Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 30:10 - ಕನ್ನಡ ಸತ್ಯವೇದವು J.V. (BSI)

10 ಇವರು ದಿವ್ಯದರ್ಶಿಗಳನ್ನು ಕುರಿತು - ನಿಮಗೆ ದರ್ಶನವಾಗದಿರಲಿ ಅನ್ನುತ್ತಾರೆ; ಮತ್ತು ಸಾಕ್ಷಾತ್ಕಾರಿಗಳಿಗೆ - ನಮಗಾಗಿ ನ್ಯಾಯವಾದವುಗಳನ್ನು ಸಾಕ್ಷಾತ್ಕರಿಸಬೇಡಿರಿ, ನಯವಾದವುಗಳನ್ನು ನಮಗೆ ನುಡಿಯಿರಿ, ಮಾಯವಾದವುಗಳನ್ನೇ ಸಾಕ್ಷಾತ್ಕರಿಸಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇವರು ದಿವ್ಯದರ್ಶಿಗಳಿಗೆ, “ನಿಮಗೆ ದರ್ಶನವಾಗದಿರಲಿ” ಎನ್ನುತ್ತಾರೆ, ಮತ್ತು ಪ್ರವಾದಿಗಳಿಗೆ, “ನಮಗಾಗಿ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ, ನಯವಾದವುಗಳನ್ನು ನಮಗೆ ನುಡಿಯಿರಿ, ಮೋಸವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಇವರು ದಿವ್ಯದರ್ಶಿಗಳನ್ನು ನೋಡಿ : “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ : “ನಯವಾದುದ್ದನ್ನು ನಮಗೆ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದನೆ ಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಅವರು ಪ್ರವಾದಿಗಳಿಗೆ, “ನಾವು ಮಾಡಬೇಕಿರುವ ಕಾರ್ಯಗಳ ಬಗ್ಗೆ ದೈವೋಕ್ತಿ ನುಡಿಯಬೇಡಿ, ನಮಗೆ ಸತ್ಯವನ್ನು ತಿಳಿಸಬೇಡಿ. ನಮಗೊಪ್ಪುವ ಮನರಂಜನೆಯ ಮಾತುಗಳನ್ನಾಡಿ. ನಮಗೋಸ್ಕರ ಒಳ್ಳೆಯ ಸಂಗತಿಗಳನ್ನೇ ನಿಮ್ಮ ದರ್ಶನಗಳಲ್ಲಿ ನೋಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅವರು ನೋಡುವವರಿಗೆ, “ನೋಡಬೇಡಿರಿ,” ಎಂದು ಪ್ರವಾದಿಗಳಿಗೆ, “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ, ನಮಗೆ ನ್ಯಾಯವಾದವುಗಳನ್ನು ಪ್ರವಾದಿಸಬೇಡಿರಿ. ನಯವಾದವುಗಳನ್ನೇ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದಿಸಿರಿ ಎನ್ನುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 30:10
39 ತಿಳಿವುಗಳ ಹೋಲಿಕೆ  

ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.


ಆದರೆ ಬೇತೇಲಿನಲ್ಲಿ ಇನ್ನು ಪ್ರವಾದನೆಮಾಡಬೇಡ; ಇದು ರಾಜಕೀಯ ಪವಿತ್ರಾಲಯ, ಇದು ಅರಮನೆ ಎಂದು ಹೇಳಲು


ನೀವೋ ಆ ಪ್ರತಿಷ್ಠಿತರಿಗೆ ದ್ರಾಕ್ಷಾರಸವನ್ನು ಕುಡಿಸಿದಿರಿ; ಪ್ರವಾದಿಗಳಿಗೆ ಪ್ರವಾದನೆ ಮಾಡಬೇಡಿರೆಂದು ಕಟ್ಟುಮಾಡಿದಿರಿ.


ಹೀಗಿರಲು ಸೇನಾಧೀಶ್ವರನಾದ ಯೆಹೋವನು ನನಗೆ - ನಮ್ಮ ಕೈಯಿಂದ ನೀನು ಸಾಯಬಾರದಾಗಿದ್ದರೆ ಯೆಹೋವನ ಹೆಸರೆತ್ತಿ ಪ್ರವಾದಿಸಬೇಡ ಎಂದು ನಿನ್ನ ಪ್ರಾಣಕ್ಕೆ ಹೊಂಚುಹಾಕುತ್ತಿರುವ ಅನಾತೋತಿನವರ ವಿಷಯದಲ್ಲಿ ನನ್ನ ತೀರ್ಮಾನವು ಇದೇ -


ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದನಂತರ ಅಧೋಲೋಕದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವದು.


ನನ್ನನ್ನು ಅಸಡ್ಡೆಮಾಡುವವರಿಗೆ - ನಿಮಗೆ ಶುಭವಾಗುವದು ಎಂಬದಾಗಿ ಯೆಹೋವನು ಅಂದಿದ್ದಾನೆ ಎಂದು ಹೇಳುತ್ತಲೇ ಇದ್ದಾರೆ; ಸ್ವಂತ ಹೃದಯದ ಹಟದಂತೆ ನಡೆಯುವವರೆಲ್ಲರಿಗೂ - ನಿಮಗೆ ಯಾವ ಕೇಡೂ ಸಂಭವಿಸದು ಎಂದು ನುಡಿಯುತ್ತಾರೆ.


ಗಾಳಿಯನ್ನೂ ಮೋಸವನ್ನೂ ಹಿಂಬಾಲಿಸುವ ಸುಳ್ಳುಗಾರನೊಬ್ಬನು - ನಾನು ದ್ರಾಕ್ಷಾರಸಮದ್ಯಗಳ ವಿಷಯವಾಗಿ ನಿನಗೆ ಪ್ರವಾದನೆಮಾಡುವೆನು ಎಂದು ಹೇಳಿದರೆ ಈ ಜನರು ಅಂಥವನನ್ನು ಪ್ರವಾದಿಯನ್ನಾಗಿ ಸ್ವೀಕರಿಸಿಕೊಳ್ಳುವರು.


[ಆಹಾ, ಆ ಕೆಡುಕರು] ಪ್ರವಾದನೆ ಮಾಡಬೇಡಿರಿ; ಇಂಥ ವಿಷಯಗಳಲ್ಲಿ ಪ್ರವಾದನೆಯನ್ನೆತ್ತ ಕೂಡದು; ದೂಷಣೆಗಳು ತೊಲಗುವದೇ ಇಲ್ಲ ಎಂದು ಪ್ರವಾದನೆಮಾಡುತ್ತಾರೆ.


ನಾನು ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕುಗ್ಗಿಸಬೇಕೆಂದು ಅರಸನು ಅನ್ನುತ್ತಾನೆ ಎಂದು ಹೇಳಿರಿ ಎಂಬದಾಗಿ ಆಜ್ಞಾಪಿಸಿದನು.


ಅಹಾಬನು ಎಲೀಯನನ್ನು ಕಂಡು ಅವನನ್ನು - ನನ್ನ ವೈರಿಯೇ, ನೀನು ನನ್ನನ್ನು ಕಂಡುಕೊಂಡಿಯಾ ಎಂದು ಕೇಳಲು ಅವನು - ಹೌದು, ಕಂಡುಕೊಂಡೆನು; ನೀನು ನಿನ್ನನ್ನು ಪಾಪಕ್ಕೆ ಮಾರಿಬಿಟ್ಟು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದಿಯಲ್ಲಾ.


ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳುವದರಿಂದ ನಿಮಗೆ ಶತ್ರುವಾಗಿದ್ದೇನೋ?


ನೀವು ಈ ಹೆಸರನ್ನು ಎತ್ತಿ ಉಪದೇಶ ಮಾಡಲೇಬಾರದೆಂದು ನಾವು ನಿಮಗೆ ಖಂಡಿತವಾಗಿ ಅಪ್ಪಣೆಕೊಟ್ಟೆವಲ್ಲಾ; ಆದರೂ ನೀವು ಯೆರೂಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿದಿರಿ, ಮತ್ತು ಆ ಮನುಷ್ಯನನ್ನು ಕೊಲ್ಲಿಸಿದ್ದಕ್ಕೆ ನಮ್ಮನ್ನು ಹೊಣೆಮಾಡಬೇಕೆಂದಿದ್ದೀರಿ ಎಂದು ಹೇಳಿದ್ದಕ್ಕೆ


ಆದರೆ ಇದು ಜನರಲ್ಲಿ ಇನ್ನೂ ಹಬ್ಬದಂತೆ ಮುಂದೆ ಆ ಹೆಸರನ್ನು ಎತ್ತಿ ಯಾರ ಸಂಗಡಲೂ ಮಾತಾಡಬಾರದೆಂದು ಅವರನ್ನು ಬೆದರಿಸೋಣ ಎಂಬದಾಗಿ ಒಬ್ಬರ ಕೂಡೊಬ್ಬರು ಆಲೋಚನೆ ಮಾಡಿಕೊಂಡು


ನಾನು ಸತ್ಯವನ್ನು ಹೇಳುವವನಾದದರಿಂದ ನೀವು ನನ್ನನ್ನು ನಂಬುವದಿಲ್ಲ.


ಲೋಕವು ನಿಮ್ಮನ್ನು ಹಗೆಮಾಡಲಾರದು; ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿಹೇಳುವದರಿಂದ ನನ್ನನ್ನು ಹಗೆಮಾಡುತ್ತದೆ.


ಆಮೇಲೆ ಆ ಪ್ರಧಾನರು ಅರಸನಿಗೆ - ಒಡೆಯಾ, ಇವನಿಗೆ ಮರಣದಂಡನೆಯಾಗಬೇಕು. ಇವನು ಪಟ್ಟಣದಲ್ಲಿ ಉಳಿದಿರುವ ಯೋಧರಿಗೂ ಸಕಲ ಜನರಿಗೂ ಇಂಥಾ ಮಾತುಗಳನ್ನು ನುಡಿಯುತ್ತಾ ಅವರನ್ನು ಜೋಲುಗೈಯವರನ್ನಾಗಿ ಮಾಡುತ್ತಾನೆ; ಈ ಜನರ ಕ್ಷೇಮವನ್ನಲ್ಲ, ಹಾನಿಯನ್ನೇ ಹಾರೈಸುತ್ತಾನೆ ಎಂದು ಹೇಳಿದರು.


ಹೀಗಿರಲು ನಿಮ್ಮ ಮಧ್ಯದಲ್ಲಿ ಪ್ರವಾದಿಯಾಗಿ ನಟಿಸುವ ಅನಾತೋತಿನವನಾದ ಯೆರೆಮೀಯನನ್ನು ನೀನು ಏಕೆ ಖಂಡಿಸಲಿಲ್ಲ?


ಯಾಜಕರೂ ಪ್ರವಾದಿಗಳೂ ಇವನು ಮರಣ ದಂಡನೆಗೆ ತಕ್ಕವನು; ಇವನು ಈ ಪಟ್ಟಣಕ್ಕೆ ಅಹಿತನುಡಿದದ್ದನ್ನು ನೀವು ಕಿವಿಯಾರೆ ಕೇಳಿದಿರಷ್ಟೆ ಎಂದು ಸರದಾರರಿಗೂ ಎಲ್ಲಾ ಜನರಿಗೂ ಹೇಳಿದರು.


ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ, ಯಾಜಕರು ಅವರಿಂದ ಅಧಿಕಾರ ಹೊಂದಿ ದೊರೆತನ ಮಾಡುತ್ತಾರೆ, ನನ್ನ ಜನರು ಇದನ್ನೇ ಪ್ರೀತಿಸುತ್ತಾರೆ; ಕಟ್ಟಕಡೆಗೆ ನೀವು ಏನು ಮಾಡುವಿರಿ?


ಈ ಮಾತನ್ನು ಹೇಳಿದ ಪ್ರವಾದಿಗೆ ಅರಸನು - ನಿನ್ನನ್ನು ರಾಜಮಂತ್ರಿಯನ್ನಾಗಿ ನೇವಿುಸಿದ್ದೇವೋ? ಸುಮ್ಮನಿರು, ನಿನಗೆ ಪೆಟ್ಟು ಬೇಕೋ ಅನ್ನಲು ಅವನು - ನೀನು ನನ್ನ ಬುದ್ಧಿವಾದವನ್ನು ಲಾಲಿಸದೆ ಹೀಗೆ ಮಾಡುವದರಿಂದ ದೇವರು ನಿನ್ನನ್ನು ನಾಶಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದಾನೆಂಬದಾಗಿ ನನಗೆ ತಿಳಿಯಬಂತು ಎಂದು ಹೇಳಿ ಸುಮ್ಮನಾದನು.


ಆಸನು ಈ ಮಾತುಗಳ ದೆಸೆಯಿಂದ ಬೇಸರಗೊಂಡು ದರ್ಶಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿಡಿಸಿ ಕೋಳಹಾಕಿಸಿದನು. ಇದಲ್ಲದೆ ಜನರಲ್ಲಿ ಕೆಲವರನ್ನು ಪೀಡಿಸಿದನು.


ಯಾಕಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.


ಅವರು ಸತ್ಯ ಬೋಧನೆಗೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ಹೋಗುವರು.


(ಪೂರ್ವಕಾಲದಲ್ಲಿ ಇಸ್ರಾಯೇಲ್ಯರಲ್ಲಿ ಯಾವನಾದರೂ ದೈವೋತ್ತರಕೇಳಬೇಕಾದರೆ ದರ್ಶಿಯ ಬಳಿಗೆ ಹೋಗೋಣ ಬನ್ನಿರಿ ಎನ್ನುವನು; ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು ಆ ಕಾಲದಲ್ಲಿ ದರ್ಶಿಗಳೆಂದು ಕರೆಯುತ್ತಿದ್ದರು.)


ಅಯ್ಯೋ, ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ ಬೋಧಿಸಿ ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸಿ ಕಹಿಯು ಸಿಹಿ, ಸಿಹಿಯು ಕಹಿ ಎಂದು ಸ್ಥಾಪಿಸುವವರ ಗತಿಯನ್ನು ಏನೆಂದು ಹೇಳಲಿ!


ಯೆಹೋವನು ನಿಮ್ಮ ಮೇಲೆ ಗಾಢನಿದ್ರೆಯನ್ನು ಬರಮಾಡಿ ಪ್ರವಾದಿಗಳೆಂಬ ಕಣ್ಣುಗಳನ್ನು ಮುಚ್ಚಿ ದಿವ್ಯದರ್ಶಿಗಳೆಂಬ ತಲೆಗಳಿಗೆ ಮುಸುಕು ಹಾಕಿದ್ದಾನಷ್ಟೆ.


ಅಲ್ಲದೆ ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು - ಯೆಹೋವನು ಇಂತೆನ್ನುತ್ತಾನೆ - ಬಾಬೆಲಿನ ಅರಸನು ಬಂದು ಈ ದೇಶವನ್ನು ಜನಪಶುಗಳಿಲ್ಲದಂತೆ ಹಾಳುಮಾಡುವದು ಖಂಡಿತ ಎಂದು ಈ ಸುರಳಿಯನ್ನು ಬರೆಯಿಸಿದ್ದೇಕೆ ಎಂಬದಾಗಿ ನೀನು ಆಕ್ಷೇಪಿಸಿ ಅದನ್ನು ಸುಟ್ಟುಬಿಟ್ಟಿಯಲ್ಲ;


ಅದು ನಿನಗೆ ಬಹಳವಾಗಿ ವಿಜ್ಞಾಪಿಸುವದೋ? ನಿನ್ನ ಸಂಗಡ ಸವಿಮಾತಾಡೀತೇ?


ನೀವು ನಿಮ್ಮೊಳಗೆ - ಮೃತ್ಯುವಿನಿಂದ ಒಡಂಬಡಿಕೆಯನ್ನು ಪಡೆದುಕೊಂಡು ಪಾತಾಳದೊಡನೆ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ಅದು ನಮ್ಮನ್ನು ಮುಟ್ಟದು; ನಾವು ಅಸತ್ಯವನ್ನು ಆಶ್ರಯಿಸಿಕೊಂಡು ಮೋಸವನ್ನು ಮರೆ ಹೊಕ್ಕಿದ್ದೇವಲ್ಲಾ ಅಂದುಕೊಂಡದರಿಂದ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು