Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 10:12 - ಕನ್ನಡ ಸತ್ಯವೇದವು J.V. (BSI)

12 ಆದಕಾರಣ ಕರ್ತನಾದ ನಾನು ಚೀಯೋನ್ ಪರ್ವತದಲ್ಲಿಯೂ ಯೆರೂಸಲೇವಿುನಲ್ಲಿಯೂ ನನ್ನ ಉದ್ದೇಶವನ್ನೆಲ್ಲಾ ನೆರವೇರಿಸಿದ ಮೇಲೆ ಅಶ್ಶೂರದ ರಾಜನ ಉಬ್ಬಟೆಯ ಕೊಚ್ಚಾಟಕ್ಕೂ ಗರ್ವದೃಷ್ಟಿಯ ಮೆರೆದಾಟಕ್ಕೂ ತಕ್ಕ ದಂಡನೆಯನ್ನು ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆದಕಾರಣ ಕರ್ತನಾದ ನಾನು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ನನ್ನ ಉದ್ದೇಶವನ್ನೆಲ್ಲಾ ನೆರವೇರಿಸಿದ ಮೇಲೆ, “ಅಶ್ಶೂರದ ರಾಜನ ಹೃದಯದ ದೊಡ್ಡಸ್ತಿಕೆಯ ಫಲಕ್ಕೂ, ಅವನ ಗರ್ವದೃಷ್ಟಿಯ ಮೆರೆದಾಟಕ್ಕೂ ತಕ್ಕ ದಂಡನೆಯನ್ನು ಮಾಡುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಆದರೆ ಸರ್ವೇಶ್ವರನಾದ ನಾನು ಸಿಯೋನ್ ಪರ್ವತದಲ್ಲೂ ಜೆರುಸಲೇಮಿನಲ್ಲೂ ನನ್ನ ಗುರಿಯನ್ನು ಸಾಧಿಸಿದ ಮೇಲೆ ಆ ಅಸ್ಸೀರಿಯದ ಅರಸನನ್ನು ಅವನ ದುರಹಂಕಾರಕ್ಕಾಗಿ, ಗರ್ವದ ಭಾವನೆಗಳಿಗಾಗಿ ಸರಿಯಾಗಿ ದಂಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಜೆರುಸಲೇಮಿಗೂ ಚೀಯೋನ್ ಪರ್ವತಕ್ಕೂ ಮಾಡಬೇಕೆಂದಿರುವ ಕಾರ್ಯಗಳನ್ನು ನನ್ನ ಒಡೆಯನು ಮಾಡಿ ತೀರಿಸುವನು. ಆ ಬಳಿಕ ಯೆಹೋವನು ಅಶ್ಶೂರವನ್ನು ಶಿಕ್ಷಿಸುವನು. ಅಶ್ಶೂರದ ಅರಸನು ಬಹಳವಾಗಿ ಉಬ್ಬಿಕೊಂಡಿರುತ್ತಾನೆ. ಅವನ ಗರ್ವವು ಅನೇಕ ದುಷ್ಕೃತ್ಯಗಳನ್ನು ನಡೆಸಿದೆ. ಅದಕ್ಕಾಗಿ ದೇವರು ಅವನನ್ನು ಶಿಕ್ಷಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದರೆ ಕರ್ತದೇವರು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತಮ್ಮ ಕಾರ್ಯಗಳನ್ನು ನೆರವೇರಿಸಿದ ಮೇಲೆ, “ಅಸ್ಸೀರಿಯದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು, ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿಸುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 10:12
44 ತಿಳಿವುಗಳ ಹೋಲಿಕೆ  

ಯೆರೂಸಲೇವಿುನಲ್ಲಿ ಉಳಿದವರು ಹರಡಿಕೊಳ್ಳುವರು; ಚೀಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ಧಿ ಹೊಂದುವರು; ಯೆಹೋವನ ಆಗ್ರಹವೇ ಇದನ್ನು ನೆರವೇರಿಸುವದು.


ಹೀಗಿರಲು ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ಅಶ್ಶೂರದ ಅರಸನನ್ನು ದಂಡಿಸಿದಂತೆ ಬಾಬೆಲಿನ ಅರಸನನ್ನೂ ಅವನ ದೇಶವನ್ನೂ ದಂಡಿಸುವೆನು.


ಇವರೂ ಇವರ ಪಿತೃಗಳೂ ಬೆಟ್ಟಗುಡ್ಡಗಳಲ್ಲಿ ಧೂಪಹಾಕಿ ನನ್ನನ್ನು ಹೀನೈಸಿ ನಡಿಸಿದ ಅಪರಾಧಗಳ ಪ್ರತಿಫಲವನ್ನು ಇವರ ಮಡಲಿಗೆ ಹಾಕುವೆನು; ಹೌದು, ಇವರ ಕಾರ್ಯದ ಫಲವನ್ನು ಅಳತೆಗೆ ಸರಿಯಾಗಿ ಮೊಟ್ಟಮೊದಲೇ ಇವರ ಮಡಲಿಗೆ ಸುರಿಯುವೆನು ಎಂದು ಯೆಹೋವನು ಹೇಳುತ್ತಾನೆ.


ನ್ಯಾಯವಿಚಾರಣೆಯ ಸಮಯ ಬಂದದೆ; ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಯಿತಲ್ಲಾ. ಅದು ನಮ್ಮಲ್ಲಿ ಪ್ರಾರಂಭವಾಗಲು ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಗತಿ ಏನಾಗಬಹುದು?


ಹೇಗಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ.


ಮರ ಒಳ್ಳೇದಂದರೆ ಅದರ ಫಲವೂ ಒಳ್ಳೇದನ್ನಿರಿ. ಮರ ಹುಳುಕು ಅಂದರೆ ಅದರ ಫಲವೂ ಹುಳುಕು ಅನ್ನಿರಿ. ಫಲದಿಂದಲೇ ಮರದ ಗುಣವು ಗೊತ್ತಾಗುವದು.


ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕರಾಜನನ್ನು ಹೊಗಳಿ ಕೊಂಡಾಡಿ ಕೀರ್ತಿಸುತ್ತೇನೆ; ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ; ಸೊಕ್ಕಿನಿಂದ ನಡೆಯುವವರನ್ನು ತಗ್ಗಿಸಬಲ್ಲನು.


ನೀರಾವರಿಯ ಯಾವ ಮರಗಳೂ ತಮ್ಮ ನೀಳವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗಲಿಸದಿರಲೆಂದೂ ನೀರನ್ನು ಹೀರುತ್ತಲೇ ಇರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ನಿಗುರಿಕೊಳ್ಳದಿರಲೆಂದೂ ಹೀಗಾಯಿತು; ಅವೆಲ್ಲಾ ಮರಣದ ಪಾಲಾಗುವವು, ಅಧೋಲೋಕವೇ ಅವುಗಳ ಗತಿ; ಪಾತಾಳಕ್ಕೆ ಇಳಿದುಹೋದವರ ಬಳಿಗೆ ನರಜನ್ಮದವರೊಂದಿಗೆ ಒಂದೇ ಗುಂಪಾಗಿ ಸೇರುವವು.


ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆ ವೃಕ್ಷವು ಬಹಳ ಎತ್ತರವಾಗಿ ಬೆಳೆದು ತನ್ನ ತುದಿಯನ್ನು ಮೋಡಕ್ಕೆ ತಗಲಿಸಿ ತನ್ನ ನೀಳದ ವಿಷಯವಾಗಿ ಉಬ್ಬಿಕೊಂಡದರಿಂದ


ಓಹೋ, ಬೆಂಕಿಯಿಕ್ಕಿ ಸುತ್ತುಮುತ್ತಲು ಕೊಳ್ಳಿಗಳನ್ನು ಹತ್ತಿಸಿಕೊಂಡಿರುವವರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ ನೀವು ಹತ್ತಿಸಿದ ಕೊಳ್ಳಿಗಳ ನಡುವೆಯೂ ನಡೆದರೂ ನಡೆಯಿರಿ. ಇಗೋ, ನನ್ನ ಹಸ್ತದಿಂದ ನಿಮಗಾಗುವ ಗತಿಯು ಇದೇ, ದುಃಖಕ್ಕೆ ಒಳಗಾಗಿ ಸಾಯುವಿರಿ.


ಹೀಗಿರಲು ಯಾಕೋಬ್ಯರು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿ ಪುಡಿಮಾಡಿ ಅಶೇರವೆಂಬ ವಿಗ್ರಹಸ್ತಂಭಗಳನ್ನೂ ಸೂರ್ಯಸ್ತಂಭಗಳನ್ನೂ ಇನ್ನು ಪ್ರತಿಷ್ಠಿಸದೆ ಹೋದರೆ ಅದೇ ಅವರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗುವದು, ಮತ್ತು ಅವರ ಪಾಪಪರಿಹಾರಕ್ಕೆ ಗುರುತಾದ ಪೂರ್ಣಫಲವೂ ಇದೇ.


ಇಟ್ಟಿಗೆಗಳು ಬಿದ್ದುಹೋದವು, ಹೋಗಲಿ, ಕೆತ್ತಿದ ಕಲ್ಲಿನಿಂದ ಕಟ್ಟುವೆವು; ಅತ್ತಿಮರಗಳು ಕಡಿಯಲ್ಪಟ್ಟವು, ಇರಲಿ,


ಕುಲಹೀನರು ಬೊಗ್ಗುವರು, ಕುಲೀನರು ಕುಗ್ಗುವರು, ಉನ್ನತರ ದೃಷ್ಟಿಯು ತಗ್ಗುವದು.


ಸಾಮಾನ್ಯರ ಗರ್ವದೃಷ್ಟಿಯು ತಗ್ಗಿಹೋಗುವದು, ಮುಖಂಡರ ಅಹಂಕಾರವು ಕುಗ್ಗಿಹೋಗುವದು, ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.


ಕಣ್ಣು ರೆಪ್ಪೆಗಳನ್ನೆತ್ತಿಕೊಂಡು ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರುಂಟು.


ಮನುಷ್ಯರ ಕೋಪವೂ ನಿನ್ನ ಘನಕ್ಕೇ ಸಾಧಕವಾಗುವದು; ಕೋಪಶೇಷವನ್ನು ನಡುಕಟ್ಟಿನಂತೆ ಬಿಗಿದುಕೊಳ್ಳುವಿ.


ನೀನು ಅವರನ್ನು ಸಂಹರಿಸಿ ಭೂವಿುಯ ಮೇಲೆ ಅವರ ಸಂತತಿಯೇ ಇಲ್ಲದಂತೆ ಮಾಡುವಿ; ಅವರ ವಂಶದವರು ಮನುಷ್ಯರೊಳಗೆ ಉಳಿಯುವದೇ ಇಲ್ಲ.


ದೀನರನ್ನು ಉದ್ಧರಿಸುವವನೂ ಹವ್ಮಿುನ ಕಣ್ಣುಳ್ಳವರನ್ನು ತಗ್ಗಿಸಿಬಿಡುವವನೂ ನೀನಲ್ಲವೋ?


ಧೀರಹೃದಯರು ಸುಲಿಗೆಯಾಗಿ ದೀರ್ಘನಿದ್ರೆಗೈದಿದ್ದಾರೆ; ಎಲ್ಲಾ ಶೂರರ ಕೈ ನಿಂತುಹೋದವು.


ಆ ದಿನದಲ್ಲಿ ಯೆಹೋವನು ಆಕಾಶಮಂಡಲದ ದೂತಸೈನ್ಯವನ್ನೂ ಭೂಮಂಡಲದ ನೆಲದೊಡೆಯರನ್ನೂ ದಂಡಿಸುವನು.


ಯೆಹೋವನು ತನ್ನ ಪ್ರಜೆಯ ಘಾತಕರನ್ನು ಹೊಡೆದಂತೆ ಆ ತನ್ನ ಪ್ರಜೆಯನ್ನು ಹೊಡೆದನೋ? ಅವರಿಗಾದಂಥ ಸಂಹಾರವು ಆ ಪ್ರಜೆಗೆ ಆಯಿತೋ?


ಹೀಗಿರುವದರಿಂದ ನಾನು ಈ ಜನರ ಮಧ್ಯದಲ್ಲಿ ಅಧಿಕಾಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಇನ್ನು ಮಾಡುವೆನು; ಇವರ ಜ್ಞಾನಿಗಳ ಜ್ಞಾನವು ಅಳಿಯುವದು, ವಿವೇಕಿಗಳ ವಿವೇಕವು ಅಡಗುವದು ಎಂದು ಹೇಳಿದನು.


ಸೂರೆಯಾಗದಿದ್ದರೂ ಸೂರೆಮಾಡಿದಿ, ಬಾಧೆಪಡದಿದ್ದರೂ ಬಾಧಿಸಿದಿ; ನಿನ್ನ ಗತಿಯನ್ನು ಏನು ಹೇಳಲಿ; ನೀನು ಸೂರೆಮಾಡಿ ಬಿಟ್ಟ ಮೇಲೆ ನೀನೂ ಸೂರೆಯಾಗುವಿ! ಬಾಧಿಸಿ ಬಿಟ್ಟ ಮೇಲೆ ನಿನ್ನನ್ನೂ ಬಾಧಿಸುವರು.


ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದಿ? ಯಾರಿಗೆ ವಿರೋಧವಾಗಿ ಬಾಯ್ದೆರೆದು ಒದರಿದಿ? ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾಯೇಲ್ಯರ ಸದಮಲಸ್ವಾವಿುಯನ್ನಲ್ಲವೇ!


ನೀನು ನನಗೆ ವಿರೋಧವಾಗಿ ಕುಪಿತನಾಗಿರುವದೂ ಉಬ್ಬಿಕೊಂಡಿರುವದೂ ನನಗೆ ತಿಳಿದುಬಂತು. ಆದದರಿಂದ ನಿನಗೆ ಮೂಗುದಾರವನ್ನೂ ಕಡಿವಾಣವನ್ನೂ ಹಾಕಿ ಬಂದ ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು ಎಂಬದಾಗಿ ಹೇಳಿದ್ದಾನೆ.


ಇಗೋ, ನನ್ನ ಹೆಸರುಗೊಂಡಿರುವ ಪಟ್ಟಣದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಂಡೀರೋ? ಆಗುವದೇ ಇಲ್ಲ. ಖಡ್ಗವೇ, ಭೂನಿವಾಸಿಗಳನ್ನೆಲ್ಲ ಸಂಹರಿಸಲಿಕ್ಕೆ ಬಾ ಎಂದು ಕೂಗುವೆನು. ಇದು ಸೇನಾಧೀಶ್ವರನಾದ ಯೆಹೋವನೆಂಬ ನನ್ನ ನುಡಿ.


ಸೊಕ್ಕಿನ ರಾಜ್ಯವು ಎಡವಿಬೀಳುವದು, ಅದನ್ನು ಯಾರೂ ಎತ್ತರು; ಅದರ ಪಟ್ಟಣಗಳಿಗೆ ಬೆಂಕಿಹೊತ್ತಿಸುವೆನು, ಅದು ಸುತ್ತುಮುತ್ತಣದನ್ನೆಲ್ಲಾ ನುಂಗಿಬಿಡುವದು.


ಕಿತ್ತೀಮೆಂಬ ಸ್ಥಳದಿಂದ ಜನರು ಹಡಗುಗಳಲ್ಲಿ ಬಂದು ಅಶ್ಯೂರ್ಯರನ್ನೂ ಏಬೆರ್ ಜನರನ್ನೂ ಸೋಲಿಸುವರು; ಅವರಿಗೂ ನಾಶವುಂಟಾಗುವದು ಅಂದನು.


ಆದರೆ ಅವರ ವಿರೋಧಿಗಳು ಹಮ್ಮಿನಿಂದ ತಪ್ಪಾದ ಭಾವನೆ ಮಾಡಿಕೊಂಡು - ಇದು ನಮ್ಮ ಭುಜಬಲದಿಂದಲೇ ಹೊರತು ಯೆಹೋವನಿಂದ ಆಗಲಿಲ್ಲ ಅಂದುಕೊಂಡಾರೆಂದು ನಾನು ಹಿಂದೆಗೆದೆನು ಎಂಬದೇ.


ಗರ್ವದ ದೃಷ್ಟಿ ಕೊಬ್ಬಿದ ಹೃದಯ, ದುಷ್ಟರ ಭಾಗ್ಯ, ಇವು ಧರ್ಮವಿರುದ್ಧ.


ಸೇನಾಧೀಶ್ವರನಾದ ಯೆಹೋವನ [ನ್ಯಾಯನಿರ್ಣಯ] ದಿವಸವು ಗರ್ವದಿಂದ ಹೆಚ್ಚಿಕೊಂಡಿರುವ ಸಮಸ್ತಕ್ಕೂ ಸಂಭವಿಸುವದು; ಆಗ ಅದೆಲ್ಲಾ ತಗ್ಗುವದು.


ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು; ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯಮಾಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು