Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 32:12 - ಕನ್ನಡ ಸತ್ಯವೇದವು J.V. (BSI)

12 ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಳ ವಿಷಯದಲ್ಲಿ ಎದೆಬಡಿದುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಾಗಿ ಎದುರುನೋಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಎದೆ ಬಡಿದುಕೊಂಡು ಗೋಳಾಡಿರಿ. ಏಕೆಂದರೆ ಹುಲುಸಾದ ಹೊಲಗಳು ಫಲವತ್ತಾದ ದ್ರಾಕ್ಷಾತೋಟಗಳು ನಾಶವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಶೋಕವಸ್ತ್ರಗಳನ್ನು ದುಃಖದಿಂದ ತುಂಬಿದ ನಿಮ್ಮ ಎದೆಗಳ ಮೇಲೆ ಹಾಕಿಕೊಳ್ಳಿ. ನಿಮ್ಮ ಹೊಲಗಳು ನಿಷ್ಪ್ರಯೋಜಕವಾಗಿರುವದಕ್ಕಾಗಿ ಅಳಿರಿ. ನಿಮ್ಮ ದ್ರಾಕ್ಷಿತೋಟವು ಒಳ್ಳೆಯ ಫಲ ಕೊಡುತ್ತಿತ್ತು. ಆದರೆ ಈಗ ತೋಟವು ಬರಿದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಳ ನಿಮಿತ್ತವೂ ನಿಮ್ಮ ಎದೆ ಬಡಿದುಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 32:12
11 ತಿಳಿವುಗಳ ಹೋಲಿಕೆ  

ವಸ್ತ್ರವನ್ನು ಕಿತ್ತು ರಾಣಿಯನ್ನು ಬೈಲಿಗೆ ತರಲು ಆಕೆಯ ತೊತ್ತುಗಳು ಎದೆಬಡಿದುಕೊಂಡು ಪಾರಿವಾಳಗಳಂತೆ ಮೂಲುಗುತ್ತಾರೆ.


ಆಮೇಲೆ ಸಕಲದೇಶಶಿರೋಮಣಿಯಾದ ಯಾವ ದೇಶವನ್ನು ಅವರಿಗೆ ವಾಗ್ದಾನ ಮಾಡಿದೆನೋ ಹಾಲೂ ಜೇನೂ ಹರಿಯುವ ಆ ದೇಶಕ್ಕೆ ನಿಮ್ಮನ್ನು ಸೇರಿಸೆನೆಂದು ಅರಣ್ಯದಲ್ಲಿ ಅವರಿಗೆ ಪ್ರಮಾಣ ಮಾಡಿದೆನು;


ಸಕಲದೇಶ ಶಿರೋಮಣಿಯಾದ ದೇಶವನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಐಗುಪ್ತದೇಶದೊಳಗಿಂದ ಉದ್ಧರಿಸಿ ಹಾಲೂ ಜೇನೂ ಹರಿಯುವ ಆ ದೇಶಕ್ಕೆ ಸೇರಿಸುವೆನು ಎಂದು ಪ್ರಮಾಣಮಾಡಿ


ನೀರು ಸುರಿದು ಸುರಿದು ನನ್ನ ಕಣ್ಣು ಇಂಗಿಹೋಗಿದೆ, ನನ್ನ ಕರುಳು ಕುದಿಯುತ್ತದೆ, ನನ್ನ ಜನವೆಂಬ ಯುವತಿಯು ಹಾಳಾಗಿ ಮಕ್ಕಳುಮರಿಗಳು ಪಟ್ಟಣದ ಚೌಕಗಳಲ್ಲಿ ಮೂರ್ಛೆ ಹೋದದರಿಂದ ನನ್ನ ಕರುಳು ಕರಗಿದೆ.


ನನ್ನ ಜನರ ಭೂವಿುಯ ಮೇಲೂ ಉತ್ಸಾಹಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆಗಳ ಮೇಲೂ ಮುಳ್ಳುಗಿಳ್ಳು ಹತ್ತಿಕೊಳ್ಳುವದು;


ಇಗೋ, ಯೆಹೋವನು ಲೋಕವನ್ನು ಬರಿದುಮಾಡಿ ಹಾಳಿಗೆ ತಂದು ವಿರೂಪಪಡಿಸಿ ಅದರ ನಿವಾಸಿಗಳನ್ನು ಚದರಿಸಿಬಿಡುವವನಾಗಿದ್ದಾನೆ.


ದ್ರಾಕ್ಷಾರಸವು ವ್ಯಸನಭರಿತವಾಗಿದೆ, ದ್ರಾಕ್ಷೆಯ ಬಳ್ಳಿಯು ಬಾಡಿದೆ, ಹರ್ಷಹೃದಯರೆಲ್ಲಾ ನರಳುತ್ತಾರೆ.


ಅದು ನನ್ನ ದ್ರಾಕ್ಷೆಯ ಬಳ್ಳಿಗಳನ್ನು ಹಾಳುಮಾಡಿದೆ, ನನ್ನ ಅಂಜೂರದ ಗಿಡಗಳನ್ನು ಸಿಗಿದುಹಾಕಿದೆ, ಅವುಗಳನ್ನು ಬೋಳುಮಾಡಿ ಬಿಟ್ಟುಬಿಟ್ಟಿದೆ; ರೆಂಬೆಗಳು ಬಿಳುಪಾಗಿ ಹೋಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು