ಯೆಶಾಯ 28:4 - ಕನ್ನಡ ಸತ್ಯವೇದವು J.V. (BSI)4 ಫಲವತ್ತಾದ ತಗ್ಗಿಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವು ಫಲಕಾಲಕ್ಕೆ ಮುಂಚೆ ಮಾಗಿದ ಅಂಜೂರಕ್ಕೆ ಸಮಾನವಾಗುವದು; ಆ ಹಣ್ಣನ್ನು ಕಂಡವನು ಕಿತ್ತ ಕೂಡಲೆ ನುಂಗಿಬಿಡುವನಲ್ಲವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವು ಫಲಕೊಡುವ ಕಾಲಕ್ಕೆ, ಮೊದಲು ಮಾಗಿದ ಅಂಜೂರಕ್ಕೆ ಸಮಾನವಾಗುವುದು; ಆ ಹಣ್ಣನ್ನು ನೋಡಿದವನು, ಅದನ್ನು ಕಿತ್ತ ಕೂಡಲೆ ನುಂಗಿಬಿಡುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಫಲವತ್ತಾದ ಕಣಿವೆಗೆ ಶ್ರೇಷ್ಠಶಿರೋಭೂಷಣವಾಗಿದ್ದು, ಈಗ ಬಾಡುತ್ತಿರುವ ಆ ನಗರ, ಹೂ ಕಾಲಕ್ಕೆ ಮುಂಚೆ ಮಾಗಿದ ಅಂಜೂರಕ್ಕೆ ಸಮಾನವಾಗುವುದು. ಆ ಹಣ್ಣನ್ನು ಕಂಡವರು ಕಿತ್ತ ಕೂಡಲೆ ತಿಂದುಬಿಡುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಆ ನಗರವು ಬೆಟ್ಟದ ಮೇಲೆ ಕುಳಿತಿದೆ; ಸುತ್ತಲೂ ಫಲವತ್ತಾದ ಕಣಿವೆ ಇದೆ. ಆ ಸುಂದರವಾದ ಪುಷ್ಪ ಕಿರೀಟವು ಕೇವಲ ಒಣಗಿದ ತರಗೆಲೆ. ಆ ನಗರವು ಬೇಸಿಗೆಯ ಮೊದಲಿನ (ಅಂಜೂರದ) ಹಣ್ಣುಗಳಂತೆ ಇದೆ. ಅದನ್ನು ನೋಡಿದವರು ಕೂಡಲೇ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಫಲವತ್ತಾದ ಕಣಿವೆಗೆ ತಲೆಯ ಮೇಲಿರುವ ಅಲಂಕಾರದ ಶೃಂಗಾರವಾಗಿದ್ದು, ಬೇಸಿಗೆ ಮುಂಚೆ ಮಾಗಿದ ಅಂಜೂರದ ಹಣ್ಣಿನ ಹಾಗೆ ಇರುವುದು. ಜನರು ಅವರನ್ನು ನೋಡಿ ಕೈಗೆ ತೆಗೆದುಕೊಂಡ ತಕ್ಷಣ ಅವರು ನುಂಗುತ್ತಾರೆ. ಅಧ್ಯಾಯವನ್ನು ನೋಡಿ |