Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:62 - ಕನ್ನಡ ಸತ್ಯವೇದವು J.V. (BSI)

62 ಯೆಹೋವನೇ, ನೀನು ಈ ಸ್ಥಳವನ್ನು ನಿರ್ಮೂಲಮಾಡಬೇಕೆಂದು ಉದ್ದೇಶಿಸಿ ಇದು ಜನರಿಗೂ ಪಶುಗಳಿಗೂ ನೆಲೆಯಾಗದೆ ಸದಾ ಹಾಳಾಗಿಯೇ ಇರಲಿ ಎಂದು ನುಡಿದಿದ್ದೀಯಲ್ಲಾ ಎಂಬದಾಗಿ ಅರಿಕೆಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

62 ‘ಯೆಹೋವನೇ, ನೀನು ಈ ಸ್ಥಳವನ್ನು ನಿರ್ಮೂಲಮಾಡಬೇಕೆಂದು ಉದ್ದೇಶಿಸಿ, ಇದು ಜನರಿಗೂ ಪಶುಗಳಿಗೂ ನೆಲೆಯಾಗದೆ ಸದಾ ಹಾಳಾಗಿಯೇ ಇರಲಿ ಎಂದು ನುಡಿದಿದ್ದೀಯಲ್ಲಾ’ ಎಂಬುದಾಗಿ ಅರಿಕೆಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

62 ಬಳಿಕ, ‘ಸರ್ವೇಶ್ವರಾ, ನೀವು ಈ ಸ್ಥಳವನ್ನು ನಿರ್ಮೂಲಮಾಡಲು ಉದ್ದೇಶಿಸಿ, ಇದು ಜನರಿಗೂ ಜಾನುವಾರುಗಳಿಗೂ ನೆಲೆಯಾಗದೆ ಸದಾಕಾಲ ಹಾಳಾಗಿಯೇ ಉಳಿಯಲಿ ಎಂದು ನುಡಿದಿದ್ದೀರಲ್ಲಾ!’ ಎಂದು ಅರಿಕೆಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

62 ಆಮೇಲೆ ಹೀಗೆ ಹೇಳು: ‘ಯೆಹೋವನೇ, ಬಾಬಿಲೋನ್ ನಗರವನ್ನು ನಾಶಮಾಡುವೆನೆಂದು ನೀನು ಹೇಳಿರುವೆ. ಪ್ರಾಣಿಗಳು ಅಥವಾ ಮನುಷ್ಯರು ಯಾರೂ ಇಲ್ಲಿ ವಾಸಮಾಡದಂತೆ, ಇದು ಎಂದೆಂದಿಗೂ ಹಾಳುಬಿದ್ದ ಸ್ಥಳವಾಗಿರುವಂತೆ ಇದನ್ನು ನಾಶಮಾಡುವದಾಗಿ ಹೇಳಿರುವೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

62 ಈ ವಾಕ್ಯಗಳನ್ನೆಲ್ಲಾ ಓದುತ್ತಿರುವಾಗ ಹೇಳತಕ್ಕದ್ದೇನೆಂದರೆ, ‘ಓ ಯೆಹೋವ ದೇವರೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯರಾಗಲಿ, ಮೃಗಗಳಾಗಲಿ, ನಿವಾಸಿಗಳಾಗಲಿ ಎಂದಿಗೂ ಇರದಂತೆ, ಅದು ಸದಾಕಾಲ ಹಾಳಾಗಿಯೇ ಉಳಿಯಲಿ,’ ಎಂದು ನೀವೇ ಮಾತನಾಡ್ದಿದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:62
16 ತಿಳಿವುಗಳ ಹೋಲಿಕೆ  

ಯೆಹೋವನ ರೋಷದ ದೆಸೆಯಿಂದ ಅದು ನಿರ್ಜನವಾಗಿ ತೀರಾ ಹಾಳುಬೀಳುವದು; ಬಾಬೆಲನ್ನು ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.


ಒಂದು ಜನಾಂಗವು ಬಡಗಲಿಂದ ಬಾಬೆಲಿನ ಮೇಲೆ ಬರುತ್ತಿದೆ, ಅದು ಬಾಬೆಲ್ ದೇಶವನ್ನು ಹಾಳುಮಾಡುವದು, ಅಲ್ಲಿ ಯಾರೂ ವಾಸಿಸರು, ಪಶುಗಳೂ ಜನರೂ ಓಡಿಹೋಗಿದ್ದಾರೆ, ತೊಲಗಿಬಿಟ್ಟಿದ್ದಾರೆ.


ನಾನು ನಿನ್ನನ್ನು ನಿತ್ಯನಾಶನಕ್ಕೆ ಈಡುಮಾಡುವೆನು; ನಿನ್ನ ಪಟ್ಟಣಗಳು ನಿರ್ಜನವಾಗುವವು; ಆಗ ನಾನೇ ಯೆಹೋವನು ಎಂದು ನಿನ್ನವರಿಗೆ ನಿಶ್ಚಿತವಾಗುವದು.


ಆಗ ಬಾಬೆಲು ಹಾಳುದಿಬ್ಬಗಳೂ ನರಿಗಳ ಹಕ್ಕೆಯೂ ಆಗಿರುವದು; ಅದು ನಿರ್ಜನವಾಗಿ ಬೆರಗಿನ ಸಿಳ್ಳಿಗೆ ಗುರಿಯಾಗುವದು.


ದೇಶವೆಲ್ಲಾ ನೊಂದು ನಡುಗುತ್ತದೆ; ಏಕಂದರೆ ಬಾಬೆಲ್ ದೇಶವು ಹಾಳುಬಿದ್ದು ನಿರ್ಜನವಾಗಲಿ ಎಂದು ಯೆಹೋವನು ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪಗಳು ಸ್ಥಿರವಾಗಿವೆ.


ಎಪ್ಪತ್ತು ವರುಷಗಳ ತರುವಾಯ ನಾನು ಬಾಬೆಲಿನ ಅರಸನನ್ನೂ ಕಸ್ದೀಯರ ದೇಶವನ್ನೂ ಆ ಜನಾಂಗದವರನ್ನೂ ಅವರ ದ್ರೋಹಕ್ಕಾಗಿ ದಂಡಿಸಿ ಆ ದೇಶವನ್ನು ನಿತ್ಯನಾಶನಕ್ಕೆ ಗುರಿಮಾಡುವೆನು. ಇದು ಯೆಹೋವನ ನುಡಿ.


ಇಗೋ, ನಾನು ಬಡಗಣ ಜನಾಂಗಗಳನ್ನೆಲ್ಲಾ ಕರೆಯಿಸಿ ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಬರಮಾಡಿ ಇವರೆಲ್ಲರನ್ನು ಈ ದೇಶದ ಮೇಲೂ ಇದರ ನಿವಾಸಿಗಳ ಮೇಲೂ ಸುತ್ತಲಿನ ಸಕಲ ಜನಾಂಗಗಳ ಮೇಲೂ ಬೀಳಿಸಿ ಅವುಗಳನ್ನು ತುಂಬಾ ಹಾಳುಗೈದು ಬೆರಗಿನ ಸಿಳ್ಳಿಗೆ ಗುರಿಪಡಿಸಿ ನಿತ್ಯನಾಶನಕ್ಕೆ ಈಡುಮಾಡುವೆನು.


ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ - ಜನಪಶುಗಳಿಲ್ಲದೆ ಹಾಳಾಗಿರುವ ಈ ಪ್ರಾಂತವೂ ಇಲ್ಲಿನ ಎಲ್ಲಾ ಊರುಗಳೂ ಕುರುಬರು ತಮ್ಮ ಹಿಂಡುಗಳನ್ನು ತಂಗಿಸುವದಕ್ಕೆ ಮತ್ತೆ ಆಸರೆಯಾಗುವವು.


ಅದರ ಪಟ್ಟಣಗಳು ಕಾಡು, ಕಗ್ಗಾಡು, ಬೆಗ್ಗಾಡೂ ಆಗಿವೆ, ಆ ದೇಶದಲ್ಲಿ ಯಾರೂ ವಾಸಿಸರು, ಯಾವ ಮನುಷ್ಯನೂ ಹಾದುಹೋಗನು.


ಸೆರಾಯನಿಗೆ ಹೀಗೆ ಹೇಳಿದನು - ನೋಡು, ನೀನು ಬಾಬೆಲಿಗೆ ಸೇರಿದ ಮೇಲೆ ಈ ಮಾತುಗಳನ್ನೆಲ್ಲಾ [ತಕ್ಕವರಿಗೆ] ಓದಿ ಹೇಳಿ -


ನಿಮ್ಮ ಮಾತೃಭೂವಿುಯು ಮಾನಭಂಗಕ್ಕೆ ಈಡಾಗುವದು, ನಿಮ್ಮನ್ನು ಹೆತ್ತ ರಾಜ್ಯವು ನಾಚಿಕೊಳ್ಳುವದು; ಆಹಾ, ಅದು ಕಾಡು, ಕಗ್ಗಾಡು, ಬೆಗ್ಗಾಡು, ಜನಾಂಗಗಳಲ್ಲಿ ಕನಿಷ್ಠವೂ ಆಗುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು