ಯೆರೆಮೀಯ 8:13 - ಕನ್ನಡ ಸತ್ಯವೇದವು J.V. (BSI)13 ನಾನು ಇವರನ್ನು ನಿರ್ಮೂಲಮಾಡಿ ಕೊಚ್ಚಿಬಿಡುವೆನು; ದ್ರಾಕ್ಷೆಯ ಬಳ್ಳಿಯಲ್ಲಿಯೂ ಅಂಜೂರದ ಮರದಲ್ಲಿಯೂ ಹಣ್ಣಿರುವದಿಲ್ಲ, ಎಲೆಯು ಬಾಡುವದು; ನಾನು ಹಾಳು ಮಾಡುವವರನ್ನು ಅವರಿಗೆ ನೇವಿುಸುವೆನು. ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ನಾನು ಇವರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಿಬಿಡುವೆನು. ದ್ರಾಕ್ಷಿಯ ಬಳ್ಳಿಯಲ್ಲಿಯೂ, ಅಂಜೂರದ ಮರದಲ್ಲಿಯೂ ಹಣ್ಣಿರುವುದಿಲ್ಲ, ಎಲೆಯು ಬಾಡುವುದು; ನಾನು ಹಾಳುಮಾಡುವವರನ್ನು ಅವರಿಗೆ ನೇಮಿಸುವೆನು” ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 “ನಾನು ಕೊಯ್ಲಿಗೆ ಕೈಹಾಕಲು ನೋಡಿದೆ. ಆದರೆ ದ್ರಾಕ್ಷೆಯ ಬಳ್ಳಿಗಳಲ್ಲಿ ಹಣ್ಣಿಲ್ಲ, ಅಂಜೂರದ ಮರದಲ್ಲಿ ಫಲವಿಲ್ಲ. ಎಲೆಯೂ ಬಾಡಿಹೋಗಿದೆ. ಪರರ ತುಳಿತಕ್ಕೆ ಈಡಾಗಿ ಇರುವುದು ಕಾಣುತ್ತದೆ. ಇದು ಸರ್ವೇಶ್ವರನಾದ ನನ್ನ ನುಡಿ.” ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 “ನಾನು ಅವರ ಹಣ್ಣುಗಳನ್ನೂ ಬೆಳೆಗಳನ್ನೂ ಕಿತ್ತುಕೊಂಡು ಅವರಿಗೆ ಸುಗ್ಗಿಯಾಗದಂತೆ ಮಾಡುತ್ತೇನೆ.” ಇದು ಯೆಹೋವನ ನುಡಿ. ದ್ರಾಕ್ಷಿಬಳ್ಳಿಯಲ್ಲಿ ದ್ರಾಕ್ಷಿಗಳಿರುವದಿಲ್ಲ. ಅಂಜೂರದ ಮರದಲ್ಲಿ ಒಂದಾದರೂ ಅಂಜೂರದ ಹಣ್ಣು ಇರುವದಿಲ್ಲ. ಎಲೆಗಳು ಸಹ ಒಣಗಿ ಉದುರುವವು. ನಾನು ಅವರಿಗೆ ಕೊಟ್ಟ ವಸ್ತುಗಳನ್ನು ಕಿತ್ತುಕೊಳ್ಳುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 “ ‘ನಾನು ಅವರ ಫಸಲನ್ನು ನಿರ್ಮೂಲ ಮಾಡಿಬಿಡುವೆನು, ಎಂದು ಯೆಹೋವ ದೇವರು ಹೇಳುತ್ತಾರೆ. ದ್ರಾಕ್ಷಿ ಗಿಡದಲ್ಲಿ ದ್ರಾಕ್ಷಿ ಹಣ್ಣುಗಳು ಇರುವುದಿಲ್ಲ. ಅಂಜೂರ ಮರದಲ್ಲಿ ಅಂಜೂರ ಹಣ್ಣುಗಳು ಇರುವುದಿಲ್ಲ. ಎಲೆಯು ಬಾಡುವುದು. ನಾನು ಅವರಿಗೆ ಕೊಟ್ಟವುಗಳು ಅವರನ್ನು ಬಿಟ್ಟು ಹೋಗುವುವು.’ ” ಅಧ್ಯಾಯವನ್ನು ನೋಡಿ |