ಯೆಶಾಯ 44:16 - ಕನ್ನಡ ಸತ್ಯವೇದವು J.V. (BSI)16 ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದು ಮಾಂಸಭೋಜನಕ್ಕೆ ಅನುಕೂಲಿಸುವದು; ಬಾಡು ಸುಟ್ಟು ಹಸಿವೆ ತೀರಿಸಿಕೊಳ್ಳುವನು; ಮತ್ತು ಕಾಯಿಸಿಕೊಳ್ಳುತ್ತಾ - ಆಹಾ, ಬೆಂಕಿ ಕಂಡೆ; ಬೆಚ್ಚಗಾಯಿತು ಎಂದುಕೊಳ್ಳುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು, ಅದರ ಮೇಲೆ ಮಾಂಸವನ್ನು ಸುಡುವನು. ಅದನ್ನು ತಿಂದು ತೃಪ್ತನಾಗುವನು. ತನ್ನನ್ನು ಕಾಯಿಸಿಕೊಳ್ಳುತ್ತಾ, “ಆಹಾ, ಬೆಂಕಿಯನ್ನು ಕಂಡೆ, ಬೆಚ್ಚಗಾಯಿತು” ಎಂದುಕೊಳ್ಳುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುತ್ತಾನೆ. ಅದು ಮಾಂಸ ಬೇಯಿಸಲಾಗುತ್ತದೆ, ಆ ಸುಟ್ಟ ಮಾಂಸದಿಂದ ಹಸಿವೆ ತೀರಿಸಿಕೊಳ್ಳುತ್ತಾನೆ. ಆ ಬೆಂಕಿಯಿಂದ ಮೈ ಬೆಚ್ಚಗಾಯಿತು,” ಎಂದುಕೊಳ್ಳುತ್ತಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಮರದ ಅರ್ಧಭಾಗವನ್ನು ಬೆಂಕಿಯಲ್ಲಿ ಉರಿಸುವನು; ಆ ಬೆಂಕಿಯಲ್ಲಿ ಮಾಂಸವನ್ನು ಬೇಯಿಸಿ ಹೊಟ್ಟೆತುಂಬಾ ತಿನ್ನುವನು; ಆ ಮರದ ಸೌದೆಯನ್ನು ಸುಟ್ಟು ಚಳಿಕಾಯಿಸಿಕೊಳ್ಳುವನು. ಆಗ ಅವನು, “ಈಗ ನನಗೆ ಬೆಚ್ಚಗಾಯಿತು. ಬೆಂಕಿಯ ಪ್ರಕಾಶದಲ್ಲಿ ನಾನು ನೋಡಬಲ್ಲೆನು!” ಎಂದು ಹೇಳುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು. ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು. ಮಾಂಸವನ್ನು ಸುಟ್ಟು ತೃಪ್ತಿಹೊಂದುವನು. ಅವನು ಚಳಿಕಾಯಿಸಿಕೊಳ್ಳುತ್ತಾ, ಬೆಂಕಿಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು. ಅಧ್ಯಾಯವನ್ನು ನೋಡಿ |