Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 9:25 - ಕನ್ನಡ ಸತ್ಯವೇದವು J.V. (BSI)

25 ಆಹಾ, ಐಗುಪ್ತ್ಯರು ಯೆಹೂದ್ಯರು ಎದೋಮ್ಯರು ಅಮ್ಮೋನ್ಯರು ಮೋವಾಬ್ಯರು ಚಂಡಿಕೆಬಿಟ್ಟುಕೊಂಡಿರುವ ಅರಣ್ಯನಿವಾಸಿಗಳು, ಅಂತು ಸುನ್ನತಿಯುಳ್ಳವರಾದರೂ ಸುನ್ನತಿಯಿಲ್ಲದ ಇವರೆಲ್ಲರನ್ನೂ ನಾನು ದಂಡಿಸುವ ದಿನಗಳು ಬರುತ್ತವೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 “ಆಹಾ, ಐಗುಪ್ತರು, ಯೆಹೂದ್ಯರು, ಎದೋಮ್ಯರು, ಅಮ್ಮೋನ್ಯರು, ಮೋವಾಬ್ಯರು, ಚಂಡಿಕೆಯನ್ನು ಬಿಟ್ಟುಕೊಂಡಿರುವ ಅರಣ್ಯದ ನಿವಾಸಿಗಳು, ಅಂತು ಸುನ್ನತಿಯುಳ್ಳವರಾದರೂ ಸುನ್ನತಿಯಿಲ್ಲದ ಇವರೆಲ್ಲರನ್ನೂ ನಾನು ದಂಡಿಸುವ ದಿನಗಳು ಬರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 “ಈಜಿಪ್ಟರು, ಯೆಹೂದ್ಯರು, ಎದೋಮ್ಯರು, ಅಮ್ಮೋನ್ಯರು, ಮೊವಾಬ್ಯರು, ಮುಂದಲೆ ಕೂದಲನ್ನು ಕತ್ತರಿಸಿಕೊಳ್ಳುವ ಅರಣ್ಯವಾಸಿಗಳು, ಅಂತು ದೇಹದಲ್ಲಿ ಮಾತ್ರ ಸುನ್ನತಿಯುಳ್ಳವರು, ಇವರೆಲ್ಲರನ್ನು ದಂಡಿಸುವ ದಿನಗಳು ಬರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 “ಕೇವಲ ದೈಹಿಕವಾಗಿ ಸುನ್ನತಿಯನ್ನು ಮಾಡಿಕೊಂಡ ಜನರನ್ನು ನಾನು ಶಿಕ್ಷಿಸುವ ಕಾಲ ಬರಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25-26 “ಇಗೋ, ನಾನು ಸುನ್ನತಿ ಇಲ್ಲದವರ ಸಂಗಡ ಸುನ್ನತಿ ಉಳ್ಳವರೆಲ್ಲರನ್ನೂ, ಈಜಿಪ್ಟನ್ನೂ, ಯೆಹೂದವನ್ನೂ, ಎದೋಮನ್ನೂ, ಅಮ್ಮೋನನ ಮಕ್ಕಳನ್ನೂ, ಮೋವಾಬನ್ನೂ, ಮರುಭೂಮಿಯ ನಿವಾಸಿಗಳಾಗಿರುವ ಕಟ್ಟಕಡೆಯ ಮೂಲೆಯಲ್ಲಿ ಇರುವವರನ್ನೂ ನಾನು ಶಿಕ್ಷಿಸುವ ದಿವಸಗಳು ಬರುತ್ತವೆ. ಏಕೆಂದರೆ ಈ ಜನಾಂಗಗಳವರು ಸುನ್ನತಿಯಿಲ್ಲದವರು. ಇಸ್ರಾಯೇಲಿನ ಮನೆತನದವರೆಲ್ಲರೂ ಹೃದಯದಲ್ಲಿ ಸುನ್ನತಿ ಇಲ್ಲದವರಾಗಿದ್ದಾರೆ,” ಎಂದು ಯೆಹೋವ ದೇವರು ಅನ್ನುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 9:25
17 ತಿಳಿವುಗಳ ಹೋಲಿಕೆ  

ಭೂವಿುಯ ಸಕಲಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಅರಿತುಕೊಂಡಿದ್ದೇನೆ; ಆದಕಾರಣ ನಿಮ್ಮ ಎಲ್ಲಾ ಪಾಪಗಳ ಫಲವನ್ನು ನಿಮಗೆ ತಿನ್ನಿಸುವೆನು.


ನೀನು ಅನ್ಯರ ಕೈಯಿಂದ ಸುನ್ನತಿಹೀನರ ಮರಣಕ್ಕೆ ಗುರಿಯಾಗುವಿ; ನಾನೇ ನುಡಿದಿದ್ದೇನೆ, ಇದು ಕರ್ತನಾದ ಯೆಹೋವನ ಸಂಕಲ್ಪ.


ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.


ಆದರೆ ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮ ಸಂಬಂಧಪಟ್ಟದ್ದೇ; ಇಂಥಾ ಸುನ್ನತಿಯಿದ್ದವನಿಗೆ ಬರುವ ಹೊಗಳಿಕೆಯು ದೇವರಿಂದಲೇ ಹೊರತು ಮನುಷ್ಯರಿಂದ ಬರುವದಲ್ಲ.


ನಾನು ತಮಗೆ ವಿರೋಧವಾಗಿ ನಡೆದುಕೊಂಡು ಶತ್ರುದೇಶಕ್ಕೆ [ಸೆರೆಯವರನ್ನಾಗಿ] ಬರಮಾಡಬೇಕಾಯಿತೆಂದೂ ಒಪ್ಪಿ ತಮ್ಮ ಮೊಂಡವಾದ ಮನಸ್ಸನ್ನು ನನ್ನ ಆಜ್ಞೆಗೆ ಒಳಪಡಿಸಿ, ತಮ್ಮ ಪಾಪದಿಂದುಂಟಾದ ಶಿಕ್ಷೆಯನ್ನು ಸ್ವೀಕರಿಸುವದಾದರೆ


ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ - ಸುನ್ನತಿಯಿಲ್ಲದ ಈ ಕಾವಲುದಂಡಿನವರಿಗೆ ವಿರೋಧವಾಗಿ ಹೋಗೋಣ ಬಾ; ಒಂದು ವೇಳೆ ಯೆಹೋವನು ತಾನೇ ನಮಗೋಸ್ಕರ ಕಾರ್ಯನಡಿಸುವನು. ಬಹುಜನರಿಂದಾದರೂ ಸ್ವಲ್ಪಜನರಿಂದಾದರೂ ರಕ್ಷಿಸುವದು ಯೆಹೋವನಿಗೆ ಅಸಾಧ್ಯವಲ್ಲ ಎಂದು ಹೇಳಲು


ದಾವೀದನು - ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದುಹಾಕುವವನಿಗೆ ಸಿಕ್ಕುವದೇನೆಂದು ಹೇಳಿದಿರಿ ಎಂದು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರನ್ನು ಕೇಳಲು


ಯೆಹೂದದವರೇ, ಯೆರೂಸಲೇವಿುನ ನಿವಾಸಿಗಳೇ, ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿ ಯೆಹೋವನಿಗಾಗಿ ಸುನ್ನತಿಯಾಗಿರಿ; ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿವಿುತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು ಯಾರೂ ಆರಿಸಲಾಗದಷ್ಟು ರಭಸವಾಗಿ ಧಗಧಗಿಸುವದು.


ಇಂಥಾ ವೈಭವದಿಂದಲೂ ಮಹಿಮೆಯಿಂದಲೂ ಕೂಡಿದ ನೀನು ಏದೆನಿನ ವೃಕ್ಷಗಳಲ್ಲಿ ಯಾವದಕ್ಕಿಂತ ಕಡಿಮೆ? ಆದರೂ ನೀನು ಏದೆನಿನ ವೃಕ್ಷಗಳೊಂದಿಗೆ ಅಧೋಲೋಕಕ್ಕೆ ತಳ್ಳಲ್ಪಟ್ಟು ಸುನ್ನತಿಹೀನರ ನಡುವೆ ಖಡ್ಗಹತರ ಸಂಗಡ ಒರಗಿಹೋಗುವಿ. ಫರೋಹನೂ ಅವನ ಎಲ್ಲಾ ಪ್ರಜೆಗಳೂ ಇದೇ ಗತಿಯನ್ನು ಹೊಂದುವರು ಎಂಬದು ಕರ್ತನಾದ ಯೆಹೋವನ ನುಡಿ.


ಚಂಡಿಕೆ ಬಿಡಬಾರದು, ಗಡ್ಡವನ್ನು ವಿಕಾರಗೊಳಿಸಬಾರದು.


ಸಮುದ್ರದ ಆಚಿನ ಕರಾವಳಿಯ ಅರಸರು, ದೆದಾನ್ಯರು, ತೇಮಾದೇಶದವರು, ಬೂಜ್‍ದೇಶದವರು, ಚಂಡಿಕೆಬಿಟ್ಟುಕೊಂಡಿರುವವರೆಲ್ಲರು,


ಅವರ ಒಂಟೆಗಳು ಕೊಳ್ಳೆಯಾಗುವವು, ಅವರ ಲೆಕ್ಕವಿಲ್ಲದ ದನಕುರಿಗಳು ಸೂರೆಹೋಗುವವು; ಚಂಡಿಕೆಬಿಟ್ಟುಕೊಂಡಿರುವ ಜನರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು; ಎಲ್ಲಾ ಕಡೆಯಿಂದಲೂ ವಿಪತ್ತನ್ನು ಅವರ ಮೇಲೆ ಬರಮಾಡುವೆನು.


ಇಸ್ರಾಯೇಲ್ ವಂಶದವರೇ, ನೀವು ನನ್ನ ಆಹಾರವಾದ ರಕ್ತಮೇದಸ್ಸುಗಳನ್ನು ಅರ್ಪಿಸುವಾಗ ತನುಮನಗಳಲ್ಲಿ ಸುನ್ನತಿಹೀನರಾದ ಮ್ಲೇಚ್ಫರನ್ನು ನನ್ನ ಪವಿತ್ರಾಲಯದೊಳಗೆ ಬರಮಾಡಿ ನನ್ನ ಮಂದಿರವನ್ನು ಹೊಲೆಗೆಡಿಸಿ ನನ್ನ ಒಡಂಬಡಿಕೆಯನ್ನು ಭಂಗಪಡಿಸಿ ನಿಮ್ಮ ಅವಿುತದುರಾಚಾರಗಳ ಲೆಕ್ಕವನ್ನು ಹೆಚ್ಚಿಸಿದ್ದೀರಿ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು