ಯೆಶಾಯ 28:7 - ಕನ್ನಡ ಸತ್ಯವೇದವು J.V. (BSI)7 ಈ [ನನ್ನ] ಜನರು ಸಹ ದ್ರಾಕ್ಷಾರಸದಿಂದ ಓಲಾಡುತ್ತಾರೆ, ಮದ್ಯದಿಂದ ತೂಗಾಡುತ್ತಾರೆ; ಯಾಜಕ ಪ್ರವಾದಿಗಳೂ ಮದ್ಯದಿಂದ ಓಲಾಡುತ್ತಾರೆ, ದ್ರಾಕ್ಷಾರಸವೇ ಅವರನ್ನು ನುಂಗಿಬಿಟ್ಟಿದೆ, ಮದ್ಯದಿಂದ ತೂಗಾಡುತ್ತಾರೆ; ದೈವದರ್ಶನವಾಗುತ್ತಿರುವಾಗಲೂ ಓಲಾಡುತ್ತಾರೆ, ನ್ಯಾಯತೀರಿಸುತ್ತಿರುವಾಗಲೂ ಅತ್ತಿತ್ತ ತೂಗಾಡುತ್ತಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಈ ನನ್ನ ಜನರು ಸಹ ದ್ರಾಕ್ಷಾರಸದಿಂದ ಓಲಾಡುತ್ತಾರೆ, ಮದ್ಯದಿಂದ ತೂಗಾಡುತ್ತಾರೆ; ಯಾಜಕ ಪ್ರವಾದಿಗಳೂ ಮದ್ಯದಿಂದ ಓಲಾಡುತ್ತಾರೆ, ದ್ರಾಕ್ಷಾರಸವೇ ಅವರನ್ನು ನುಂಗಿಬಿಟ್ಟಿದೆ, ಮದ್ಯದಿಂದ ತೂಗಾಡುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಯಾಜಕರು, ಪ್ರವಾದಿಗಳು ಮದ್ಯಪಾನದಿಂದ ಮತ್ತರಾಗಿದ್ದಾರೆ; ದ್ರಾಕ್ಷಾರಸದಿಂದ ಓಲಾಡುತ್ತಿದ್ದಾರೆ; ಕುಡಿತದಿಂದ ತೂರಾಡುತ್ತಿದ್ದಾರೆ. ದ್ರಾಕ್ಷಾರಸವೇ ಅವರನ್ನು ಮುಳುಗಿಸಿಬಿಟ್ಟಿದೆ. ಹೌದು, ಅವರು ಮದ್ಯದಲ್ಲಿ ತೇಲಾಡುತ್ತಿದ್ದಾರೆ. ದೈವದರ್ಶನವಾಗುತ್ತಿರುವಾಗಲೂ ಅವರು ಓಲಾಡುತ್ತಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಆದರೆ ಈಗ ಆ ನಾಯಕರುಗಳು ಮತ್ತರಾಗಿದ್ದಾರೆ. ಯಾಜಕರೂ ಪ್ರವಾದಿಗಳೂ ಮದ್ಯಸೇವನೆಯಿಂದ ಮತ್ತರಾಗಿದ್ದಾರೆ. ಅವರು ಎಡವಿಬೀಳುತ್ತಾರೆ. ಪ್ರವಾದಿಗಳು ದರ್ಶನಗಳನ್ನು ಕಾಣುವಾಗ ಅಮಲೇರಿದವರಾಗಿರುತ್ತಾರೆ; ನ್ಯಾಯಾಧೀಶರು ತೀರ್ಪುಕೊಡುವಾಗ ಅಮಲೇರಿದವರಾಗಿರುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಇವರು ಸಹ ದ್ರಾಕ್ಷಾರಸದಿಂದ ಮತ್ತರಾಗಿದ್ದಾರೆ. ಮದ್ಯದಿಂದಲೂ ಓಲಾಡುತ್ತಿದ್ದಾರೆ. ಯಾಜಕನೂ ಪ್ರವಾದಿಯೂ ಮದ್ಯದಿಂದ ಮತ್ತರಾಗಿದ್ದಾರೆ. ದ್ರಾಕ್ಷಾರಸದಿಂದ ತೂರಾಡುತ್ತಿದ್ದಾರೆ. ಮದ್ಯದಿಂದ ಓಲಾಡುತ್ತಿದ್ದಾರೆ. ದರ್ಶನವಾಗುತ್ತಿರುವಾಗಲೂ ಅವರು ತಪ್ಪುತ್ತಾರೆ. ನ್ಯಾಯತೀರ್ವಿಕೆಯಲ್ಲಿ ತತ್ತರಿಸುತ್ತಾರೆ. ಅಧ್ಯಾಯವನ್ನು ನೋಡಿ |