Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 46:6 - ಕನ್ನಡ ಸತ್ಯವೇದವು J.V. (BSI)

6 ಚೀಲದಿಂದ ಚಿನ್ನವನ್ನು ಸುರಿದು ತ್ರಾಸಿನಲ್ಲಿ ಬೆಳ್ಳಿಯನ್ನು ತೂಗಿ ಅಕ್ಕಸಾಲಿಗನಿಗೆ ಕೊಟ್ಟು ಕೂಲಿಗೊತ್ತುಮಾಡಿ ದೇವರನ್ನು ಮಾಡಿಸಿ ಅದಕ್ಕೆ ಎರಗಿ ಪೂಜೆಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಚೀಲದಿಂದ ಚಿನ್ನವನ್ನು ಸುರಿದು, ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗಿ, ಅಕ್ಕಸಾಲಿಗನಿಗೆ ಕೊಟ್ಟು ಕೂಲಿಯನ್ನು ಗೊತ್ತುಮಾಡಿದಾಗ, ಅವನು ಅದನ್ನು ದೇವರನ್ನಾಗಿ ಮಾಡಲು, ಅವರು ಅದಕ್ಕೆ ಎರಗಿ ಪೂಜೆಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಸುರಿಯುತ್ತಾರೆ ಜನರು ಚಿನ್ನವನ್ನು ಚೀಲದಿಂದ ತೂಗಿ ತೂಕಹಾಕುತ್ತಾರೆ ಬೆಳ್ಳಿಯನ್ನು ತಕ್ಕಡಿಯಿಂದ. ದೇವರನ್ನು ಮಾಡಿಸುತ್ತಾರೆ ಕೂಲಿಕೊಟ್ಟು ಅಕ್ಕಸಾಲಿಗನಿಂದ ಪೂಜಿಸುತ್ತಾರೆ ಅದನ್ನು ಸಾಷ್ಟಾಂಗ ನಮಸ್ಕಾರದಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಕೆಲವರು ಬೆಳ್ಳಿಬಂಗಾರಗಳಲ್ಲಿ ಐಶ್ವರ್ಯವಂತರಾಗಿದ್ದಾರೆ. ಅವರ ಕೈಚೀಲಗಳಿಂದ ಬಂಗಾರವು ಉದುರುತ್ತವೆ, ಅವರು ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗುತ್ತಾರೆ; ಕುಶಲಕರ್ಮಿಗಳಿಗೆ ಹಣಕೊಟ್ಟು ಮರದಿಂದ ವಿಗ್ರಹವನ್ನು ಮಾಡಿಸಿಕೊಳ್ಳುತ್ತಾರೆ. ಆಮೇಲೆ ಅವರು ಆ ವಿಗ್ರಹಕ್ಕೆ ಅಡ್ಡಬಿದ್ದು ಪೂಜೆ ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಚೀಲದಿಂದ ಚಿನ್ನವನ್ನು ಸುರಿದು, ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗಿ, ಅಕ್ಕಸಾಲಿಗನಿಗೆ ಕೂಲಿ ಕೊಟ್ಟಾಗ, ಅವನು ಅದನ್ನು ದೇವರನ್ನಾಗಿ ಮಾಡಲು, ಅವರು ಅದಕ್ಕೆ ಎರಗಿ ಪೂಜೆ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 46:6
21 ತಿಳಿವುಗಳ ಹೋಲಿಕೆ  

ನಾವು ದೇವರ ಸಂತಾನದವರಾಗಿದ್ದ ಮೇಲೆ ದೈವವು ಮನುಷ್ಯನ ಶಿಲ್ಪವಿದ್ಯೆಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲುಗಳಿಗೆ ಸಮಾನವೆಂದು ನಾವು ಭಾವಿಸಬಾರದು.


ಎಲ್ಲರೂ ತಿಳುವಳಿಕೆಯಿಲ್ಲದೆ ಪಶುಪ್ರಾಯರಾಗಿದ್ದಾರೆ; ತಾನು ಕೆತ್ತಿದ ವಿಗ್ರಹದ ನಿವಿುತ್ತ ಪ್ರತಿಯೊಬ್ಬ ಅಕ್ಕಸಾಲಿಗನೂ ಅವಮಾನಕ್ಕೆ ಗುರಿಯಾಗುವನು; ಅವನು ಎರಕ ಹೊಯ್ದ ಪುತ್ತಳಿಯು ಸುಳ್ಳು, ಅವುಗಳಲ್ಲಿ ಶ್ವಾಸವೇ ಇಲ್ಲ.


ಬೆಳ್ಳಿಯ ತಗಡುಗಳು ತಾರ್ಷೀಷಿನಿಂದಲೂ ಕೆತ್ತನೆಗಾರನ ಮತ್ತು ಎರಕದವನ ಕೈಕೆಲಸವಾದ ಚಿನ್ನವು ಊಫಜಿನಿಂದಲೂ ಸಾಗಿಬರುತ್ತವೆ; ನೀಲಧೂಮ್ರವಸ್ತ್ರಗಳು ಅವುಗಳ ಉಡುಪಾಗಿವೆ; ಇವೆಲ್ಲಾ ಕುಶಲರ ಕೌಶಲ್ಯ.


ಇವರ ದೇಶವು ವಿಗ್ರಹಗಳಿಂದಲೂ ತುಂಬಿದೆ, ತಮ್ಮ ಕೈಯಿಂದಲೇ, ತಮ್ಮ ಬೆರಳುಗಳಿಂದಲೇ ಮಾಡಿದ ಕೆಲಸಕ್ಕೆ ನಮಸ್ಕರಿಸುತ್ತಾರೆ.


ಬಹಳವಾಗಿ ಆಲೋಚಿಸಿ ಕಡೆಯಲ್ಲಿ ಬಂಗಾರದ ಎರಡು ಬಸವ ಮೂರ್ತಿಗಳನ್ನು ಮಾಡಿಸಿ ಇಸ್ರಾಯೇಲ್ಯರಿಗೆ - ನೀವು ಜಾತ್ರೆಗಾಗಿ ಯೆರೂಸಲೇವಿುಗೆ ಹೋದದ್ದು ಸಾಕಾಯಿತು; ಇಗೋ, ನಿಮ್ಮನ್ನು ಐಗುಪ್ತದಿಂದ ಕರತಂದ ದೇವರುಗಳು ಇಲ್ಲಿರುತ್ತವೆ ಎಂದು ಹೇಳಿ


ತಪ್ಪಿಸಿಕೊಂಡ ಅನ್ಯಜನರೇ, ನೆರೆದು ಬನ್ನಿರಿ, ಒಟ್ಟಿಗೆ ಸಮೀಪಿಸಿರಿ! ತಮ್ಮ ಮರದ ಬೊಂಬೆಯನ್ನು ಹೊತ್ತುಕೊಂಡು ರಕ್ಷಿಸಲಾರದ ಆ ದೇವರಿಗೆ ಬಿನ್ನಯಿಸುವವರು ಏನೂ ತಿಳಿಯದವರಾಗಿದ್ದಾರೆ.


ಕೆತ್ತಿದ ನಿಮ್ಮ ವಿಗ್ರಹಗಳ ಬೆಳ್ಳಿಯ ಕವಚಗಳನ್ನೂ ಎರಕದ ನಿಮ್ಮ ಬೊಂಬೆಗಳ ಬಂಗಾರದ ಮುಲಾಮನ್ನೂ ನೀವು ಹೊಲಸು ಮಾಡಿ ಆ ವಿಗ್ರಹಗಳನ್ನು - ತೊಲಗಿ ಎಂದು ಹೊಲೆಯಂತೆ ಬಿಸಾಟುಬಿಡುವಿರಿ.


ಬೇಗೆಯು ಅವರ ನೀರನ್ನೆಲ್ಲಾ ಹೀರಲಿ! ಅದು ಬತ್ತಿಹೋಗುವದು. ಅದು ಬೊಂಬೆಗಳಿಂದ ತುಂಬಿದ ದೇಶ, ಅದರ ಜನರು ಅಕಟವಿಕಟ ವಿಗ್ರಹಗಳ ಪೂಜೆಯಿಂದ ಮದವೇರಿಸಿಕೊಳ್ಳುತ್ತಾರಷ್ಟೆ;


ರಾಜನಾದ ನೆಬೂಕದ್ನೆಚ್ಚರನು ಅರುವತ್ತು ಮೊಳ ಎತ್ತರದ ಆರು ಮೊಳ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ ಬಾಬೆಲ್ ಸಂಸ್ಥಾನದ ದೂರಾ ಎಂಬ ಬೈಲಿನಲ್ಲಿ ನಿಲ್ಲಿಸಿದನು.


ಈಗ ಎಫ್ರಾಯೀಮ್ಯರು ಹೆಚ್ಚೆಚ್ಚಾಗಿ ಪಾಪಮಾಡುತ್ತಾರೆ, ತಮ್ಮ ಬೆಳ್ಳಿಯಿಂದ ಸ್ವಬುದ್ಧಿಗೆ ತಕ್ಕ ಎರಕದ ಬೊಂಬೆಗಳನ್ನು ರೂಪಿಸಿಕೊಂಡಿದ್ದಾರೆ; ಅವೆಲ್ಲಾ ಶಿಲ್ಪಿಗಳ ಕೈಕೆಲಸವೇ; ಇಂಥವುಗಳನ್ನು ಮಾತಾಡಿಸುತ್ತಾರೆ, ಮನುಷ್ಯರಾದ ಪೂಜಾರಿಗಳು ಪಶುವಿನ ಮೂರ್ತಿಗಳನ್ನು ಮುದ್ದಿಸುತ್ತಾರೆ.


ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೆ ಬಿಟ್ಟುಹೋಗಿ ತಮಗೆ ಲೋಹದ ಬಸವನನ್ನು ಮಾಡಿಸಿಕೊಂಡು ಅದಕ್ಕೆ ಅಡ್ಡಬಿದ್ದು ಯಜ್ಞಗಳನ್ನು ಅರ್ಪಿಸಿ - ಇಸ್ರಾಯೇಲ್ಯರೇ, ನೋಡಿರಿ; ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರಕೊಂಡು ಬಂದ ದೇವರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದನು.


ಕೈಯುಂಟು, ಮುಟ್ಟುವದಿಲ್ಲ; ಕಾಲುಂಟು ನಡೆಯುವದಿಲ್ಲ; ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು