ಯೆಶಾಯ 44:13 - ಕನ್ನಡ ಸತ್ಯವೇದವು J.V. (BSI)13 ಬಡಗಿಯು [ಮರಕ್ಕೆ] ನೂಲು ಹಾಕಿ ಮೊಳೆಯಿಂದ ಗೆರೆಯೆಳೆದು ಉಳಿಬಾಚಿಗಳಿಂದ ಕೆತ್ತಿ ಕೈವಾರದಿಂದ ಗುರುತಿಸಿ ಅದು ಮನೆಯಲ್ಲಿ ವಾಸಿಸತಕ್ಕದ್ದಾಗಲೆಂದು ಮನುಷ್ಯನ ಆಕಾರಕ್ಕೆ ತಂದು ನರನ ಅಂದದಂತೆ ರೂಪಿಸುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಬಡಗಿಯು ಮರಕ್ಕೆ ನೂಲು ಹಾಕಿ ಮೊಳೆಯಿಂದ ಗೆರೆಯೆಳೆದು ಬಾಚಿಗಳಿಂದ ಕೆತ್ತಿ, ಕೈವಾರದಿಂದ ಗುರುತಿಸಿ, ಅದು ಮನೆಯಲ್ಲಿ ವಾಸಿಸತಕ್ಕದ್ದಾಗಲೆಂದು ಮನುಷ್ಯನ ಆಕಾರಕ್ಕೆ ತಂದು ಮನುಷ್ಯನ ಅಂದದಂತೆ ರೂಪಿಸುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಬಡಗಿಯು ಮರಕ್ಕೆ ನೂಲು ಹಿಡಿದು, ಮೊಳೆಯಿಂದ ಗೆರೆ ಎಳೆಯುತ್ತಾನೆ; ಕೈವಾರದಿಂದ ಗುರುತಿಸುತ್ತಾನೆ, ಉಳಿ ಬಾಚಿಗಳಿಂದ ಕೆತ್ತುತ್ತಾನೆ; ಸುಂದರವಾದ ನರನಂತೆ ರೂಪಿಸಿ ಮಂದಿರದಲ್ಲಿ ಇಡಲು ಯೋಗ್ಯವಾಗುವಂತೆ ಮಾಡುತ್ತಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಇನ್ನೊಬ್ಬ ಕುಶಲಕರ್ಮಿಯು ತನ್ನ ನೂಲಿನಿಂದಲೂ ಅಡಿಕೋಲುಗಳಿಂದಲೂ ಮರದ ಮೇಲೆ ಗುರುತು ಮಾಡುವನು. ತಾನು ಎಲ್ಲಿ ಮರವನ್ನು ತುಂಡುಮಾಡಬೇಕೆಂದು ಇದರಿಂದ ಗೊತ್ತುಪಡಿಸಿಕೊಳ್ಳುತ್ತಾನೆ. ಅವನು ತನ್ನ ಉಳಿಗಳಿಂದ ಒಂದು ವಿಗ್ರಹವನ್ನು ಮನುಷ್ಯಾಕಾರದಲ್ಲಿ ಕೆತ್ತುತ್ತಾನೆ. ಈ ವಿಗ್ರಹವು ಬೇರೆ ಏನೂ ಮಾಡದೆ ಮನೆಯೊಳಗೆ ಇಟ್ಟ ಸ್ಥಳದಲ್ಲಿಯೇ ಇರುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಬಡಗಿಯು ಮರಕ್ಕೆ ನೂಲನ್ನು ಹಿಡಿದು, ಮೊಳೆಯಿಂದ ಗೆರೆ ಎಳೆಯುತ್ತಾನೆ. ಉಳಿಬಾಚಿಗಳಿಂದ ಕೆತ್ತುತ್ತಾನೆ. ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾರಕ್ಕೆ ತಂದು, ಮಂದಿರದಲ್ಲಿ ಇಡಲು ಮನುಷ್ಯನ ಅಂದದಂತೆ ರೂಪಿಸುತ್ತಾನೆ. ಅಧ್ಯಾಯವನ್ನು ನೋಡಿ |