Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 41:6 - ಕನ್ನಡ ಸತ್ಯವೇದವು J.V. (BSI)

6 ಒಬ್ಬರಿಗೊಬ್ಬರು ಸಹಾಯಮಾಡಿದರು, ಒಬ್ಬನಿಗೊಬ್ಬನು ಧೈರ್ಯವಾಗಿರು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಒಬ್ಬರಿಗೊಬ್ಬರು ಸಹಾಯಮಾಡಿದರು, ಪ್ರತಿಯೊಬ್ಬನು ತನ್ನ ಸಹೋದರನಿಗೆ, “ಧೈರ್ಯವಾಗಿರು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಸಹಾಯಮಾಡಿದರು ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು ಒಬ್ಬರಿಗೊಬ್ಬರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 “ಕೆಲಸಗಾರರು ಒಬ್ಬರಿಗೊಬ್ಬರು ಸಹಾಯ ಮಾಡುವರು. ಅವರು ಬಲಶಾಲಿಗಳಾಗಬೇಕೆಂದು ಪರಸ್ಪರ ಪ್ರೋತ್ಸಾಹಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಪ್ರತಿಯೊಬ್ಬನು ತನ್ನ ನೆರೆಯವನಿಗೆ ಸಹಾಯ ಮಾಡಲಿ. ಪ್ರತಿಯೊಬ್ಬನು ತನ್ನ ಸಹೋದರನಿಗೆ, “ಧೈರ್ಯವಾಗಿರಿ!” ಎಂದು ಹೇಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 41:6
10 ತಿಳಿವುಗಳ ಹೋಲಿಕೆ  

ಕಮ್ಮಾರನು ಮುಟ್ಟನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸಮಾಡುತ್ತಾ ಚಮಟಿಕೆಗಳಿಂದ ಬಡಿದು ತೋಳಿನ ಬಲದಿಂದ ವಿಗ್ರಹವನ್ನು ರೂಪಿಸುವನು; ಅವನೂ ಹಸಿದು ಬಳಲುವನು, ನೀರಿಲ್ಲದೆ ಕಂಗೆಡುವನು.


ವಿಗ್ರಹವಾದರೋ ಶಿಲ್ಪಿಯು ಅದನ್ನು ಎರಕಹೊಯ್ಯುವನು, ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಬಡಿದು ಬೆಳ್ಳಿಯ ಸರಪಣಿಗಳನ್ನು ಮಾಡುವನು.


ಭಯಭ್ರಾಂತಹೃದಯರಿಗೆ - ಬಲಗೊಳ್ಳಿರಿ, ಹೆದರಬೇಡಿರಿ; ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವದಕ್ಕೂ ದೈವಿಕ ಪ್ರತಿಫಲವನ್ನು ಕೊಡುವದಕ್ಕೂ ಬರುವನು; ತಾನೇ ಬಂದು ನಿಮ್ಮನ್ನು ರಕ್ಷಿಸುವನು ಎಂದು ಹೇಳಿರಿ.


ದ್ವೀಪ ನಿವಾಸಿಗಳು ಕಂಡು ಬೆರಗಾದರು, ಭೂವಿುಯ ಕಟ್ಟಕಡೆಯವರು ನಡುಗಿದರು, ಎಲ್ಲರೂ ನೆರೆದುಬಂದರು.


ಬೆಸಿಗೆ ಚೆನ್ನಾಗಿದೆ ಎಂದು ಹೇಳಿ ಶಿಲ್ಪಿಯು ಎರಕದವನನ್ನೂ ಸುತ್ತಿಗೆಯಿಂದ ಸಮತಟ್ಟುವವನು ಅಡಿಗಲ್ಲಿನ ಮೇಲೆ ಕುಟ್ಟುವವನನ್ನೂ ಪ್ರೋತ್ಸಾಹಗೊಳಿಸಿದರು; ವಿಗ್ರಹವನ್ನು ಅಲುಗದಂತೆ ಮೊಳೆಗಳಿಂದ ಬಿಗಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು