ಯೆರೆಮೀಯ 51:44 - ಕನ್ನಡ ಸತ್ಯವೇದವು J.V. (BSI)44 ನಾನು ಬಾಬೆಲಿನಲ್ಲಿ ಬೇಲ್ ದೇವತೆಯನ್ನು ದಂಡಿಸಿ ಅದು ನುಂಗಿದ್ದನ್ನು ಅದರ ಬಾಯೊಳಗಿಂದ ಕಕ್ಕಿಸುವೆನು; ಪ್ರವಾಹ ಪ್ರವಾಹವಾಗಿ ಬಾಬೆಲಿಗೆ ಬರುತ್ತಿದ್ದ ಸಕಲದೇಶೀಯರು ಇನ್ನು ಮೇಲೆ ಬಾರರು; ಇದಲ್ಲದೆ ಬಾಬೆಲಿನ ಪೌಳಿಗೋಡೆಯು ಬಿದ್ದುಹೋಗುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201944 ನಾನು ಬಾಬೆಲಿನಲ್ಲಿ ಬೇಲ್ ದೇವತೆಯನ್ನು ದಂಡಿಸಿ, ಅದು ನುಂಗಿದ್ದನ್ನು ಅದರ ಬಾಯೊಳಗಿಂದ ಕಕ್ಕಿಸುವೆನು; ಪ್ರವಾಹಪ್ರವಾಹವಾಗಿ ಬಾಬಿಲೋನಿಗೆ ಬರುತ್ತಿದ್ದ ಸಕಲ ದೇಶೀಯರು ಇನ್ನು ಮೇಲೆ ಬರುವುದಿಲ್ಲ; ಇದಲ್ಲದೆ ಬಾಬೆಲಿನ ಪೌಳಿಗೋಡೆಯು ಬಿದ್ದುಹೋಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)44 “ಬಾಬಿಲೋನಿಯದ ಬೇಲ್‍ದೇವತೆಯನ್ನು ದಂಡಿಸುವೆನು. ಅದು ನುಂಗಿದ್ದನ್ನು ಅದರ ಬಾಯಿಂದಲೇ ಕಕ್ಕಿಸುವೆನು. ಪ್ರವಾಹವಾಗಿ ಅಲ್ಲಿಗೆ ಬರುತ್ತಿದ್ದ ಸಕಲ ದೇಶೀಯರು ಇನ್ನು ಬಾರರು. ಆ ಬಾಬಿಲೋನಿನ ಪೌಳಿಗೋಡೆ ಇನ್ನು ಬಿದ್ದುಹೋಗುವುದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್44 ನಾನು ಬಾಬಿಲೋನಿನ ಬೇಲ್ ದೇವರನ್ನು ದಂಡಿಸುವೆನು. ಅವನು ನುಂಗಿದ ಜನರನ್ನು ಅವನು ಕಕ್ಕುವಂತೆ ಮಾಡುವೆನು. ಬೇರೆ ಜನಾಂಗಗಳು ಬಾಬಿಲೋನಿಗೆ ಬರಲಾರವು. ಬಾಬಿಲೋನಿನ ಸುತ್ತಲಿನ ಗೋಡೆಯು ಬೀಳುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ44 ಏಕೆಂದರೆ ನಾನು ಬಾಬಿಲೋನಿನಲ್ಲಿರುವ ಬೇಲ್‌ನನ್ನು ದಂಡಿಸಿ, ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ಕಕ್ಕಿಸುವೆನು. ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವುದಿಲ್ಲ. ಹೌದು, ಬಾಬಿಲೋನಿನ ಗೋಡೆ ಬೀಳುವುದು. ಅಧ್ಯಾಯವನ್ನು ನೋಡಿ |