ಯೆಶಾಯ 44:8 - ಕನ್ನಡ ಸತ್ಯವೇದವು J.V. (BSI)8 ಹೆದರಬೇಡಿರಿ, ಅಂಜದಿರಿ! ನಾನು ಪೂರ್ವದಿಂದಲೂ ನಿಮಗೆ ಹೇಳಿ ಪ್ರಕಟಿಸಿಕೊಂಡೆನಷ್ಟೆ. ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರಿದ್ದಾನೋ? ಇನ್ನು ಯಾವ ಶರಣನೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಹೆದರಬೇಡಿರಿ, ಭಯಪಡಬೇಡಿರಿ! ನಾನು ಪೂರ್ವದಿಂದಲೂ ನಿಮಗೆ ಹೇಳಿ ಪ್ರಕಟಿಸಿಕೊಂಡೆನಷ್ಟೆ. ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರಿದ್ದಾನೋ? ಇನ್ನು ಯಾವ ಶರಣನೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಹೆದರಬೇಡಿ, ಅಂಜದಿರಿ, ನನ್ನ ಜನರೇ, ನನಗೆ ಸಾಕ್ಷಿಗಳು ನೀವೇ; ಪೂರ್ವಕಾಲದಿಂದ ನಡೆದವುಗಳನು ನಾ ನಿಮಗೆ ಮುಂತಿಳಿಸಿ ಶ್ರುತಪಡಿಸಿಲ್ಲವೆ? ನನ್ನ ಹೊರತು ಬೇರೆ ದೇವನಿರುವನೆ? ನನ್ನ ಹೊರತು ಬೇರೆ ಸೇನಾಧೀಶ್ವರನಿರುವನೆ? ಅಂಥವನಾರೋ ನಾನರಿಯೆ.” ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 “ನೀವು ಭಯಪಡಬೇಡಿ, ಚಿಂತಿಸಬೇಡಿ. ನಾನು ಭವಿಷ್ಯದ ಸಂಭವಗಳನ್ನು ಯಾವಾಗಲೂ ನಿಮಗೆ ತಿಳಿಸುತ್ತಾ ಬಂದಿದ್ದೇನೆ. ನೀವೇ ನನ್ನ ಸಾಕ್ಷಿಗಳು. ನನ್ನ ಹೊರತು ಬೇರೆ ದೇವರುಗಳಿಲ್ಲ. ನನ್ನ ಹೊರತು ಬೇರೆ ಯಾವ ‘ಬಂಡೆ’ಯೂ ಇಲ್ಲ. ನಾನೊಬ್ಬನೇ!” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಹೆದರಬೇಡ, ಇಲ್ಲವೆ ಭಯಪಡಬೇಡ! ನಾನು ಪೂರ್ವದಿಂದಲೂ ನಿಮಗೆ ಹೇಳಲಿಲ್ಲವೋ ಮತ್ತು ಅದನ್ನು ಪ್ರಕಟಿಸಲಿಲ್ಲವೋ? ಅಂತೂ ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರು ಇದ್ದಾನೋ? ಇಲ್ಲ, ಇನ್ನು ಯಾವ ದೇವರೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.” ಅಧ್ಯಾಯವನ್ನು ನೋಡಿ |