡುತ್ತಿರುವವರನ್ನು ಹಿಡಿದುಬಿಡುವರು. ಜನರು ಹೋರಾಡಿ ಪಾರಾಗಲು ಪ್ರಯತ್ನಿಸುವರು. ಆದರೆ ಅವರನ್ನು ರಕ್ಷಿಸುವವರು ಯಾರೂ ಇರುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಅವರ ಗರ್ಜನೆಯು ಸಿಂಹ ಆರ್ಭಟಿಸಿದಂತಿದೆ. ಪ್ರಾಯದ ಸಿಂಹ ಆರ್ಭಟಿಸಿದಂತಿದೆ. ಹೌದು, ಗರ್ಜಿಸುತ್ತಾ ಬೇಟೆಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ, ಅದನ್ನು ಬಿಡಿಸುವವನು ಒಬ್ಬನೂ ಇಲ್ಲ. ಅಧ್ಯಾಯವನ್ನು ನೋಡಿ |
ಆಹಾ, ಒಬ್ಬನು ಸಿಂಹದೋಪಾದಿಯಲ್ಲಿ ಯೊರ್ದನಿನ ದಟ್ಟಡವಿಯಿಂದ [ಎದೋಮ್ಯರಿಗೆ] ನಿತ್ಯನೆಲೆಯಾದ ಗೋಮಾಳಕ್ಕೆ ಏರಿಬರುವನು; ಕ್ಷಣಮಾತ್ರದಲ್ಲಿ ನಾನು ಅವರನ್ನು ಅಲ್ಲಿಂದ ಓಡಿಸಿಬಿಡುವೆನು; ನಾನು ಆರಿಸಿಕೊಂಡವನನ್ನೇ ಅದನ್ನು ಕಾಯುವದಕ್ಕೆ ನೇವಿುಸುವೆನು; ನನ್ನ ಸಮಾನನು ಯಾವನು? ನನ್ನನ್ನು ನ್ಯಾಯವಿಚಾರಣೆಗೆ ಯಾವನು ಕರೆದಾನು? ಮಂದೆಯನ್ನು ಕಾಯುವ ಯಾವನು ನನ್ನೆದುರಿಗೆ ನಿಲ್ಲಬಲ್ಲನು?
ಯೆಹೋವನು ನನಗೆ ಹೀಗೆ ಹೇಳಿದ್ದಾನೆ - ಸಿಂಹವು, ಪ್ರಾಯದ ಸಿಂಹವು, ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ ಕಾವಲುಗಾರನ ಕೂಗನ್ನು ಕೇಳಿ ಬಹುಮಂದಿ ಕುರುಬರು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ ಅದು ಅವರ ಕೂಗಾಟಕ್ಕೆ ಹೆದರದೆ ಅವರ ಗದ್ದಲದಿಂದ ಹೇಗೆ ಧೈರ್ಯಗುಂದುವದಿಲ್ಲವೋ ಹಾಗೆಯೇ ಸೇನಾಧೀಶ್ವರನಾದ ಯೆಹೋವನು ಯುದ್ಧಮಾಡಲು ಚೀಯೋನ್ ಪರ್ವತದ ಶಿಖರದ ಮೇಲೆ ಇಳಿಯುವನು.