ಯೆಶಾಯ 16:3 - ಕನ್ನಡ ಸತ್ಯವೇದವು J.V. (BSI)3 ಆಲೋಚನೆಹೇಳಿರಿ, ತೀರ್ಮಾನಿಸಿರಿ; ಮಟ್ಟ ಮಧ್ಯಾಹ್ನದಲ್ಲಿ ನಿಮ್ಮ ನೆರಳು ರಾತ್ರಿಯ ಕತ್ತಲಿನಂತೆ ದಟ್ಟವಾಗಿರಲಿ; ದೇಶ ಭ್ರಷ್ಟರನ್ನು ಮರೆಮಾಜಿರಿ, ಅಲೆಯುವವರನ್ನು ಬೈಲಿಗೆ ತರಬೇಡಿರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಆಲೋಚನೆ ಹೇಳಿರಿ, ತೀರ್ಮಾನಿಸಿರಿ; ನಡು ಮಧ್ಯಾಹ್ನದಲ್ಲಿ ನಿಮ್ಮ ನೆರಳು ರಾತ್ರಿಯ ಕತ್ತಲಿನಂತೆ ದಟ್ಟವಾದ ನೆರಳನ್ನು ಕೊಡಲಿ. ನಿಮ್ಮಲ್ಲಿರುವ ದೀನದಲಿತರನ್ನು ಸಂರಕ್ಷಿಸು, ತಪ್ಪಿಸಿಕೊಂಡು ಹೋಗುವ ಜನರ ವಿಷಯವನ್ನು ಬಯಲುಮಾಡಬೇಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಇಂತೆನ್ನುವರವರು ಯೆಹೂದ ಜನತೆಗೆ : “ನೀಡಿ ಸಲಹೆಯೊಂದನ್ನು ನಮಗೆ, ಕೊಡಿ ನ್ಯಾಯತೀರ್ಪನೆಮಗೆ, ಇರುಳಿನಂತಿರಲಿ ನಿಮ್ಮ ನೆರಳು ಉರಿಬಿಸಿಲೊಳೆಮಗೆ, ನೆಲೆನೀಡಿ ವಲಸಿಗರಿಗೆ, ದೂಡಬೇಡಿ ಅಲೆಯುವವರನು ಬಯಲಿಗೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಅವರು, “ನಮಗೆ ಸಹಾಯ ಮಾಡಿರಿ! ನಾವು ಮಾಡಬೇಕಾದದ್ದನ್ನು ತಿಳಿಸಿರಿ! ವೈರಿಗಳಿಂದ ನಮ್ಮನ್ನು ರಕ್ಷಿಸಿರಿ. ನಮ್ಮನ್ನು ನಡುಮಧ್ಯಾಹ್ನದ ಸೂರ್ಯನ ಶಾಖದಿಂದ ನೆರಳು ಕಾಪಾಡುವಂತೆ ನಮ್ಮನ್ನು ಕಾಪಾಡಿರಿ. ನಾವು ನಮ್ಮ ಶತ್ರುಗಳಿಂದ ಓಡಿಹೋಗುತ್ತಿದ್ದೇವೆ. ನಮ್ಮನ್ನು ಅಡಗಿಸಿಡಿರಿ, ವೈರಿಗಳ ಕೈಗೆ ನಮ್ಮನ್ನು ಕೊಡಬೇಡಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆಲೋಚಿಸಿ, ತೀರ್ಮಾನಿಸಿರಿ. ಮಟ್ಟ ಮಧ್ಯಾಹ್ನದಲ್ಲಿ ನಿಮ್ಮ ನೆರಳನ್ನು ರಾತ್ರಿಯಂತೆ ಮಾಡಿರಿ. ವಲಸಿಗರನ್ನು ಅಡಗಿಸಿರಿ. ಅಲೆಯುವವರನ್ನು ಬಯಲಿಗೆ ತರಬೇಡ. ಅಧ್ಯಾಯವನ್ನು ನೋಡಿ |