Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 37:19 - ಕನ್ನಡ ಸತ್ಯವೇದವು J.V. (BSI)

19 ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ, ಅವು ದೇವತೆಗಳಲ್ಲ, ಮನುಷ್ಯರು ಕೆತ್ತಿದ ಕಲ್ಲು ಮರಗಳ ಬೊಂಬೆಗಳಷ್ಟೆ; ಆದದರಿಂದಲೇ ಅವು ಅವರಿಂದ ಹಾಳಾದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದರು, ಏಕೆಂದರೆ ಅವು ದೇವತೆಗಳಲ್ಲ, ಮನುಷ್ಯರು ಕೆತ್ತಿದ ಕಲ್ಲು ಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಅವರ ದೇವರುಗಳನ್ನೂ ಬೆಂಕಿಗೆ ಹಾಕಿದ್ದು ನಿಜ. ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳ ಬೊಂಬೆಗಳಷ್ಟೆ, ಆದುದರಿಂದಲೇ ಅವು ಅವರಿಂದ ಹಾಳಾದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಅಶ್ಶೂರದ ಅರಸರು ಆ ಜನಾಂಗಗಳ ದೇವರುಗಳನ್ನು ಸುಟ್ಟುಹಾಕಿದರು. ಆದರೆ ಆ ದೇವರುಗಳು ಸತ್ಯವಾದುವುಗಳಲ್ಲ. ಅವುಗಳು ಮನುಷ್ಯರು ಕಲ್ಲಿನಿಂದ ಮತ್ತು ಮರದಿಂದ ಕೆತ್ತಿದ ವಿಗ್ರಹಗಳಾಗಿದ್ದವು. ಆದ್ದರಿಂದ ಅಶ್ಶೂರದ ಅರಸರು ಅವುಗಳನ್ನು ನಾಶಮಾಡಲು ಸಾಧ್ಯವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳಷ್ಟೆ, ಆದ್ದರಿಂದಲೇ ಅವರು ಅವುಗಳನ್ನು ನಾಶಮಾಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 37:19
25 ತಿಳಿವುಗಳ ಹೋಲಿಕೆ  

ಆ ಬಸವನೂ ಇಸ್ರಾಯೇಲಿನ ಕೈಕೆಲಸ; ಶಿಲ್ಪಿಯು ಅದನ್ನು ರೂಪಿಸಿದನು; ಅದು ದೇವರಲ್ಲ; ಸಮಾರ್ಯದ ಬಸವನು ಚೂರುಚೂರಾಗುವನು.


ನೀವು ಅವುಗಳಿಗೆ - ಭೂಮ್ಯಾಕಾಶಗಳನ್ನು ಸೃಷ್ಟಿಸದಿರುವ ದೇವರುಗಳು ಭೂವಿುಯ ಮೇಲಿನಿಂದ, ಆಕಾಶದ ಕೆಳಗಿನಿಂದ, ಅಳಿದುಹೋಗುವವು ಎಂದು ಹೇಳಿರಿ.


ಉಳಿದ ಭಾಗವನ್ನು ತನ್ನ ದೇವರನ್ನಾಗಿ ಬೊಂಬೆ ಕೆತ್ತಿ ಅದಕ್ಕೆ ಎರಗಿ ಅಡ್ಡಬಿದ್ದು - ನೀನೇ ನನ್ನ ದೇವರು, ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುವನು.


ಆಹಾ, ಇವರೆಲ್ಲಾ ಮಾಯೆ, ಇವರ ಕಾರ್ಯಗಳು ಶೂನ್ಯ, ಇವರ ಎರಕದ ಬೊಂಬೆಗಳು ಗಾಳಿಯೇ, ಹಾಳೇ!


ಆಹಾ, ನೀವು ಶೂನ್ಯವೇ! ನಿಮ್ಮ ಕಾರ್ಯವು ಮಟ್ಟಮಾಯವೇ! ನಿಮ್ಮನ್ನು ಮರೆಹೊಗುವವರು ತುಚ್ಫರೇ ಸರಿ!


ಬೆಸಿಗೆ ಚೆನ್ನಾಗಿದೆ ಎಂದು ಹೇಳಿ ಶಿಲ್ಪಿಯು ಎರಕದವನನ್ನೂ ಸುತ್ತಿಗೆಯಿಂದ ಸಮತಟ್ಟುವವನು ಅಡಿಗಲ್ಲಿನ ಮೇಲೆ ಕುಟ್ಟುವವನನ್ನೂ ಪ್ರೋತ್ಸಾಹಗೊಳಿಸಿದರು; ವಿಗ್ರಹವನ್ನು ಅಲುಗದಂತೆ ಮೊಳೆಗಳಿಂದ ಬಿಗಿದರು.


ನೀನು ಆ ಒಡೆಯರ ಮೇಲೆ ಕೈಮಾಡಿ ನಿರ್ಮೂಲಪಡಿಸಿ ಅವರ ಜ್ಞಾಪಕವನ್ನು ಅಳಿಸಿಬಿಟ್ಟಿದ್ದೀ; ಸತ್ತವರು ಪುನಃ ಬದುಕುವದಿಲ್ಲ, ಪ್ರೇತಗಳು ಎದ್ದು ಬರುವದಿಲ್ಲವಲ್ಲಾ.


ಫಿಲಿಷ್ಟಿಯರು ಅಲ್ಲಿ ಬಿಟ್ಟುಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು.


ಜನರು ಮಾಡಿಸಿಕೊಂಡಿದ್ದ ಬಸವನನ್ನು ಅವನು ಹಿಡಿದು ಬೆಂಕಿಯಿಂದ ಸುಟ್ಟು ಅರೆದು ಪುಡಿಪುಡಿಮಾಡಿ ನೀರಿನ ಮೇಲೆ ಚೆಲ್ಲಿ ಇಸ್ರಾಯೇಲ್ಯರಿಗೆ ಆ ನೀರನ್ನು ಕುಡಿಸಿದನು.


ಪೂರ್ವಕಾಲದಲ್ಲಿ ನೀವು ದೇವರ ಜ್ಞಾನವಿಲ್ಲದವರಾಗಿ ದೇವರಲ್ಲದವುಗಳಿಗೆ ಅಧೀನರಾಗಿದ್ದಿರಿ.


ಇವರ ದೇಶವು ವಿಗ್ರಹಗಳಿಂದಲೂ ತುಂಬಿದೆ, ತಮ್ಮ ಕೈಯಿಂದಲೇ, ತಮ್ಮ ಬೆರಳುಗಳಿಂದಲೇ ಮಾಡಿದ ಕೆಲಸಕ್ಕೆ ನಮಸ್ಕರಿಸುತ್ತಾರೆ.


ತಮ್ಮ ಸೃಷ್ಟಿಕರ್ತನನ್ನೇ ಲಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾವಿುಯ ಕಡೆಗೇ ಕಣ್ಣಿಡುವರು.


ನನ್ನ ಜನರು ನನ್ನನ್ನು ಬಿಟ್ಟದ್ದು, ಅನ್ಯದೇವತೆಗಳಿಗೆ ಹೋಮಮಾಡಿದ್ದು, ತಮ್ಮ ಕೈಯಿಂದ ನಿರ್ಮಿಸಿದ್ದಕ್ಕೆ ಅಡ್ಡಬಿದ್ದದ್ದು, ಈ ಅಧರ್ಮಕ್ಕೆಲ್ಲಾ ನಾನು ಅವರಿಗೆ ವಿಧಿಸಿರುವ ನ್ಯಾಯದಂಡನೆಗಳನ್ನು ತಿಳಿಸುವೆನು.


ತನ್ನ ದೇವತೆಗಳು ದೇವರಲ್ಲದೆ ಇದ್ದರೂ ಅವುಗಳನ್ನು ಯಾವ ಜನಾಂಗವಾದರೂ ಬದಲಾಯಿಸಿಕೊಂಡಿತೋ? ಆದರೆ ನನ್ನ ಜನರು ತಮ್ಮ ಮಹಿಮೆಯಾದ ನನಗೆ ಬದಲಾಗಿ ಕೆಲಸಕ್ಕೆ ಬಾರದ್ದನ್ನು ಆರಿಸಿಕೊಂಡಿದ್ದಾರೆ.


ಮನುಷ್ಯಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೇ? ಇವು ದೇವರುಗಳೇ ಅಲ್ಲ.)


ಪರಲೋಕದೊಡೆಯನಿಗೆ ವಿರುದ್ಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿ; ಆತನ ಆಲಯದ ಪಾತ್ರೆಗಳನ್ನು ಸನ್ನಿಧಿಗೆ ತಂದರಲ್ಲಾ; ನೀನು ನಿನ್ನ ರಾಜ್ಯದ ಮುಖಂಡರ ಮತ್ತು ಪತ್ನ್ಯುಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿ ಇಲ್ಲದ ಬೆಳ್ಳಿಬಂಗಾರತಾಮ್ರ ಕಬ್ಬಿಣ ಮರಕಲ್ಲುಗಳ ದೇವರುಗಳನ್ನು ಸ್ತುತಿಸಿದ್ದೀ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗತಿಗಳು ಯಾರ ಅಧೀನವೋ ಆ ದೇವರನ್ನು ಘನಪಡಿಸಲೇ ಇಲ್ಲ;


ಅವನ ದೇವರುಗಳನ್ನೂ ಎರಕದ ಬೊಂಬೆಗಳನ್ನೂ ಒಳ್ಳೊಳ್ಳೆ ಬೆಳ್ಳಿಬಂಗಾರದ ಪಾತ್ರೆಗಳನ್ನೂ ಸೂರೆಮಾಡಿಕೊಂಡು ಐಗುಪ್ತಕ್ಕೆ ಬಂದು ಕೆಲವು ವರುಷಗಳ ತನಕ ಉತ್ತರರಾಜನ ತಂಟೆಗೆ ಹೋಗುವದಿಲ್ಲ.


ಅದರ ಅಭಿಪ್ರಾಯವೋ ಹಾಗಲ್ಲ; ಅನೇಕಾನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲಮಾಡುವೆನೆಂಬದೇ ಹೊರತು ಈ ಯೋಚನೆಯು ಅದರ ಮನಸ್ಸಿನಲ್ಲಿ ಇಲ್ಲವೇ ಇಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು