ಯೆಶಾಯ 16:8 - ಕನ್ನಡ ಸತ್ಯವೇದವು J.V. (BSI)8 ಹೆಷ್ಬೋನಿನ ಭೂವಿುಯೂ ಸಿಬ್ಮದ ದ್ರಾಕ್ಷಾಲತೆಯೂ ನಿಸ್ಸಾರವಾಗಿವೆ; ಯಜ್ಜೇರಿನವರೆಗೆ ವ್ಯಾಪಿಸಿ ಅರಣ್ಯದಲ್ಲಿ ಹಬ್ಬಿ ಸಮುದ್ರದಾಚೆಗೆ ಸೇರುವಷ್ಟು ವಿಶಾಲವಾಗಿ ತನ್ನ ಶಾಖೆಗಳನ್ನು ಹರಡಿಕೊಂಡಿದ್ದ ಮೋವಾಬಿನ ರಾಜ ದ್ರಾಕ್ಷೆಗಳನ್ನು ಜನಾಂಗಗಳ ಒಡೆಯರು ಮುರಿದು ಬಿಟ್ಟಿದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಹೆಷ್ಬೋನಿನ ಭೂಮಿಯು, ಸಿಬ್ಮದ ದ್ರಾಕ್ಷಾಲತೆಯು ಒಣಗಿ ಹೋಗಿದೆ. ಯಜ್ಜೇರಿನವರೆಗೆ ವ್ಯಾಪಿಸಿ ಅರಣ್ಯದಲ್ಲಿ ಹಬ್ಬಿ, ಸಮುದ್ರದಾಚೆಗೆ ಸೇರುವಷ್ಟು ವಿಶಾಲವಾಗಿ ತನ್ನ ಶಾಖೆಗಳನ್ನು ಹರಡಿಕೊಂಡಿದ್ದ ಮೋವಾಬಿನ ರಾಜ ದ್ರಾಕ್ಷಿಗಳನ್ನು, ಜನಾಂಗಗಳ ಒಡೆಯರನ್ನು ತುಳಿದುಬಿಟ್ಟಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ನಿಸ್ಸಾರವಾಗಿದೆ ಹೆಷ್ಬೋನಿನ ಹೊಲ, ಸಿಬ್ಮದ ದ್ರಾಕ್ಷಾಲತೆ, ಒಮ್ಮೆ ವ್ಯಾಪಿಸಿತ್ತು ಆ ರಾಜ್ಯದ್ರಾಕ್ಷಿ ಯಜ್ಜೇರಿನವರೆಗೆ, ಹಬ್ಬಿತ್ತದರ ಶಾಖೆ ಮರುಭೂಮಿಗೆ, ಸಮುದ್ರದಾಚೆ, ಮಾಡಿತು ನಾಡಿನೊಡೆಯರನು ಕುಡಿದು ಮತ್ತರಾಗುವಂತೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಹೆಷ್ಬೋನಿನ ತೋಟಗಳು ಮತ್ತು ಸಿಬ್ಮದ ದ್ರಾಕ್ಷಾಲತೆಗಳು ದ್ರಾಕ್ಷಿಯನ್ನು ಫಲಿಸಲಾರದ ಕಾರಣ ಜನರು ವ್ಯಸನದಿಂದಿರುವರು. ಶತ್ರುಸೈನ್ಯವು ಯೆಜ್ಜೇರಿನಿಂದ ಮರುಭೂಮಿಯವರೆಗೂ ಮತ್ತು ಸಮುದ್ರದವರೆಗೂ ಆವರಿಸಿಕೊಂಡಿರುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಹೆಷ್ಬೋನ್ ಊರಿನ ಹೊಲ ಮತ್ತು ಸಿಬ್ಮ ಊರಿನ ದ್ರಾಕ್ಷಿ ಸಹ ನಿಸ್ಸಾರವಾಗಿವೆ. ಇತರ ಜನರ ಪ್ರಭುಗಳು ವಿಶಾಲವಾದ ದ್ರಾಕ್ಷಿಗಿಡಗಳನ್ನು ತುಳಿದು ಹಾಕಿದ್ದಾರೆ, ಆ ದ್ರಾಕ್ಷಿಗಿಡಗಳು ಯಜ್ಜೇರ್ ಊರಿನವರೆಗೂ ವ್ಯಾಪಿಸಿ, ಮರುಭೂಮಿಯಲ್ಲಿ ಹರಡಿತ್ತು. ಅದರ ಕೊಂಬೆಗಳು ಹಬ್ಬಿ, ಸಮುದ್ರದವರೆಗೆ ವಿಶಾಲವಾಗಿತ್ತು. ಅಧ್ಯಾಯವನ್ನು ನೋಡಿ |