ಯೆಶಾಯ 46:3 - ಕನ್ನಡ ಸತ್ಯವೇದವು J.V. (BSI)3 ಯಾಕೋಬವಂಶವೇ, ಇಸ್ರಾಯೇಲ್ ಸಂತಾನಶೇಷವೇ, ನನ್ನ ಮಾತಿಗೆ ಕಿವಿಗೊಡಿರಿ; ನಿಮ್ಮನ್ನು ಗರ್ಭದಿಂದ ಹೊರುತ್ತಿದ್ದೇನೆ, ಹುಟ್ಟಿದಂದಿನಿಂದ ವಹಿಸುತ್ತಿದ್ದೇನೆ; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಯಾಕೋಬವಂಶವೇ, ಇಸ್ರಾಯೇಲ್ ಮನೆತೆನದವರಲ್ಲಿ ಉಳಿದ ಸಂತಾನವೇ, ನಿಮ್ಮನ್ನು ಗರ್ಭದಿಂದ ಹೊತ್ತು, ಹುಟ್ಟಿದಂದಿನಿಂದ ಪಾಲಿಸುತ್ತಿದ್ದ ನನ್ನ ಮಾತಿಗೆ ಕಿವಿಗೊಡಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 “ಕಿವಿಗೊಡು, ಓ ಯಕೋಬ ಮನೆತನವೆ, ಅಳಿದುಳಿದಾ ಇಸ್ರಯೇಲಿನ ಮನೆತನವೆ, ಹೊರುತ್ತಿರುವೆ ನಿಮ್ಮನು ಗರ್ಭದಿಂದ ಸಾಕಿ ಸಲಹುತ್ತಿರುವೆ ಹುಟ್ಟಿದಂದಿನಿಂದ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 “ಯಾಕೋಬನ ವಂಶದವರೇ, ನನ್ನ ಮಾತನ್ನು ಕೇಳಿರಿ. ಇಸ್ರೇಲರಲ್ಲಿ ಉಳಿದಿರುವವರೇ, ನನ್ನ ಮಾತುಗಳನ್ನು ಕೇಳಿರಿ. ನಾನು ನಿಮ್ಮನ್ನು ಹೊರುತ್ತಿದ್ದೇನೆ. ನೀವು ತಾಯಿಯ ಗರ್ಭದಲ್ಲಿರುವಾಗಲೇ ನಾನು ನಿಮ್ಮನ್ನು ಹೊರುತ್ತಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಯಾಕೋಬನ ಮನೆತನದವರೇ, ಇಸ್ರಾಯೇಲ್ ಮನೆತನದಲ್ಲಿ ಉಳಿದಿರುವವರೇ, ನಿಮ್ಮನ್ನು ಗರ್ಭದಲ್ಲಿ ಹೊತ್ತು, ಹುಟ್ಟಿದಂದಿನಿಂದ ಪಾಲಿಸುತ್ತಿದ್ದಾತನ ಮಾತನ್ನು ಕೇಳಿರಿ. ಅಧ್ಯಾಯವನ್ನು ನೋಡಿ |