ಯೆರೆಮೀಯ 8:16 - ಕನ್ನಡ ಸತ್ಯವೇದವು J.V. (BSI)16 ವೈರಿಯ ಕುದುರೆಗಳ ಬುಸುಗಾಟವು ದಾನಿನಿಂದ ಕೇಳಬರುತ್ತದೆ; ತುರಂಗಗಳ ಕೆನೆತದ ಶಬ್ದಕ್ಕೆ ದೇಶವೆಲ್ಲಾ ಕಂಪಿಸುತ್ತದೆ; ಶತ್ರುಗಳು ಬಂದರು, ಸೀಮೆಯನ್ನೂ ಅದರಲ್ಲಿರುವ ಸಮಸ್ತವನ್ನೂ ಪಟ್ಟಣವನ್ನೂ ಪಟ್ಟಣದ ನಿವಾಸಿಗಳನ್ನೂ ನುಂಗಿಬಿಟ್ಟರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ವೈರಿಯ ಕುದುರೆಗಳ ಬುಸುಗಾಟವು ದಾನನಿಂದ ಕೇಳಿಬರುತ್ತದೆ; ತುರಂಗಗಳ (ಯುದ್ಧದ ಕುದುರೆ) ಕೆನೆತದ ಶಬ್ದಕ್ಕೆ ದೇಶವೆಲ್ಲಾ ಕಂಪಿಸುತ್ತದೆ. ಶತ್ರುಗಳು ಬಂದರು, ಸೀಮೆಯನ್ನೂ, ಅದರಲ್ಲಿರುವ ಸಮಸ್ತವನ್ನೂ, ಪಟ್ಟಣವನ್ನೂ, ಪಟ್ಟಣದ ನಿವಾಸಿಗಳನ್ನೂ ನುಂಗಿಬಿಟ್ಟರು” ಎಂದು ಹೇಳುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ವೈರಿ ಕುದುರೆಗಳ ಬುಸುಗುಟ್ಟುವಿಕೆ ಏಕೆ ಕೇಳಿಬರುತ್ತಿದೆ ದಾನಿನಿಂದ? ನಾಡನ್ನೆ ಕಂಪಿಸುತ್ತಿದೆ ಅವುಗಳ ಕೆನೆತದ ನಾದ. ಶತ್ರುಗಳು ಬಂದೇಬಿಟ್ಟರು ! ನಾಡನ್ನೂ ಅದರಲ್ಲಿ ಇರುವುದೆಲ್ಲವನ್ನೂ, ನಗರವನ್ನೂ ಅದರ ನಿವಾಸಿಗಳನ್ನೂ ನುಂಗಿಯೇ ಬಿಟ್ಟರು !” ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ದಾನ್‌ಕುಲದವರ ಪ್ರದೇಶದಿಂದ ನಾವು ಶತ್ರುಗಳ ಕುದುರೆಗಳ ಕೆನೆತವನ್ನು ಕೇಳುತ್ತಿದ್ದೇವೆ. ಅವುಗಳ ಪಾದಗಳ ಬಡಿತದಿಂದ ಭೂಮಿ ನಡುಗುತ್ತಿದೆ. ಅವರು ನಮ್ಮ ಪ್ರದೇಶವನ್ನು ಮತ್ತು ಅಲ್ಲಿದ್ದ ಎಲ್ಲವನ್ನು ಹಾಳುಮಾಡಲು ಬಂದಿದ್ದಾರೆ. ಅವರು ನಗರವನ್ನು ಮತ್ತು ಅಲ್ಲಿದ್ದ ಎಲ್ಲಾ ಜನರನ್ನು ಹಾಳುಮಾಡಲು ಬಂದಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಅವನ ಕುದುರೆಗಳ ಶ್ವಾಸವು ದಾನಿನಿಂದ ಕೇಳಿಸಿತು. ಅವನ ಬಲವಾದವುಗಳ ಕೆನೆತದ ಶಬ್ದದಿಂದ ದೇಶವೆಲ್ಲಾ ನಡುಗುತ್ತದೆ. ಏಕೆಂದರೆ, ಅವರು ದೇಶವನ್ನೂ, ಅದರಲ್ಲಿರುವುದೆಲ್ಲವನ್ನೂ, ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ನುಂಗಲು ಬಂದಿದ್ದಾರೆ. ಅಧ್ಯಾಯವನ್ನು ನೋಡಿ |