Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 52:13 - ಕನ್ನಡ ಸತ್ಯವೇದವು J.V. (BSI)

13 ಯೆಹೋವನ ಆಲಯವನ್ನೂ ಅರಮನೆಯನ್ನೂ ಯೆರೂಸಲೇವಿುನ ಎಲ್ಲಾ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವನು ಯೆಹೋವನ ಆಲಯವನ್ನೂ, ಅರಮನೆಯನ್ನೂ ಮತ್ತು ಯೆರೂಸಲೇಮಿನ ಎಲ್ಲಾ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನೆಬೂಜರದಾನನು ಯೆಹೋವನ ಆಲಯವನ್ನು ಸುಟ್ಟನು. ಅವನು ಜೆರುಸಲೇಮಿನಲ್ಲಿದ್ದ ಅರಮನೆಯನ್ನು ಮತ್ತು ಉಳಿದೆಲ್ಲ ಮನೆಗಳನ್ನು ಸುಟ್ಟುಬಿಟ್ಟನು. ಅವನು ಜೆರುಸಲೇಮಿನ ಎಲ್ಲಾ ಮುಖ್ಯ ಕಟ್ಟಡಗಳನ್ನು ಸುಟ್ಟುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ, ಯೆರೂಸಲೇಮಿನಲ್ಲಿರುವ ಸಮಸ್ತ ಮನೆಗಳನ್ನೂ, ಪ್ರತಿ ದೊಡ್ಡಮನುಷ್ಯರ ಮನೆಗಳನ್ನೂ ಬೆಂಕಿಯಿಂದ ಸುಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 52:13
32 ತಿಳಿವುಗಳ ಹೋಲಿಕೆ  

ಹೀಗಿರಲು ನಿಮ್ಮ ದೆಸೆಯಿಂದ ಚೀಯೋನ್ ಪಟ್ಟಣವು ಹೊಲದಂತೆ ಗೇಯಲ್ಪಡುವದು, ಯೆರೂಸಲೇಮು ಹಾಳುದಿಬ್ಬಗಳಾಗುವದು, ಯೆಹೋವನ ಆಲಯದ ಪರ್ವತವು ಕಾಡುಗುಡ್ಡಗಳಂತಾಗುವದು.


ದೇವರೇ, ಮ್ಲೇಚ್ಫರು ನಿನ್ನ ಸ್ವಾಸ್ತ್ಯವನ್ನು ಹೊಕ್ಕು ನಿನ್ನ ಪರಿಶುದ್ಧಾಲಯವನ್ನು ಹೊಲೆಮಾಡಿದರು; ಯೆರೂಸಲೇಮ್ ಪಟ್ಟಣವನ್ನು ಹಾಳು ದಿಬ್ಬಗಳಾಗಿ ಮಾಡಿಬಿಟ್ಟರು.


[ಅವನ ಜನರು] ಯೆರೂಸಲೇವಿುನ ಪೌಳಿಗೋಡೆಗಳನ್ನು ಕೆಡವಿ ಅವರ ಎಲ್ಲಾ ರಾಜಮಂದಿರಗಳನ್ನೂ ದೇವಾಲಯವನ್ನೂ ಸುಟ್ಟುಬಿಟ್ಟು ಅಮೂಲ್ಯ ವಸ್ತುಗಳನ್ನು ನಾಶಮಾಡಿದರು.


ಇಗೋ, ಯೆಹೋವನು ಆಜ್ಞಾಪಿಸಲು ದೊಡ್ಡ ಮನೆಯು ಹೊಡೆಯಲ್ಪಟ್ಟು ಚೂರುಚೂರಾಗುವದು, ಚಿಕ್ಕ ಮನೆಯೂ ಮುರಿದುಹೋಗುವದು.


ಆದಕಾರಣ ನಾನು ಯೆಹೂದದ ಮೇಲೆ ಬೆಂಕಿಯನ್ನು ಸುರಿಸುವೆನು; ಅದು ಯೆರೂಸಲೇವಿುನ ಅರಮನೆಗಳನ್ನು ನುಂಗಿಬಿಡುವದು.


ಕರ್ತನು ತನ್ನ ಯಜ್ಞವೇದಿಯನ್ನು ತಿರಸ್ಕರಿಸಿ ತನ್ನ ಪವಿತ್ರಾಲಯಕ್ಕೆ ಅಸಹ್ಯಪಟ್ಟು ಚೀಯೋನಿನ ಅರಮನೆಗಳ ಗೋಡೆಗಳನ್ನು ಶತ್ರು ವಶಮಾಡಿದ್ದಾನೆ; ಉತ್ಸವದಿನದಲ್ಲಿ ಘೋಷಿಸುವಂತೆ ಶತ್ರುಗಳು ಯೆಹೋವನ ಮಂದಿರದಲ್ಲಿ ಜಯಘೋಷವೆತ್ತಿದ್ದಾರೆ.


ಯೆಹೋವನ ಆಲಯವನ್ನೂ ಅರಮನೆಯನ್ನೂ ಯೆರೂಸಲೇವಿುನ ಎಲ್ಲಾ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.


ಆಗ ಆತನು - ಇವುಗಳನ್ನೆಲ್ಲಾ ನೋಡುತ್ತೀರಲ್ಲವೇ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ, ಎಲ್ಲಾ ಕೆಡವಲ್ಪಡುವದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.


ಲೆಬನೋನೇ, ನಿನ್ನ ಬಾಗಿಲುಗಳನ್ನು ತೆರೆ, ಬೆಂಕಿಯು ನಿನ್ನ ದೇವದಾರುಗಳನ್ನು ನುಂಗಲಿ!


ಇಸ್ರಾಯೇಲ್ ವಂಶದವರಿಗೆ ಹೀಗೆ ಸಾರು - ಹಾ, ನಿಮಗೆ ಮುಖ್ಯಬಲವೂ ನೇತ್ರಾನಂದವೂ ಪ್ರಾಣಪ್ರಿಯವೂ ಆದ ನನ್ನ ಪವಿತ್ರಾಲಯವನ್ನು ನಾನು ಹೊಲೆಮಾಡಿಸುವೆನು. ನೀವು ಬಿಟ್ಟುಬಂದಿರುವ ನಿಮ್ಮ ಗಂಡುಹೆಣ್ಣುಮಕ್ಕಳು ಖಡ್ಗಕ್ಕೆ ತುತ್ತಾಗುವರು ಎಂಬದಾಗಿ ಕರ್ತನಾದ ಯೆಹೋವನು ನುಡಿದಿದ್ದಾನೆ.


ನಿನ್ನ ಸಮಸ್ತ ಪತ್ನಿಯರೂ ಕುಮಾರಕುಮಾರ್ತೆಯರೂ ಕಸ್ದೀಯರ ಬಳಿಗೆ ತರಲ್ಪಡುವರು; ನೀನೂ ಅವರಿಂದ ತಪ್ಪಿಸಿಕೊಳ್ಳಲಾರದೆ ಬಾಬೆಲಿನ ಅರಸನ ಕೈಗೆ ಸಿಕ್ಕಿಕೊಳ್ಳುವಿ; ಈ ಪಟ್ಟಣವು ನಿನ್ನ ನಿವಿುತ್ತ ಬೆಂಕಿಯಿಂದ ಸುಟ್ಟುಹೋಗುವದು ಎಂದು ಹೇಳಿದನು.


ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಅಪ್ಪಣೆಕೊಟ್ಟು ಆ ಶತ್ರುಗಳು ಈ ಪಟ್ಟಣಕ್ಕೆ ಹಿಂದಿರುಗುವಂತೆ ಮಾಡುವೆನು; ಅವರು ಅದಕ್ಕೆ ವಿರುದ್ಧವಾಗಿ ಯುದ್ಧಮಾಡಿ ಅದನ್ನು ಆಕ್ರವಿುಸಿ ಬೆಂಕಿಯಿಂದ ಸುಟ್ಟುಬಿಡುವರು; ಮತ್ತು ನಾನು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂವಿುಯನ್ನಾಗಿ ಮಾಡುವೆನು.


ಆಹಾ, ನಾನು ವಿಸ್ತಾರವಾದ ಅರಮನೆಯನ್ನೂ ವಿಶಾಲವಾದ ಮಹಡಿಗಳನ್ನೂ ಕಟ್ಟಿಸಿಕೊಳ್ಳುವೆನು ಎಂದು ಹೇಳಿ ಅಗಲಗಲವಾದ ಕಿಟಕಿಗಳನ್ನಿಡಿಸಿ [ಒಳಗೆ ಗೋಡೆಗೆಲ್ಲಾ] ದೇವದಾರಿನ ಹಲಿಗೆಗಳನ್ನು ಹೊದಿಸಿ ಕಿರಿಮಂಜಿಯ ಬಣ್ಣವನ್ನು ಬಳಿಸಿಕೊಳ್ಳುವವನ ಪಾಡನ್ನು ಏನು ಹೇಳಲಿ!


ಈ ಕೃತ್ಯಗಳನ್ನೆಲ್ಲಾ ನಡಿಸಿದ ಕಾರಣ ನನ್ನ ನಾಮಕ್ಕೆ ನೆಲೆಯಾಗಿ ನಿಮ್ಮ ಭರವಸಕ್ಕೆ ಆಧಾರವಾದ ಆಲಯಕ್ಕೂ ನಾನು ನಿಮಗೆ ಮತ್ತು ನಿಮ್ಮ ಪಿತೃಗಳಿಗೆ ದಯಪಾಲಿಸಿದ ಸ್ಥಳಕ್ಕೂ ಶೀಲೋವಿಗೆ ತಂದ ಗತಿಯನ್ನೇ ಈಗ ತರುವೆನು.


ಉನ್ನತವಾದ ಈ ಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ - ಅಬ್ಬಬ್ಬಾ, ಇದೇನು! ಯೆಹೋವನು ಈ ದೇಶವನ್ನೂ ಈ ಆಲಯವನ್ನೂ ಹೀಗೇಕೆ ಮಾಡಿದನು ಎಂದು ಕೇಳುವರು.


ಎದ್ದು ರಾತ್ರಿಯಲ್ಲಿ ಅದರ ಮೇಲೆ ಬಿದ್ದು ಅಲ್ಲಿನ ಅರಮನೆಗಳನ್ನು ಹಾಳುಮಾಡೋಣ [ಅಂದುಕೊಳ್ಳುವರು].


ಯೆರೂಸಲೇವಿುನ ಮನೆಗಳೂ ಯೆಹೂದದ ಅರಸರ ಮನೆಗಳೂ ಅಂದರೆ ಯಾವ ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಹಾಕಿ ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ ಆ ಮನೆಗಳೆಲ್ಲಾ ಹೊಲಸಾಗಿ ತೋಫೆತೆಂಬ ಸ್ಥಳಕ್ಕೆ ಸಮಾನವಾಗುವವು.


ಮೇಲಿಗಲ್ಲ ಕೇಡಿಗಾಗಿಯೇ ಈ ಪಟ್ಟಣದ ಮೇಲೆ ದೃಷ್ಟಿಯಿಟ್ಟಿದ್ದೇನೆ; ಇದು ಬಾಬೆಲಿನ ಅರಸನ ಕೈವಶವಾಗುವದು, ಅವನು ಸುಟ್ಟು ಬಿಡುವನು; ಇದು ಯೆಹೋವನ ನುಡಿ.


ನಿಮ್ಮ ದುಷ್ಕೃತ್ಯಗಳಿಗೆ ಪ್ರತಿಫಲವಾಗಿ ನಿಮ್ಮನ್ನು ದಂಡಿಸುವೆನು; ನಿಮ್ಮ ಪುರಿಯೆಂಬ ವನಕ್ಕೆ ಬೆಂಕಿಹಚ್ಚುವೆನು, ಅದು ಸುತ್ತುಮುತ್ತಣದನ್ನೆಲ್ಲಾ ನುಂಗಿಬಿಡುವದು.


ಮತ್ತು ಈ ಪಟ್ಟಣಕ್ಕೆ ಪ್ರತಿಭಟಿಸುವ ಕಸ್ದೀಯರು ಇದರೊಳಗೆ ನುಗ್ಗಿ ಬೆಂಕಿಯಿಕ್ಕಿ ಯಾವ ಮನೆಗಳ ಮಾಳಿಗೆಗಳಲ್ಲಿ ನನ್ನ ಜನರು ಬಾಳನಿಗೆ ಧೂಪಹಾಕಿ ಅನ್ಯದೇವತೆಗಳಿಗೆ ಪಾನವನ್ನು ನೈವೇದ್ಯವಾಗಿ ಅರ್ಪಿಸಿ ನನ್ನನ್ನು ಕೆಣಕಿದ್ದಾರೋ ಆ ಮನೆಗಳಿರುವ ಈ ಪಟ್ಟಣವನ್ನು ಸುಟ್ಟುಬಿಡುವರು.


ಕರ್ತನು ವೈರಿಯಾಗಿ ಇಸ್ರಾಯೇಲನ್ನು ನುಂಗಿದ್ದಾನೆ; ಅದರ ಅರಮನೆಗಳನ್ನೆಲ್ಲಾ ತಿಂದುಬಿಟ್ಟು ಅದರ ಕೋಟೆಕೊತ್ತಲಗಳನ್ನು ನಾಶಮಾಡಿದ್ದಾನೆ; ಯೆಹೂದ ಸೀಮೆಯಲ್ಲಿ ಅರಿಚಾಟಕಿರಿಚಾಟವನ್ನು ಹೆಚ್ಚಿಸಿದ್ದಾನೆ.


ತನ್ನ ಸಾನ್ನಿಧ್ಯದ ಗುಡಾರವನ್ನು ತೋಟದ ಗುಡಿಸಲನ್ನೋ ಎಂಬಂತೆ ಹಾಳುಮಾಡಿ ತನ್ನ ಉತ್ಸವಸ್ಥಾನವನ್ನು ನಾಶಪಡಿಸಿದ್ದಾನೆ; ಮಹೋತ್ಸವಗಳು ಮತ್ತು ಸಬ್ಬತ್ ದಿನಗಳು ಚೀಯೋನಿನಲ್ಲಿ ಯಾರ ನೆನಪಿಗೂ ಬಾರದಂತೆ ಮಾಡಿ ಯೆಹೋವನು ಅತಿರೋಷಗೊಂಡು ರಾಜನನ್ನೂ ಯಾಜಕನನ್ನೂ ಧಿಕ್ಕರಿಸಿದ್ದಾನೆ.


ನಿನ್ನ ಮನೆಗಳನ್ನು ಬೆಂಕಿಯಿಂದ ಸುಡುವರು; ಬಹುಮಂದಿ ಹೆಂಗಸರ ಕಣ್ಣೆದುರಿನಲ್ಲಿ ನಿನ್ನನ್ನು ದಂಡಿಸುವರು; ನೀನು ನಿನ್ನ ಸೂಳೆತನವನ್ನು ನಿಲ್ಲಿಸಿಬಿಡುವಂತೆ ನಾನು ಮಾಡುವೆನು; ನೀನು [ನಿನ್ನ ವಿುಂಡರಿಗೆ] ಇನ್ನು ಹಣಕೊಡದಿರುವಿ.


ಯೆಹೋವನು ಚೀಯೋನ್ ನಗರಿಯ ಕೋಟೆಯನ್ನು ನಾಶಪಡಿಸಬೇಕೆಂದು ನೂಲನ್ನು ಎಳೆದಿದ್ದಾನೆ; ಹಾಳುಮಾಡುತ್ತಿರುವ ತನ್ನ ಕೈಯನ್ನು ಹಿಂದೆಗೆಯದೆ ಪೌಳಿಗೋಡೆಯೂ ಕೋಟೆಯೂ ಮೊರೆಯುವಂತೆ ಮಾಡಿದ್ದಾನೆ; ಅವೆರಡೂ ಕುಸಿದುಹೋಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು