Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 22:17 - ಕನ್ನಡ ಸತ್ಯವೇದವು J.V. (BSI)

17 ಇಗೋ, ಬಲಿತವನೇ, ಯೆಹೋವನು ನಿನ್ನನ್ನು ಎಸೆದೇ ಎಸೆಯುವನು, ಹಿಡಿದೇ ಹಿಡಿಯುವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಇಗೋ, ಬಲಿಷ್ಠ ಮನುಷ್ಯನಾದ ನಿನ್ನನ್ನು ಯೆಹೋವನು ಎಸೆಯುವನು, ನಿನ್ನನ್ನು ಕೆಳಗೆ ಎಸೆಯುವನು, ನಿನ್ನನ್ನು ಗಟ್ಟಿಯಾಗಿ ಹಿಡಿಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಎಲೈ ಬಲಾಢ್ಯನೇ, ಸರ್ವೇಶ್ವರ ನಿನ್ನನ್ನು ಬಿಗಿಹಿಡಿದು ದೂರಕ್ಕೆಸೆಯುವರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17-18 “ಮನುಷ್ಯನೇ, ಯೆಹೋವನು ನಿನ್ನನ್ನು ಧ್ವಂಸ ಮಾಡುವನು. ಆತನು ನಿನ್ನನ್ನು ಚೆಂಡಿನಂತೆ ಉರುಳಿಸಿ ಬಹುದೂರಕ್ಕೆ ಅಂದರೆ ಬೇರೊಂದು ದೇಶದ ತೆರೆದ ತೋಳುಗಳಿಗೆ ಎಸೆದುಬಿಡುವನು. ಅಲ್ಲಿ ನೀನು ಸಾಯುವೆ” ಎಂದು ಹೇಳಿದನು. ಅದಕ್ಕೆ ಯೆಹೋವನು, “ನೀನು ನಿನ್ನ ರಥಗಳಲ್ಲಿ ಹೆಚ್ಚಳಪಡುತ್ತಿರುವೆ. ಆದರೆ ಆ ದೂರದೇಶದಲ್ಲಿರುವ ನಿನ್ನ ಹೊಸ ಅರಸನ ಬಳಿಯಲ್ಲಿ ಇದಕ್ಕಿಂತಲೂ ಶ್ರೇಷ್ಠವಾದ ರಥಗಳಿವೆ. ಅವನ ಅರಮನೆಯಲ್ಲಿ ನಿನ್ನ ರಥಗಳು ಮುಖ್ಯವಾದವುಗಳಾಗಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 “ಯೆಹೋವ ದೇವರು ನಿನ್ನನ್ನು ಬಲವಾದ ಬಂಧನದೊಂದಿಗೆ ಹಿಡಿದೇ ಹಿಡಿಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 22:17
6 ತಿಳಿವುಗಳ ಹೋಲಿಕೆ  

ಅವರಲ್ಲಿನ ಶ್ರೀಮಂತರು ತಮ್ಮ ಕೈಕೆಳಗಿನವರನ್ನು ನೀರಿಗೆ ಕಳುಹಿಸುತ್ತಾರೆ; ಅವರು ಕೊಳಗಳಿಗೆ ಹೋದಾಗ ನೀರು ಕಾಣುವದಿಲ್ಲ, ಬರೀ ಪಾತ್ರೆಗಳನ್ನು ತೆಗೆದುಕೊಂಡು ಹಿಂದಕ್ಕೆ ಬರುತ್ತಾರೆ; ಆಶೆಗೆಟ್ಟು ನಾಚಿಕೆಪಟ್ಟು ಮೋರೆ ಮುಚ್ಚಿಕೊಳ್ಳುತ್ತಾರೆ.


ಭೂಲೋಕವು ದುಷ್ಟರ ಕೈ ಸೇರಿದೆ; ಲೋಕದ ನ್ಯಾಯಾಧಿಪತಿಗಳ ಮುಖಗಳಿಗೆ ಮುಸುಕು ಹಾಕಿದ್ದಾನೆ. ಇದನ್ನು ಮಾಡಿದವನು ಆತನಲ್ಲದೆ ಮತ್ತೆ ಯಾರು?


ಅರಸನು ಅರಮನೆಯ ತೋಟದಿಂದ ತಾನು ದ್ರಾಕ್ಷಾರಸಪಾನ ಮಾಡಿದ ಗೃಹಕ್ಕೆ ತಿರಿಗಿ ಬಂದು ಎಸ್ತೇರಳು ಒರಗಿಕೊಳ್ಳುವ ಲೋಡಿನ ಮೇಲೆ ಹಾಮಾನನು ಬಿದ್ದುಕೊಂಡಿರುವದನ್ನು ಕಂಡು - ಇವನು ರಾಣಿಯನ್ನು ನನ್ನ ಮುಂದೆಯೇ ಅರಮನೆಯಲ್ಲಿ ಭಂಗಪಡಿಸಲೂ ಬೇಕೆಂದಿರುತ್ತಾನೋ ಅಂದನು. ಅರಸನ ಬಾಯಿಂದ ಈ ಮಾತು ಹೊರಟ ಕೂಡಲೇ ಸೇವಕರು ಹಾಮಾನನ ಮೋರೆಗೆ ಮುಸುಕು ಹಾಕಿದರು.


ಇಲ್ಲಿ ನಿನಗೇನು? ಇಲ್ಲಿ ನಿನಗೆ ಯಾರಿದ್ದಾರೆ? ಇಲ್ಲಿ ನಿನಗಾಗಿ ಗೋರಿಯನ್ನು ತೋಡಿಸಿಕೊಂಡಿದ್ದೀಯಾ? ಎತ್ತರದಲ್ಲಿ ನಿನಗೆ ಸಮಾಧಿಯನ್ನು ಕೊರೆಸುತ್ತಾ ಬಂಡೆಯನ್ನು ಕಡೆಯಿಸಿ ನಿನಗೆ ನಿವಾಸವನ್ನು ಮಾಡಿಸುತ್ತಾ ಇದ್ದೀಯೋ?


ನಿನ್ನನ್ನು ಚಂಡಿನಂತೆ ಸುತ್ತಿ ಸುತ್ತಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು; ದಣಿಯ ಮನೆಗೆ ಅವಮಾನ ತಂದವನೇ, ಅಲ್ಲೇ ಸಾಯುವಿ, ನಿನ್ನ ವೈಭವದ ರಥಗಳು ಅಲ್ಲೇ ಇರುವವು.


ಇಗೋ, ನಾನು ಈ ಸಾರಿ ದೇಶನಿವಾಸಿಗಳನ್ನು ಎಸೆದೇ ಬಿಡುವೆನು, ಅವರಿಗೆ ಬುದ್ಧಿಬರಲೆಂದು ಅವರನ್ನು ಬಾಧಿಸುವೆನು ಎಂದು ಯೆಹೋವನು ಅನ್ನುತ್ತಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು