Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 36:10 - ಕನ್ನಡ ಸತ್ಯವೇದವು J.V. (BSI)

10 ಈ ದೇಶವನ್ನು ಹಾಳುಮಾಡುವದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ಇಲ್ಲಿಗೆ ಬಂದು ಇದನ್ನು ಹಾಳುಮಾಡಿಬಿಡು ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು ಎನ್ನುವ ಅರಸನ ಮಾತುಗಳನ್ನು ತಿಳಿಸಿರಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಈ ದೇಶವನ್ನು ಹಾಳುಮಾಡುವುದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ‘ಇಲ್ಲಿಗೆ ಬಂದು ಇದನ್ನು ಹಾಳು ಮಾಡಿಬಿಡು’ ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು ಎನ್ನುವ ಅರಸನ ಮಾತುಗಳನ್ನು ತಿಳಿಸಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಈ ನಾಡನ್ನು ಹಾಳುಮಾಡುವುದಕ್ಕೆ ಸರ್ವೇಶ್ವರ ಸ್ವಾಮಿಯ ಒಪ್ಪಿಗೆಯಿಲ್ಲದೆ ಇಲ್ಲಿಗೆ ನಾನು ಬಂದೆನೆಂದು ನೆನಸುತ್ತೀಯೋ? ‘ಇಲ್ಲಿಗೆ ಬಂದು ಇದನ್ನು ಹಾಳುಮಾಡಿಬಿಡು’ ಎಂದು ಆ ಸರ್ವೇಶ್ವರ ಸ್ವಾಮಿಯೇ ನಿನಗೆ ಆಜ್ಞೆಮಾಡಿದ್ದಾರೆ,’ ಎಂಬ ಈ ಮಾತುಗಳು ಅರಸನ ಮಾತುಗಳೆಂದು ಹೋಗಿ ತಿಳಿಸಿರಿ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 “‘ಈಗ ನಾನು ಯೆಹೋವನ ಸಹಾಯವಿಲ್ಲದೆ ಈ ದೇಶವನ್ನು ನಾಶಮಾಡಲು ಬಂದೆನೆಂದು ನೆನಸುತ್ತೀರೋ? “ಎದ್ದುಹೋಗಿ ಈ ದೇಶದ ವಿರುದ್ಧ ಯುದ್ಧ ನಡೆಸಿ ಅದನ್ನು ಸಂಪೂರ್ಣವಾಗಿ ನಾಶಮಾಡು” ಎಂದು ಯೆಹೋವನು ನನಗೆ ಹೇಳಿದ್ದಾನೆ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’ ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 36:10
8 ತಿಳಿವುಗಳ ಹೋಲಿಕೆ  

ಈ ದೇಶವನ್ನು ಹಾಳುಮಾಡುವದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ಇಲ್ಲಿಗೆ ಬಂದು ಇದನ್ನು ಹಾಳುಮಾಡಿಬಿಡು ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು ಅನ್ನುತ್ತಾನೆ ಎಂದನು.


ಆಗ ಮುದುಕನು - ನಾನೂ ನಿನ್ನಂತೆ ಪ್ರವಾದಿಯಾಗಿದ್ದೇನೆ; ಒಬ್ಬ ದೇವದೂತನು ನನಗೆ ಕಾಣಿಸಿಕೊಂಡು ನಿನ್ನನ್ನು ಕರಕೊಂಡು ಬರಬೇಕೆಂದೂ ನಿನಗೆ ಅನ್ನಪಾನಗಳನ್ನು ಕೊಡಬೇಕೆಂದೂ ಯೆಹೋವನ ಹೆಸರಿನಲ್ಲಿ ಆಜ್ಞಾಪಿಸಿದ್ದಾನೆ ಎಂದು ಹೇಳಿದನು; ಆದರೆ ಈ ಮಾತು ಸುಳ್ಳು.


ಯೋಷೀಯನು ಅವನಿಗೆ ವಿರೋಧವಾಗಿ ಹೊರಡಲು ನೆಕೋವನು ಅವನ ಬಳಿಗೆ ದೂತರನ್ನು ಕಳುಹಿಸಿ - ಯೆಹೂದದ ಅರಸನೇ, ನನ್ನ ಗೊಡವೆ ನಿನಗೇಕೆ? ನಾನು ಈ ಸಾರಿ ಯುದ್ಧಕ್ಕೆ ಹೊರಟದ್ದು ನಿನಗೆ ವಿರೋಧವಾಗಿ ಅಲ್ಲ, ನನ್ನ ಶತ್ರುವಂಶಕ್ಕೆ ವಿರೋಧವಾಗಿಯೇ. ನನ್ನನ್ನು ಮುಂದರಿಸಬೇಕೆಂದು ದೇವರ ಅಪ್ಪಣೆಯಾಗಿದೆ. ನನ್ನೊಂದಿಗಿರುವ ದೇವರಿಗೆ ವಿರೋಧವಾಗಿ ಕೈಯೆತ್ತುವದನ್ನು ಬಿಡು. ಇಲ್ಲವಾದರೆ ಆತನು ನಿನ್ನನ್ನು ನಾಶಮಾಡುವನು ಎಂದು ಹೇಳಿಸಿದನು.


ಊರಲ್ಲಿ ಕೊಂಬೂದಿದರೆ ಜನರು ಅಂಜರೋ? ಯೆಹೋವನಿಂದಲ್ಲದೆ ಊರಿಗೆ ವಿಪತ್ತು ಸಂಭವಿಸುವದೋ?


ನೀನು ಕೂತುಕೊಳ್ಳುವದೂ ಹೋಗುವದೂ ಬರುವದೂ ನನಗೆ ಗೊತ್ತುಂಟು; ನೀನು ನನ್ನ ಮೇಲೆ ರೌದ್ರಾವೇಶನಾಗಿರುವದನ್ನೂ ಬಲ್ಲೆನು.


ಆಗ ಇಸ್ರಾಯೇಲ್ಯರ ಅರಸನು ತನ್ನ ರಾಜ್ಯದಲ್ಲಿದ್ದ ಸುಮಾರು ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ ಅವರನ್ನು - ನಾನು ರಾಮೋತ್‍ಗಿಲ್ಯಾದಿನ ಮೇಲೆ ಯುದ್ಧಕ್ಕಾಗಿ ಹೋಗಬಹುದೋ ಬಾರದೋ ಎಂದು ಕೇಳಲು ಅವರು - ಹೋಗಬಹುದು, ಕರ್ತನು ಅದನ್ನು ಅರಸನ ಕೈಗೆ ಒಪ್ಪಿಸುವನು ಅಂದರು.


ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ನುಡಿದು - ರಾಮೋತ್‍ಗಿಲ್ಯಾದಿಗೆ ಹೋಗು; ನೀನು ಕೃತಾರ್ಥನಾಗಿ ಬರುವಿ; ಯೆಹೋವನು ಅದನ್ನು ಅರಸನ ಕೈಗೆ ಒಪ್ಪಿಸುವನು ಅಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು