Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 46:7 - ಕನ್ನಡ ಸತ್ಯವೇದವು J.V. (BSI)

7 ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರಗದು, ಒಬ್ಬನು ಕೂಗಿಕೊಂಡರೂ ಉತ್ತರಕೊಟ್ಟು ಕಷ್ಟದಿಂದ ಅವನನ್ನು ಬಿಡಿಸಲಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅವರು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರುಗದು. ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರಕೊಡಲಾರದು. ಇಲ್ಲವೆ ಅವನನ್ನು ಕಷ್ಟದಿಂದ ಬಿಡಿಸಲಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಅದನ್ನು ಮೆರವಣಿಗೆ ಮಾಡುತ್ತಾರೆ ಹೊತ್ತು ಹೆಗಲಮೇಲೆ ಪ್ರತಿಷ್ಠಾಪನೆ ಮಾಡುತ್ತಾರೆ ಇಟ್ಟು ಪೀಠದ ಮೇಲೆ. ಕೂಗಿಕೊಂಡರೂ ಜರುಗದದು ಅಲ್ಲಿಂದ ಉತ್ತರಿಸಿ ಬಿಡಿಸದು ಯಾರನ್ನು ಕಷ್ಟದಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಅವರು ಆ ವಿಗ್ರಹವನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರುತ್ತಾರೆ. ಆ ಸುಳ್ಳುದೇವರುಗಳು ನಿಷ್ಪ್ರಯೋಜಕವಾಗಿವೆ. ಜನರೇ ಅವುಗಳನ್ನು ಹೊತ್ತುಕೊಳ್ಳಬೇಕು. ಜನರು ಅವುಗಳನ್ನು ನೆಲದ ಮೇಲೆ ಇಟ್ಟಾಗ ಅವು ಅಲ್ಲಾಡುವದಿಲ್ಲ. ತಮ್ಮ ಸ್ಥಳದಿಂದ ಆ ಸುಳ್ಳುದೇವರುಗಳು ಎದ್ದುಹೋಗುವದಿಲ್ಲ. ಜನರು ಅದರ ಮುಂದೆ ಕೂಗಿಕೊಂಡರೂ ಅವು ಕೇಳಿಸಿಕೊಳ್ಳುವದಿಲ್ಲ. ಆ ಸುಳ್ಳುದೇವರುಗಳು ಕೇವಲ ವಿಗ್ರಹಗಳಷ್ಟೇ. ಅವು ಜನರನ್ನು ಅವರ ಕಷ್ಟಗಳಿಂದ ಬಿಡಿಸಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅವರು ಅದನ್ನು ತಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅದರ ಸ್ಥಳದಿಂದ ಜರುಗದು. ಹೌದು, ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರ ಕೊಡಲಾರದು ಇಲ್ಲವೆ ಅವನನ್ನು ಕಷ್ಟದಿಂದ ರಕ್ಷಿಸಲಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 46:7
21 ತಿಳಿವುಗಳ ಹೋಲಿಕೆ  

ತಪ್ಪಿಸಿಕೊಂಡ ಅನ್ಯಜನರೇ, ನೆರೆದು ಬನ್ನಿರಿ, ಒಟ್ಟಿಗೆ ಸಮೀಪಿಸಿರಿ! ತಮ್ಮ ಮರದ ಬೊಂಬೆಯನ್ನು ಹೊತ್ತುಕೊಂಡು ರಕ್ಷಿಸಲಾರದ ಆ ದೇವರಿಗೆ ಬಿನ್ನಯಿಸುವವರು ಏನೂ ತಿಳಿಯದವರಾಗಿದ್ದಾರೆ.


ಇಂಥಾ ಬೊಂಬೆಗಳು ಸೌತೆಯ ತೋಟದ ಬೆದರುಗಂಬದಂತಿವೆ, ಮಾತಾಡಲಾರವು; ಹೊತ್ತುಕೊಂಡುಹೋಗಬೇಕು, ನಡೆಯಲಾರವು. ಅವುಗಳಿಗೆ ಅಂಜಬೇಡಿರಿ, ಕೇಡುಮಾಡಲಾರವು, ಮೇಲುಮಾಡಲಿಕ್ಕೂ ಅವುಗಳಿಗೆ ಸಾಮರ್ಥ್ಯವಿಲ್ಲ.


ಬೇಲ್ ದೇವತೆಯು ಬೊಗ್ಗಿದೆ, ನೆಬೋದೇವತೆಯು ಕುಗ್ಗಿದೆ, ಅವುಗಳ ಬೊಂಬೆಗಳು ದನ ಮೊದಲಾದವುಗಳ ಮೇಲೆ ಹೊರಿಸಲ್ಪಟ್ಟಿವೆ, ನೀವು ಮೆರವಣಿಗೆಯಾಗಿ ಹೊರುತ್ತಿದ್ದವುಗಳು ಪಶುಗಳಿಗೆ ಭಾರವಾದ ಹೊರೆಯಾಗಿ ಅವುಗಳನ್ನು ಬಳಲಿಸಿವೆ.


ಆಗ ನಾವಿಕರು ಹೆದರಿ ತಮ್ಮ ತಮ್ಮ ದೇವರುಗಳಿಗೆ ಮೊರೆಯಿಟ್ಟು ತಮ್ಮ ಕಷ್ಟವು ಕಡಿಮೆಯಾಗುವ ಹಾಗೆ ಹಡಗಿನ ಸಾಮಾನುಗಳನ್ನು ಸಮುದ್ರಕ್ಕೆ ಬಿಸಾಟುಬಿಟ್ಟರು. ಇಷ್ಟರೊಳಗೆ ಯೋನನು ಹಡಗಿನ ಒಳಭಾಗಕ್ಕೆ ಇಳಿದು ಮಲಗಿಕೊಂಡಿದ್ದನು; ಗಾಢನಿದ್ರೆ ಹತ್ತಿತ್ತು.


ರಾಜನಾದ ನೆಬೂಕದ್ನೆಚ್ಚರನು ಅರುವತ್ತು ಮೊಳ ಎತ್ತರದ ಆರು ಮೊಳ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ ಬಾಬೆಲ್ ಸಂಸ್ಥಾನದ ದೂರಾ ಎಂಬ ಬೈಲಿನಲ್ಲಿ ನಿಲ್ಲಿಸಿದನು.


ಯೆಹೂದವೇ, ನೀನು ನಿರ್ಮಿಸಿಕೊಂಡ ದೇವರುಗಳು ಎಲ್ಲಿ? ನಿನಗೆ ಕೇಡು ಸಂಭವಿಸಿದಾಗ ನಿನ್ನನ್ನುದ್ಧರಿಸಲು ಶಕ್ತರಾದರೆ ಏಳಲಿ! ನಿನ್ನ ಪಟ್ಟಣಗಳೆಷ್ಟೋ, ನಿನ್ನ ದೇವರುಗಳೂ ಅಷ್ಟು.


ಆಗ ಎಲೀಯನು ಅವರಿಗೆ - ಬಾಳನ ಪ್ರವಾದಿಗಳೆಲ್ಲರನ್ನೂ ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು ಎಂದು ಆಜ್ಞಾಪಿಸಲು ಅವರು ಹಿಡಿದರು. ಅವನು ಅವರನ್ನು ಕೀಷೋನ್‍ಹಳ್ಳಕ್ಕೆ ಒಯ್ದು ಅಲ್ಲಿ ಕೊಲ್ಲಿಸಿದನು.


ಅವರು ತರಲ್ಪಟ್ಟ ಹೋರಿಗಳಲ್ಲೊಂದನ್ನು ತೆಗೆದುಕೊಂಡು ಸಿದ್ಧಪಡಿಸಿ ತಮ್ಮ ದೇವರಾದ ಬಾಳನ ಹೆಸರು ಹೇಳಿ - ಬಾಳನೇ, ನಮಗೆ ಕಿವಿಗೊಡು ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರೂ ಆಕಾಶವಾಣಿಯಾಗಲಿಲ್ಲ; ಅವರು ವೇದಿಯ ಸುತ್ತಲು ಕುಣಿದಾಡಿದರೂ ಯಾರೂ ಉತ್ತರ ದಯಪಾಲಿಸಲಿಲ್ಲ.


ಅಷ್ಡೋದಿನವರು ಮರುದಿನ ಬೆಳಿಗ್ಗೆ ಎದ್ದು ನೋಡಲಾಗಿ ದಾಗೋನ್ ವಿಗ್ರಹವು ಯೆಹೋವನ ಮಂಜೂಷದ ಮುಂದೆ ಬೋರಲಬಿದ್ದಿರುವದನ್ನು ಕಂಡು ಅದನ್ನು ಎತ್ತಿ ತಿರಿಗಿ ಅದರ ಸ್ಥಳದಲ್ಲಿಟ್ಟರು.


ಅವನು ಒಂದು ದಿವಸ ಗುಡಿಗೆ ಹೋಗಿ ತನ್ನ ದೇವರಾದ ನಿಸ್ರೋಕನನ್ನು ಆರಾಧಿಸುತ್ತಿರುವಾಗ ಅದ್ರಮ್ಮೆಲೆಕ್, ಸರೆಚೆರ್ ಎಂಬ ಅವನ ಮಕ್ಕಳು ಅವನನ್ನು ಕತ್ತಿಯಿಂದ ಕೊಂದು ಅರರಾಟ್ ದೇಶಕ್ಕೆ ಓಡಿಹೋದರು. ಅವನಿಗೆ ಬದಲಾಗಿ ಅವನ ಮಗನಾದ ಏಸರ್‍ಹದ್ದೋನನು ಅರಸನಾದನು.


ನೀವು ಅಜ್ಞಾನಿಗಳಾಗಿದ್ದಾಗ ನಿಮಗೆ ಪ್ರೇರಣೆಯಾದ ಹಾಗೆ ಮೂಕ ವಿಗ್ರಹಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ.


[ಇಂಥದನ್ನು ದೇವರಿಗೆ] ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳಲಾರದ ಬಡವನು ಹುಳಿತುಹೋಗದ ಮರವನ್ನು ಹುಡುಕಿ ಅಲುಗದ ವಿಗ್ರಹವನ್ನು ಮಾಡಿಸಲು ಕುಶಲನನ್ನು ವಿಚಾರಿಸಿಕೊಳ್ಳುವನು.


ಬೆಸಿಗೆ ಚೆನ್ನಾಗಿದೆ ಎಂದು ಹೇಳಿ ಶಿಲ್ಪಿಯು ಎರಕದವನನ್ನೂ ಸುತ್ತಿಗೆಯಿಂದ ಸಮತಟ್ಟುವವನು ಅಡಿಗಲ್ಲಿನ ಮೇಲೆ ಕುಟ್ಟುವವನನ್ನೂ ಪ್ರೋತ್ಸಾಹಗೊಳಿಸಿದರು; ವಿಗ್ರಹವನ್ನು ಅಲುಗದಂತೆ ಮೊಳೆಗಳಿಂದ ಬಿಗಿದರು.


ನಾನು ನೋಡಲು ಇವರಲ್ಲಿ ಸಮರ್ಥರು ಯಾರೂ ಇಲ್ಲ; ನಾನು ಪ್ರಶ್ನೆಮಾಡಿದರೆ ಒಂದು ಮಾತನ್ನಾದರೂ ಹೇಳಬಲ್ಲ ಆಲೋಚಕನು ಇಲ್ಲವೇ ಇಲ್ಲ.


ಕಮ್ಮಾರನು ಮುಟ್ಟನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸಮಾಡುತ್ತಾ ಚಮಟಿಕೆಗಳಿಂದ ಬಡಿದು ತೋಳಿನ ಬಲದಿಂದ ವಿಗ್ರಹವನ್ನು ರೂಪಿಸುವನು; ಅವನೂ ಹಸಿದು ಬಳಲುವನು, ನೀರಿಲ್ಲದೆ ಕಂಗೆಡುವನು.


ನೀನು ಪ್ರಯಾಸಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಬಾಲ್ಯದಿಂದ ನಿನ್ನಲ್ಲಿ ವ್ಯಾಪಾರಮಾಡಿದವರೆಲ್ಲರೂ ಚದರಿ ತಮ್ಮ ತಮ್ಮ ಪ್ರಾಂತಕ್ಕೆ ಹೋಗಿಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.


ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಾ ಇದ್ದರು. ಆದರೂ ಆಕಾಶವಾಣಿಯಾಗಲಿಲ್ಲ; ಯಾವನೂ ಅವರಿಗೆ ಉತ್ತರಕೊಡಲಿಲ್ಲ, ಅವರನ್ನು ಲಕ್ಷಿಸಲಿಲ್ಲ.


ಆಹಾ, ಇವರೆಲ್ಲಾ ಮಾಯೆ, ಇವರ ಕಾರ್ಯಗಳು ಶೂನ್ಯ, ಇವರ ಎರಕದ ಬೊಂಬೆಗಳು ಗಾಳಿಯೇ, ಹಾಳೇ!


ಆಗ ಯೆಹೂದದ ಪಟ್ಟಣಗಳವರೂ ಯೆರೂಸಲೇವಿುನ ನಿವಾಸಿಗಳೂ ಯಾವ ದೇವತೆಗಳಿಗೆ ಹೋಮಮಾಡಿದರೋ ಅವುಗಳನ್ನು ಮರೆಹೊಕ್ಕು ಕೂಗಿಕೊಳ್ಳುವರು, ಆದರೆ ಅಂಥ ಕೇಡಿನ ಕಾಲದಲ್ಲಿ ಅವುಗಳಿಂದ ಅವರಿಗೆ ಎಷ್ಟು ಮಾತ್ರವೂ ರಕ್ಷಣೆಯಾಗುವದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು