Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 34:16 - ಕನ್ನಡ ಸತ್ಯವೇದವು J.V. (BSI)

16 ಯೆಹೋವನ ಶಾಸ್ತ್ರದಲ್ಲಿ ಹುಡುಕಿ ಓದಿರಿ, ಇವುಗಳಲ್ಲಿ ಯಾವದೂ ಇಲ್ಲದಿರದು, ಎಲ್ಲವೂ ಜೊತೆಜೊತೆಯಾಗಿರುವವು; ಆತನ ಬಾಯಿಂದ ಅಪ್ಪಣೆಯಾಯಿತಲ್ಲವೆ, ಆತನ ಆತ್ಮವು ಇವುಗಳನ್ನು ಒಟ್ಟಿಗೆ ಬರಮಾಡಿತಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯೆಹೋವನ ಶಾಸ್ತ್ರದಲ್ಲಿ ಹುಡುಕಿ ಓದಿರಿ, ಇವುಗಳಲ್ಲಿ ಒಂದಾದರೂ ಇಲ್ಲದೆ ಇರುವುದಿಲ್ಲ, ಜೊತೆಯಿಲ್ಲದೆ ಒಂದೂ ಇಲ್ಲ. ಏಕೆಂದರೆ ಆತನ ಬಾಯಿಯೇ ಅದನ್ನು ಆಜ್ಞಾಪಿಸಿತು. ಆತನ ಆತ್ಮವು ಇವುಗಳನ್ನು ಒಟ್ಟುಗೂಡಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಸರ್ವೇಶ್ವರ ಸ್ವಾಮಿಯ ಗ್ರಂಥದಲ್ಲಿ ಬರೆದಿರುವುದನ್ನು ಹುಡುಕಿ ಓದಿರಿ. ಆ ಸೃಷ್ಟಿಗಳಲ್ಲಿ ಯಾವುದೂ ಇಲ್ಲದಿರದು. ಎಲ್ಲವು ಜೊತೆಜೊತೆಯಾಗಿ ಇರುವುವು. ಸ್ವಾಮಿಯ ಬಾಯಿಂದ ಅಪ್ಪಣೆ ಆಯಿತು, ಅವರ ಆತ್ಮವು ಅವುಗಳನ್ನು ಒಟ್ಟಿಗೆ ಬರಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೆಹೋವನ ಸುರುಳಿಯನ್ನು ನೋಡಿರಿ. ಅಲ್ಲಿ ಬರೆದಿರುವದನ್ನು ಓದಿರಿ. ಅದರಲ್ಲಿ ಯಾವದೂ ಕಳೆದುಹೋಗಿಲ್ಲ. ಆ ಪ್ರಾಣಿಗಳು ಒಟ್ಟಾಗಿ ವಾಸಿಸುವವೆಂದು ಆ ಸುರುಳಿಯಲ್ಲಿ ಬರೆದದೆ. ಅವುಗಳನ್ನು ಒಟ್ಟಾಗಿ ಸೇರಿಸುತ್ತೇನೆಂದು ದೇವರು ಹೇಳಿದ್ದಾನೆ. ಆದ್ದರಿಂದ ಯೆಹೋವನ ಆತ್ಮವು ಅವುಗಳನ್ನು ಒಟ್ಟಾಗಿ ಸೇರಿಸುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಯೆಹೋವ ದೇವರ ಗ್ರಂಥದಲ್ಲಿ ನೀವು ಹುಡುಕಿ ಓದಿರಿ, ಇವುಗಳಲ್ಲಿ ಒಂದಾದರೂ ತಪ್ಪದು. ಜೊತೆಯಿಲ್ಲದೆ ಒಂದೂ ಇರುವುದಿಲ್ಲ. ಏಕೆಂದರೆ ನನ್ನ ಬಾಯಿಯೇ ಅದನ್ನು ಆಜ್ಞಾಪಿಸಿತು. ಅವರ ಆತ್ಮವೇ ಅವುಗಳನ್ನು ಒಟ್ಟುಗೂಡಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 34:16
22 ತಿಳಿವುಗಳ ಹೋಲಿಕೆ  

ಆತನು ನುಡಿದ ಮಾತ್ರಕ್ಕೆ ಸಮಸ್ತವೂ ಉಂಟಾಯಿತು; ಆತನು ಆಜ್ಞಾಪಿಸುತ್ತಲೇ ಸರ್ವವೂ ಸ್ಥಾಪನೆಯಾಯಿತು.


ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.


ನಿಮಗೆ ಸತ್ಯವಾಗಿ ಹೇಳುತ್ತೇನೆ - ಆಕಾಶವೂ ಭೂವಿುಯೂ ಅಳಿದು ಹೋಗುವ ತನಕ ಧರ್ಮಶಾಸ್ತ್ರವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದುಹೋಗಲಾರದು.


ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು; ಅದರಲ್ಲಿರುವದೆಲ್ಲವೂ ಆತನ ಶ್ವಾಸದಿಂದ ನಿರ್ಮಿತವಾಯಿತು.


[ಯೆಹೋವನು ನನಗೆ ಹೀಗೆ ಹೇಳಿದನು] - ನೀನೀಗ ಮನೆಗೆ ಹೋಗಿ ಈ ಮಾತು ಮುಂದಿನ ಕಾಲದಲ್ಲಿ ಶಾಶ್ವತ ಸಾಕ್ಷಿಯಾಗಿರುವಂತೆ ಇವರೆದುರಿಗೆ ಹಲಿಗೆಯ ಮೇಲೆ ಕೆತ್ತು, ಪುಸ್ತಕದಲ್ಲಿ ಬರೆ.


ಹಾಗಾದರೆ ದೇವರ ವಾಕ್ಯವನ್ನು ಹೊಂದಿದವರನ್ನು ದೇವರುಗಳೆಂದು ಆತನು ಹೇಳಿರುವಲ್ಲಿ


ಉಪದೇಶವನ್ನು ಮನಸ್ಸಿಗೆ ತೆಗೆದುಕೋ; ತಿಳುವಳಿಕೆಯ ಮಾತುಗಳಿಗೆ ಕಿವಿಗೊಡು.


ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.


ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆ ಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.


ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.


(ಆದರೂ ಸತ್ಯಶಾಸನದಲ್ಲಿ ಲಿಖಿತವಾದದ್ದನ್ನು ಈಗ ನಿನಗೆ ತಿಳಿಸುವೆನು.) ಇವರಿಬ್ಬರೊಂದಿಗೆ ಹೋರಾಡುವಲ್ಲಿ ನಿಮ್ಮ ಪಾಲಕನಾದ ಮೀಕಾಯೇಲನು ಹೊರತು ನನಗೆ ಬೆಂಬಲರಾಗತಕ್ಕವರು ಇನ್ನಾರೂ ಇಲ್ಲ.


ಆಗ ನೀವು ಯೆಹೋವನಲ್ಲಿ ಉಲ್ಲಾಸಪಡುವಿರಿ, ಮತ್ತು ನಾನು ನಿಮ್ಮನ್ನು ಭೂವಿುಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ ನಿಮ್ಮ ಪಿತೃವಾದ ಯಾಕೋಬನ ಸ್ವಾಸ್ತ್ಯವನ್ನು ನೀವು ಅನುಭವಿಸುವಂತೆ ಮಾಡುವೆನು. ಯೆಹೋವನೇ ಇದನ್ನು ನುಡಿದಿದ್ದಾನೆ.


ಇದಲ್ಲದೆ ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ. ನಿಮ್ಮ ಹೃದಯದೊಳಗೆ ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಡುವದೇ ಒಳ್ಳೇದು.


ಒಪ್ಪದೆ ತಿರುಗಿ ಬಿದ್ದರೆ ಕತ್ತಿಯ ಬಾಯಿಗೆ ತುತ್ತಾಗುವಿರಿ; ಈ ಮಾತು ಯೆಹೋವನೇ ನುಡಿದದ್ದು.


ನಾನಂತೂ ಭೂವಿುಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲ ಪ್ರಾಣಿಗಳನ್ನೂ ಅಳಿಸಿಬಿಡುವೆನು; ಭೂವಿುಯಲ್ಲಿರುವ ಸಮಸ್ತವೂ ಲಯವಾಗುವದು.


ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ.


ಪುರದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಎಲ್ಲಾ ಫಿಲಿಷ್ಟಿಯರೇ, ಕುಂದಿಹೋಗಿರಿ! ಬಡಗಲಿಂದ ಹೊಗೆಯು ಬರುತ್ತಿದೆ. ಆ ವ್ಯೂಹದಲ್ಲಿ ಹಿಂದು ಬೀಳುವವರಿಲ್ಲ.


ಯೆಹೋವನ ಮಹಿಮೆಯು ಗೋಚರವಾಗುವದು, ಎಲ್ಲಾ ಮನುಷ್ಯರೂ ಒಟ್ಟಿಗೆ ಅದನ್ನು ಕಾಣುವರು, ಯೆಹೋವನ ಬಾಯೇ ಇದನ್ನು ನುಡಿದಿದೆ ಎಂದು ಒಬ್ಬನು ಕೂಗುತ್ತಾನೆ.


ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.


ಬಿಲ್ಲುಗಾರರಲ್ಲಿ ಉಳಿದವರೂ ಕೇದಾರಿನವರ ಶೂರರೂ ವಿರಳರಾಗುವರು; ಇಸ್ರಾಯೇಲ್ಯರ ದೇವರಾದ ಯೆಹೋವನು ಇದನ್ನು ನುಡಿದಿದ್ದಾನೆ ಎಂಬದೇ.


ಆಗ ಅವನು ನನಗೆ ಪ್ರತ್ಯುತ್ತರವಾಗಿ ಹೀಗೆ ಹೇಳಿದನು - ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ ಎಂಬದು ಸೇನಾಧೀಶ್ವರ ಯೆಹೋವನ ನುಡಿ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು