Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 37:28 - ಕನ್ನಡ ಸತ್ಯವೇದವು J.V. (BSI)

28 ನೀನು ಕೂತುಕೊಳ್ಳುವದೂ ಹೋಗುವದೂ ಬರುವದೂ ನನಗೆ ಗೊತ್ತುಂಟು; ನೀನು ನನ್ನ ಮೇಲೆ ರೌದ್ರಾವೇಶನಾಗಿರುವದನ್ನೂ ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ನೀನು ಕುಳಿತುಕೊಳ್ಳುವುದೂ, ಹೊರಗೆ ಹೋಗುವುದೂ, ಒಳಗೆ ಬರುವುದೂ ನನಗೆ ಗೊತ್ತುಂಟು. ನೀನು ನನ್ನ ಮೇಲೆ ರೌದ್ರಾವೇಶನಾಗಿರುವುದನ್ನೂ ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ನನಗೆ ಗೊತ್ತಿದೆ ನೀ ಕೂರುವುದು ಹೋಗಿಬರುವುದು, ನನಗೆ ತಿಳಿದಿದೆ ನೀ ನನ್ನ ಮೇಲೆ ರೌದ್ರಾವೇಶಗೊಂಡಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ನಿನ್ನ ಸೈನ್ಯದ ಬಗ್ಗೆಯೂ ನಿನ್ನ ಯುದ್ಧಗಳ ಬಗ್ಗೆಯೂ ನನಗೆ ಗೊತ್ತಿದೆ. ನೀನು ವಿಶ್ರಾಂತಿ ತೆಗೆದುಕೊಂಡದ್ದೂ ನನಗೆ ಗೊತ್ತಿದೆ. ನೀನು ಯುದ್ಧಕ್ಕೆ ಹೋದದ್ದೂ ನನಗೆ ಗೊತ್ತಿದೆ. ನೀನು ಯುದ್ಧದಿಂದ ಹಿಂತಿರುಗಿ ಮನೆಗೆ ಬಂದದ್ದೂ ನನಗೆ ಗೊತ್ತಿದೆ. ನೀನು ನನ್ನ ಮೇಲೆ ಕೋಪಗೊಂಡಿರುವುದೂ ನನಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 “ಆದರೆ ನೀನು ಎಲ್ಲಿ ವಾಸಿಸುವೆಯೆಂಬುದನ್ನು ನೀನು ಯಾವಾಗ ಬರುವೆ ಹೋಗುವೆ ಎಂಬುದನ್ನು ನೀನು ನನ್ನ ಮೇಲೆ ಹೇಗೆ ಕೋಪಿಸಿಕೊಳ್ಳುವೆ? ಎಂಬುದನ್ನು ನಾನು ಬಲ್ಲೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 37:28
8 ತಿಳಿವುಗಳ ಹೋಲಿಕೆ  

ಹದವಾದ ಇಬ್ಬಾಯಿಕತ್ತಿಯನ್ನು ಹಿಡಿದಾತನು ಹೇಳುವದೇನಂದರೆ - ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು; ಅದು ಸೈತಾನನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ಬಿಡದೇ ಹಿಡಿದುಕೊಂಡಿದ್ದೀ; ನೀನು ಇರುವ ಸೈತಾನನ ನಿವಾಸದಲ್ಲಿ ನನಗೆ ನಂಬಿಗಸ್ತನೂ ಸಾಕ್ಷಿಯೂ ಆದ ಅಂತಿಪನು ಕೊಲ್ಲಲ್ಪಟ್ಟ ದಿನಗಳಲ್ಲಿಯಾದರೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ಮರೆಮಾಡಲಿಲ್ಲ.


ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು.


ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ. ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ.


ಆಗ ಆಕೀಷನು ದಾವೀದನನ್ನು ಕರೆದು ಅವನಿಗೆ - ಯೆಹೋವನಾಣೆ, ನೀನು ಯಥಾರ್ಥನು; ನೀನು ನನ್ನ ಸಂಗಡ ಪಾಳೆಯದಲ್ಲಿದ್ದುಕೊಂಡು ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇರುವದು ಯುಕ್ತವೆಂದು ನನಗೆ ತೋರಿತು. ನೀನು ಬಂದಂದಿನಿಂದ ಇಂದಿನವರೆಗೂ ನಿನ್ನಲ್ಲಿ ಯಾವ ದೋಷವನ್ನೂ ಕಾಣಲಿಲ್ಲ.


ನೇರನ ಮಗನಾದ ಅಬ್ನೇರನ ಸಂಗತಿಯು ನಿನಗೆ ಗೊತ್ತಿಲ್ಲವೋ? ಅವನು ನಿನ್ನನ್ನು ವಂಚಿಸುವದಕ್ಕೂ ನಿನ್ನ ಸ್ಥಿತಿಗತಿಗಳನ್ನು ತಿಳುಕೊಳ್ಳುವದಕ್ಕೂ ನೀನು ಏನೇನು ಮಾಡುತ್ತಿರುತ್ತೀ ಎಂಬದನ್ನು ಕಂಡು ಹಿಡಿಯುವದಕ್ಕೂ ಬಂದಿದ್ದನಷ್ಟೆ ಎಂದು ಹೇಳಿ


ಯೆಹೋವನು ಹೇಳುವದೇನಂದರೆ - ಅವರ ಗರ್ವೋದ್ರೇಕವು ನನಗೆ ಗೊತ್ತು. ಅದು ಬರೀ ಬುರುಡೆಯೇ; ಅವರು ಕೊಚ್ಚಿಕೊಳ್ಳುವದೆಲ್ಲಾ ನಿರರ್ಥಕ ಎಂಬದೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು