ಯೆಶಾಯ 5:24 - ಕನ್ನಡ ಸತ್ಯವೇದವು J.V. (BSI)24 ಅವರು ಸೇನಾಧೀಶ್ವರನಾದ ಯೆಹೋವನ ಉಪದೇಶವನ್ನು ನಿರಾಕರಿಸಿ ಇಸ್ರಾಯೇಲ್ಯರ ಸದಮಲಸ್ವಾವಿುಯ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು ಒಣಕೂಳೆಯನ್ನು ನುಂಗಿಬಿಡುವ ಹಾಗೂ ಒಣಹುಲ್ಲು ಬೆಂಕಿಯಲ್ಲಿ ಕುಗ್ಗುವಂತೆಯೂ ಅವರ ಬೇರು ಕೊಳೆತು ಅವರ ಹೂವು ದೂಳಾಗಿ ತೂರಿಹೋಗುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಅವರು ಸೇನಾಧೀಶ್ವರನಾದ ಯೆಹೋವನ ಉಪದೇಶವನ್ನು ನಿರಾಕರಿಸಿ, ಇಸ್ರಾಯೇಲರ ಸದಮಲಸ್ವಾಮಿಯ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು ಒಣಕೊಳೆಯನ್ನು ನುಂಗಿಬಿಡುವಂತೆಯೂ, ಒಣಹುಲ್ಲು ಬೆಂಕಿಯಲ್ಲಿ ಸುಟ್ಟುಬಿಡುವಂತೆಯೂ, ಅದರ ಬೇರು ಕೊಳೆತು ಹೋಗುವಂತೆಯೂ, ಅದರ ಚಿಗುರು ಧೂಳಿನಂತೆಯೂ ತೂರಿ ಹೋಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24 ಹೀಗಿರಲು, ಒಣಗಿದ ಕಳೆಯನ್ನು ಅಗ್ನಿಜ್ವಾಲೆ ಕಬಳಿಸುವಂತೆ, ಒಣಹುಲ್ಲು ಬೆಂಕಿಯಲ್ಲಿ ಬೂದಿಯಾಗುವಂತೆ, ಅವರ ಬೇರು ಕೊಳೆತುಹೋಗುವುದು. ಅವರ ಹೂ ಧೂಳಿನಂತೆ ತೂರಿಹೋಗುವುದು. ಏಕೆಂದರೆ, ಅವರು ಸೇನಾಧೀಶ್ವರಸ್ವಾಮಿಯ ಉಪದೇಶವನ್ನು ನಿರಾಕರಿಸಿದ್ದಾರೆ. ಇಸ್ರಯೇಲಿನ ಪರಮಪಾವನ ಸ್ವಾಮಿಯ ವಾಕ್ಯವನ್ನು ಅಸಡ್ಡೆಮಾಡಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ಆದ್ದರಿಂದ ಅವರಿಗೆ ಕೇಡುಗಳಾಗುವವು. ಅವರ ಸಂತತಿಯವರು ತರಗೆಲೆಯೂ ಹುಲ್ಲೂ ಬೆಂಕಿಯಲ್ಲಿ ಸುಟ್ಟುಹೋಗುವಂತೆ ನಾಶವಾಗುವರು. ಅವರ ಸಂತತಿಯವರು ಸತ್ತು ಧೂಳಾಗುವ ಬೇರಿನಂತೆ ನಾಶವಾಗುವರು. ಬೆಂಕಿಯಲ್ಲಿ ಸುಟ್ಟುಹೋದ ಹೂವಿನ ಬೂದಿಯು ಗಾಳಿಯಲ್ಲಿ ಹಾರಿಹೋಗುವಂತೆ ಅವರ ಸಂತತಿಯವರು ನಾಶವಾಗುವರು. ಅವರು ಸರ್ವಶಕ್ತನಾದ ಯೆಹೋವನ ಬೋಧನೆಗಳನ್ನು ಅನುಸರಿಸಲು ನಿರಾಕರಿಸಿದ್ದಾರೆ. ಇಸ್ರೇಲಿನ ಪರಿಶುದ್ಧನ ವಾಕ್ಯವನ್ನು ಅವರು ದ್ವೇಷಿಸುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಏಕೆಂದರೆ ಅವರು ಸೇನಾಧೀಶ್ವರ ಯೆಹೋವ ದೇವರ ನಿಯಮವನ್ನು ನಿರಾಕರಿಸಿದ್ದರಿಂದಲೂ, ಇಸ್ರಾಯೇಲಿನ ಪರಿಶುದ್ಧರ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದಲೂ ಬೆಂಕಿಯು ಕೊಳ್ಳಿಯನ್ನು ನುಂಗಿ ಬಿಡುವ ಹಾಗೆಯೂ, ಜ್ವಾಲೆಯು ಒಣಹುಲ್ಲನ್ನು ಸುಟ್ಟುಬಿಡುವಂತೆಯೂ, ಅದರ ಬೇರು ಕೊಳೆಯುವಂತೆಯೂ, ಚಿಗುರು ಅದರ ಧೂಳಿನಂತೆಯೂ ಏರಿ ಹೋಗುವುವು. ಅಧ್ಯಾಯವನ್ನು ನೋಡಿ |