Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 44:28 - ಕನ್ನಡ ಸತ್ಯವೇದವು J.V. (BSI)

28 ಮತ್ತು ಕೋರೆಷನ ವಿಷಯವಾಗಿ - ಅವನು ನನ್ನ ಮಂದೆ ಕಾಯುವವನು, ಯೆರೂಸಲೇಮು ಕಟ್ಟಲ್ಪಡಲಿ, ದೇವಸ್ಥಾನದ ಅಸ್ತಿವಾರವು ಹಾಕಲ್ಪಡಲಿ ಎಂದು ಹೇಳಿ ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸತಕ್ಕವನು ಎಂಬದಾಗಿ ಮಾತಾಡುವವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಕೋರೆಷನ ವಿಷಯವಾಗಿ, ‘ಅವನು ನನ್ನ ಮಂದೆಯನ್ನು ಕಾಯುವವನು, ಯೆರೂಸಲೇಮು ಕಟ್ಟಲ್ಪಡಲಿ, ದೇವಸ್ಥಾನದ ಅಸ್ತಿವಾರವು ಹಾಕಲ್ಪಡಲಿ’ ಎಂದು ಹೇಳಿ, ‘ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸತಕ್ಕವನು’” ಎಂಬುದಾಗಿ ಮಾತನಾಡುವವನು ನಾನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಕೋರೆಷನಿಗೆ ಇಂತೆನ್ನುವೆನು ನಾನು : ನನ್ನ ಮಂದೆ ಕಾಯುವವನು ನೀನು ನನ್ನ ಇಷ್ಟಾರ್ಥವನು ನೆರವೇರಿಸುವವನು ನೀನು; 'ಪುನಃ ನಿರ್ಮಾಣವಾಗುವೆ' ಎನ್ನುವೆ ಜೆರುಸಲೇಮಿಗೆ, ನೀನು; ‘ಪುನಃ ನಿನಗೆ ಅಸ್ತಿವಾರ ಹಾಕಿಸುವೆ’ ಎನ್ನುವೆ ಆ ದೇವಾಲಯಕೆ ನೀನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಸೈರಸನಿಗೆ ಯೆಹೋವನು ಹೀಗೆನ್ನುತ್ತಾನೆ, “ನೀನೇ ನನ್ನ ಕುರುಬನು. ನಾನು ಬಯಸುವ ಕಾರ್ಯಗಳನ್ನು ನೀನು ಮಾಡುವೆ. ನೀನು ಜೆರುಸಲೇಮಿಗೆ, ‘ನೀನು ಕಟ್ಟಲ್ಪಡುವೆ’ ಎಂದೂ ದೇವಾಲಯಕ್ಕೆ ‘ನಿನ್ನ ಅಸ್ತಿವಾರವು ಮತ್ತೆ ಹಾಕಲ್ಪಡುವದು’ ಎಂದೂ ಹೇಳುವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಕೋರೆಷನ ವಿಷಯವಾಗಿ ಹೀಗೆ ಹೇಳುವೆನು, ‘ನನ್ನ ಕುರುಬನು, ನನ್ನ ಇಷ್ಟವನ್ನೆಲ್ಲಾ ಪೂರೈಸುವವನು, ಯೆರೂಸಲೇಮಿಗೆ, “ನೀನು ಪುನಃ ನಿರ್ಮಾಣವಾಗುವೆ,” ದೇವಾಲಯಕ್ಕೆ, “ನಿನಗೆ ಅಸ್ತಿವಾರವು ಹಾಕಲಾಗುವುದು,” ಎಂದು ಅನ್ನುವವನೂ ನಾನೇ.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 44:28
23 ತಿಳಿವುಗಳ ಹೋಲಿಕೆ  

ಪಾರಸಿಯ ಅರಸನಾದ ಕೋರೆಷನ ಮೊದಲನೆಯ ವರುಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವದಕ್ಕಾಗಿ ಆ ಪಾರಸಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರಿಸಿದ್ದರಿಂದ ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ ಪತ್ರಗಳಿಂದಲೂ -


ಯೆಹೋವನು ಯಾವನ ಕೈಹಿಡಿದು ಯಾವನೆದುರಿಗೆ ಜನಾಂಗಗಳನ್ನು ತುಳಿದು ರಾಜರ ನಡುಕಟ್ಟನ್ನು ಬಿಚ್ಚಿ ಯಾವನ ಮುಂದೆ ಬಾಗಿಲುಹೆಬ್ಬಾಗಿಲುಗಳನ್ನು ತೆರೆದು ಮುಚ್ಚಲೀಸನೋ ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ -


ಪಾರಸಿಯ ರಾಜನಾದ ಕೋರೆಷನ ಆಳಿಕೆಯ ಮೂರನೆಯ ವರುಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು; ಬಹು ಕಷ್ಟದ ಗಡುವಿನ ಆ ಸಂಗತಿಯು ಸತ್ಯ; ಅವನು ಕಂಡ ಕನಸನ್ನು ಗಮನಿಸಿ ಆ ಸಂಗತಿಯನ್ನು ಮಂದಟ್ಟುಮಾಡಿಕೊಂಡನು.


ನಾನು ಕೋರೆಷನನ್ನು ಧರ್ಮೋದ್ದೇಶದಿಂದ ಉನ್ನತಿಗೆ ತಂದು ನೇವಿುಸಿದ್ದೇನೆ, ಅವನ ಮಾರ್ಗಗಳನ್ನೆಲ್ಲಾ ಸರಾಗಮಾಡುವೆನು; ಅವನು ನನ್ನ ಪಟ್ಟಣವನ್ನು ತಿರಿಗಿ ಕಟ್ಟಿ ಕ್ರಯವನ್ನಾಗಲಿ ಬಹುಮಾನವನ್ನಾಗಲಿ ಕೇಳಿಕೊಳ್ಳದೆ ಸೆರೆಯಾದ ನನ್ನ ಜನರನ್ನು ಬಿಡುಗಡೆ ಮಾಡುವನು ಎಂದು ಸೇನಾಧೀಶ್ವರನಾದ ಯೆಹೋವನು ಅನ್ನುತ್ತಾನೆ.


ಆಗ ಆತನ ಜನರು ಪುರಾತನವಾದ ಮೋಶೆಯ ಕಾಲವನ್ನು ಜ್ಞಾಪಕಮಾಡಿಕೊಂಡು ಹೀಗಂದರು - ತನ್ನ ಜನವೆಂಬ ಮಂದೆಯನ್ನು ಕುರುಬರ ಸಹಿತ ಸಮುದ್ರದೊಳಗಿಂದ ಮೇಲಕ್ಕೆ ಬರಮಾಡಿದಾತನು ಎಲ್ಲಿ?


ಮೂಡಲಿಂದ ಹದ್ದು ಎರಗಲಿ ಎಂದು, ಅಂದರೆ ನನ್ನ ಸಂಕಲ್ಪವನ್ನು ನೆರವೇರಿಸತಕ್ಕವನು ದೂರದೇಶದಿಂದ ಬರಲಿ ಎಂದು ಕೂಗಿದ್ದೇನೆ; ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.


ನಿನ್ನ ಹೆಸರುಹಿಡಿದು ಕರೆಯುವ ನಾನು ಯೆಹೋವನು, ಇಸ್ರಾಯೇಲ್ಯರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಪಾಸ್ತಿಯನ್ನೂ ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು.


ಬೆಟ್ಟಗುಡ್ಡಗಳನ್ನು ನಾಶಪಡಿಸಿ ಅಲ್ಲಿಯ ಮೇವನ್ನೆಲ್ಲಾ ತಾರಿಸಿ ನದಿಗಳನ್ನು ಒಣದಿಣ್ಣೆ ಮಾಡಿ ಕೆರೆಗಳನ್ನು ಬತ್ತಿಸುವೆನು.


ಹೀಗಿರಲು ಪರಜನಾಂಗದ ರಾಯಭಾರಿಗಳಿಗೆ ಏನುತ್ತರ ಕೊಡಬೇಕಂದರೆ ಯೆಹೋವನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ದೀನದರಿದ್ರರು ಅದನ್ನೇ ಆಶ್ರಯಿಸಿಕೊಳ್ಳುವರು ಎಂಬದೇ.


ಪಾರಸಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ - ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನು ಒಪ್ಪಿಸಿ ತನಗೋಸ್ಕರ ಯೆಹೂದದೇಶದ ಯೆರೂಸಲೇವಿುನಲ್ಲಿ ಆಲಯವನ್ನು ಕಟ್ಟಬೇಕೆಂದು ಆಜ್ಞಾಪಿಸಿದ್ದಾನೆ. ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ ಅವರು ಸ್ವದೇಶಕ್ಕೆ ಹೋಗಲಿ; ಅವರ ದೇವರಾದ ಯೆಹೋವನು ಅವರ ಸಂಗಡ ಇರುವನು ಎಂದು ಪ್ರಕಟಿಸಿದನು.


ಪಾರಸಿಯ ಅರಸನಾದ ಕೋರೆಷನ ಮೊದಲನೆಯ ವರುಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವದಕ್ಕಾಗಿ ಆ ಪಾರಸಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರಿಸಿದ್ದರಿಂದ ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ ಪತ್ರಗಳಿಂದಲೂ -


ಪಾರಸಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ - ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನೂ ಕೊಟ್ಟು ತನಗೋಸ್ಕರ ಯೆಹೂದ ದೇಶದ ಯೆರೂಸಲೇವಿುನಲ್ಲಿ ಆಲಯವನ್ನು ಕಟ್ಟಿಸಬೇಕು ಎಂದು ಆಜ್ಞಾಪಿಸಿದ್ದಾನೆ.


ಇಗೋ ನೋಡು ಎನ್ನುವ ಮುಂದೂತನನ್ನು ಚೀಯೋನಿಗೆ, ಶುಭಸಮಾಚಾರ ತರತಕ್ಕವನನ್ನು ಯೆರೂಸಲೇವಿುಗೆ, ಅನುಗ್ರಹಿಸುವೆನು.


ಕುಗ್ಗಿದವಳೇ, ಗಾಳಿಯ ಬಡಿತಕ್ಕೆ ಗುರಿಯಾದವಳೇ, ಯಾರೂ ಸಂತೈಸದವಳೇ, ಇಗೋ, ಇಂದ್ರನೀಲಮಣಿಗಳಿಂದ ನಿನಗೆ ಅಸ್ತಿವಾರವನ್ನು ಹಾಕಿ ನಿನ್ನ ಕಲ್ಲುಗಳನ್ನು ನೀಲಾಂಜನದ ಗಾರೆಯಿಂದ ಕಟ್ಟುವೆನು.


ನಿಮ್ಮ ಸಂತಾನದವರು ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರಿಗಿ ಕಟ್ಟುವರು. ನೀವು ತಲತಲಾಂತರಗಳಿಂದ ಪಾಳುಬಿದ್ದಿರುವ ಅಸ್ತಿವಾರಗಳ ಮೇಲೆ ಕಟ್ಟಡಗಳನ್ನು ಎಬ್ಬಿಸುವಿರಿ; ಬಿದ್ದ ಗೋಡೆಯನ್ನು ಹಾಕುವ ಜನಾಂಗ, ಹಾದಿಗಳನ್ನು ತಿರುಗಾಡುವ ಸ್ಥಿತಿಗೆ ತರುವ ಜನಾಂಗ, ಎಂಬೀ ಬಿರುದುಗಳು ನಿಮಗುಂಟಾಗುವವು.


ಈ ನನ್ನ ಸೃಷ್ಟಿಯನ್ನು ನನಗೆ ಸರಿತೋಚಿದವನಿಗೆ ಕೊಡಬಲ್ಲೆನು; ಈಗ ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನ ಕೈವಶ ಮಾಡಿದ್ದೇನೆ; ಅವನ ಸೇವೆಗಾಗಿ ಭೂಜಂತುಗಳನ್ನೂ ಕೊಟ್ಟಿದ್ದೇನೆ.


ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಕರೆಯಿಸಿ ನಾನು ಮರೆಮಾಡಿಸಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಹಾಕಿಸುವೆನು; ಅವನು ಈ ಕಲ್ಲುಗಳ ಮೇಲೆಯೇ ತನ್ನ ರತ್ನಗಂಬಳಿಯನ್ನು ಹಾಸಿಸುವನು.


ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ ಅವರು ಯೆಹೂದದೇಶದ ಯೆರೂಸಲೇವಿುಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್‍ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ; ಅವರ ದೇವರು ಅವರ ಸಂಗಡ ಇರಲಿ.


ಇಗೋ, ನಾನು ಬಡಗಣ ಜನಾಂಗಗಳನ್ನೆಲ್ಲಾ ಕರೆಯಿಸಿ ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಬರಮಾಡಿ ಇವರೆಲ್ಲರನ್ನು ಈ ದೇಶದ ಮೇಲೂ ಇದರ ನಿವಾಸಿಗಳ ಮೇಲೂ ಸುತ್ತಲಿನ ಸಕಲ ಜನಾಂಗಗಳ ಮೇಲೂ ಬೀಳಿಸಿ ಅವುಗಳನ್ನು ತುಂಬಾ ಹಾಳುಗೈದು ಬೆರಗಿನ ಸಿಳ್ಳಿಗೆ ಗುರಿಪಡಿಸಿ ನಿತ್ಯನಾಶನಕ್ಕೆ ಈಡುಮಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು