Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 40:14 - ಕನ್ನಡ ಸತ್ಯವೇದವು J.V. (BSI)

14 ಆತನು ಯಾವನ ಆಲೋಚನೆಯನ್ನು ಕೇಳಿದನು? ಯಾವನು ಆತನಿಗೆ ಬುದ್ಧಿಕಲಿಸಿ ಆತನನ್ನು ನ್ಯಾಯಮಾರ್ಗದಲ್ಲಿ ನಡೆಯಿಸಿದನು? ಯಾವನು ಆತನಿಗೆ ಜ್ಞಾನವನ್ನು ಬೋಧಿಸಿ ವಿವೇಕಮಾರ್ಗವನ್ನು ತೋರಿಸಿದನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆತನು ಯಾರ ಆಲೋಚನೆಯನ್ನು ಕೇಳಿದನು? ಯಾರು ಆತನಿಗೆ ಬುದ್ಧಿಕಲಿಸಿ ಆತನನ್ನು ನ್ಯಾಯಮಾರ್ಗದಲ್ಲಿ ನಡೆಯಿಸಿದನು? ಯಾರು ಆತನಿಗೆ ಜ್ಞಾನವನ್ನು ಬೋಧಿಸಿ ವಿವೇಕ ಮಾರ್ಗವನ್ನು ತೋರಿಸಿದವನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಜ್ಞಾನೋದಯ ನೀಡಿದವನಾರು ಆತನಿಗೆ? ನ್ಯಾಯಮಾರ್ಗ ತೋರಿಸಿದವನಾರು ಆತನಿಗೆ? ಬುದ್ಧಿ ಕಲಿಸಿದವನಾರು ಆತನಿಗೆ? ಏನೇ ಮಾರ್ಗವನ್ನು ಸೂಚಿಸಿದವನಾರು ಆತನಿಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಯೆಹೋವನು ಯಾರಿಂದಾದರೂ ಸಹಾಯ ಕೇಳಿದನೋ? ಯಾರಾದರೂ ಆತನಿಗೆ ನ್ಯಾಯನೀತಿಯನ್ನು ಕಲಿಸಿದರೋ? ಯಾರಾದರೂ ಆತನಿಗೆ ಜ್ಞಾನವನ್ನು ತಿಳಿಸಿಕೊಟ್ಟರೋ? ಯಾವನಾದರೂ ಯೆಹೋವನಿಗೆ ತಿಳುವಳಿಕೆಯನ್ನು ಹೇಳಿಕೊಟ್ಟನೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ತನಗೆ ಜ್ಞಾನ ದೊರೆಯಲು ಯೆಹೋವ ದೇವರು ಯಾರ ವಿಚಾರ ತೆಗೆದುಕೊಂಡನು. ಆತನಿಗೆ ಸರಿಯಾದ ಮಾರ್ಗವನ್ನು ಕಲಿಸಿದವನು ಯಾರು? ಆತನಿಗೆ ಜ್ಞಾನವನ್ನು ಕಲಿಸಿದವನಾರು ಇಲ್ಲವೆ ತಿಳುವಳಿಕೆಯ ಮಾರ್ಗವನ್ನು ಆತನಿಗೆ ತೋರಿಸಿದವನಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 40:14
9 ತಿಳಿವುಗಳ ಹೋಲಿಕೆ  

ಮೇಲಣ ಲೋಕದವರಿಗೂ ನ್ಯಾಯತೀರಿಸುವ ದೇವರಿಗೆ ಜ್ಞಾನಬೋಧನೆಯನ್ನು ಮಾಡಬಹುದೇ?


ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ.


ಭೂವಿುಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು; ಆದಿಸಾಗರದ ಮೇಲೆ ಕತ್ತಲಿತ್ತು; ದೇವರಾತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು.


ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು.


ನಿನ್ನ ಆಜ್ಞಾಮಾರ್ಗದಲ್ಲಿ ನನ್ನನ್ನು ನಡಿಸು; ಅದೇ ನನ್ನ ಇಷ್ಟ.


ನಾನು ನೋಡಲು ಇವರಲ್ಲಿ ಸಮರ್ಥರು ಯಾರೂ ಇಲ್ಲ; ನಾನು ಪ್ರಶ್ನೆಮಾಡಿದರೆ ಒಂದು ಮಾತನ್ನಾದರೂ ಹೇಳಬಲ್ಲ ಆಲೋಚಕನು ಇಲ್ಲವೇ ಇಲ್ಲ.


ಆತನ ಮಾರ್ಗವನ್ನು ಆತನಿಗೆ ಯಾರು ನೇವಿುಸಿದರು? ನೀನು ಅನ್ಯಾಯವನ್ನು ನಡಿಸಿದಿ ಎಂದು ಹೇಳಬಲ್ಲವರಾರು?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು