ಯೆಶಾಯ 10:22 - ಕನ್ನಡ ಸತ್ಯವೇದವು J.V. (BSI)22 ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದ ಒಂದು ಶೇಷ ಮಾತ್ರ ತಿರುಗಿಕೊಳ್ಳುವದು; ತುಂಬಿತುಳುಕುವ ನ್ಯಾಯಪ್ರವಾಹದ ಪ್ರಲಯ ನಿಶ್ಚಿತವಾಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದವರು ಮಾತ್ರ ತಿರುಗಿಕೊಳ್ಳುವರು. ನಾಶವಾಗುವುದಕ್ಕೆ ವಿಧಿಸಲ್ಪಟ್ಟದ್ದು, ನ್ಯಾಯನೀತಿಯಿಂದ ತುಂಬಿ ತುಳುಕುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಇಸ್ರಯೇಲೇ, ನಿನ್ನ ಜನರು ಸಮುದ್ರದ ಮರಳಿನಂತೆ ಅಸಂಖ್ಯಾತರಾಗಿ ಇದ್ದರೂ ಅವರಲ್ಲಿ ಕೆಲವರು ಮಾತ್ರ ಉಳಿದು ಹಿಂದಿರುಗುವರು. ಅವರ ಅಳಿವು ಶಾಸನಬದ್ಧವಾದುದು ಹಾಗೂ ಸಂಪೂರ್ಣವಾಗಿ ನ್ಯಾಯಸಮ್ಮತವಾದುದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ನಿನ್ನ ಜನರು ಸಮುದ್ರದ ಮರಳಿನಂತೆ ಬಹಳವಿರುವರು. ಆದರೆ ಅವರಲ್ಲಿ ಕೆಲವರೇ ಉಳಿದು ಕರ್ತನ ಬಳಿಗೆ ಬರುವರು. ಆ ಜನರು ದೇವರ ಬಳಿಗೆ ಹಿಂತಿರುಗುವರು. ಅದಕ್ಕಿಂತ ಮೊದಲು ನಿನ್ನ ದೇಶವು ನಾಶವಾಗುವದು. ದೇಶವು ನಾಶವಾಗುವದೆಂದು ದೇವರು ಪ್ರಕಟಿಸಿದ್ದಾನೆ. ಆ ಬಳಿಕ ದೇವರ ಒಳ್ಳೆತನವು ಆ ದೇಶಕ್ಕೆ ಬರುವದು. ಅದು ದಡತುಂಬಿ ಹರಿಯುವ ನದಿಯೋಪಾದಿಯಲ್ಲಿರುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ತಮ್ಮ ಜನರಾದ ಇಸ್ರಾಯೇಲರು ಸಮುದ್ರದ ಉಸುಬಿನಂತಿದ್ದರೂ, ಅವರಲ್ಲಿ ಉಳಿದವರು ಮಾತ್ರ ಹಿಂದಿರುಗುವರು. ಅವರ ಅಳಿವು ಶಾಸನಬದ್ಧವಾದುದು; ಹಾಗೂ ಸಂಪೂರ್ಣವಾಗಿ ನ್ಯಾಯಸಮ್ಮತವಾದುದು. ಅಧ್ಯಾಯವನ್ನು ನೋಡಿ |