Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:11 - ಕನ್ನಡ ಸತ್ಯವೇದವು J.V. (BSI)

11 ಯೆಹೋವನು ಬಾಬೆಲನ್ನು ಹಾಳುಮಾಡಬೇಕೆಂದು ಉದ್ದೇಶಿಸಿ ಮೇದ್ಯರ ಅರಸರು ಅದನ್ನು ನಾಶಮಾಡುವಂತೆ ಅವರ ಮನಸ್ಸನ್ನು ಪ್ರೇರಿಸಿದ್ದಾನೆ; ಆ ನಾಶನವು ಯೆಹೋವನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತೀಕಾರವೇ; [ಮೇದ್ಯರೇ,] ಬಾಣಗಳನ್ನು ಮಸೆಯಿರಿ, ಸನ್ನದ್ಧರಾಗಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಯೆಹೋವನು ಬಾಬೆಲನ್ನು ಹಾಳುಮಾಡಬೇಕೆಂದು ಉದ್ದೇಶಿಸಿ, ಮೇದ್ಯರ ಅರಸರು ಅದನ್ನು ನಾಶಮಾಡುವಂತೆ ಅವರ ಮನಸ್ಸನ್ನು ಪ್ರೇರೇಪಿಸಿದ್ದಾನೆ. ಆ ನಾಶನವು ಯೆಹೋವನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತಿಕಾರವೇ; ಮೇದ್ಯರೇ, ಬಾಣಗಳನ್ನು ಮಸೆಯಿರಿ, ಗುರಾಣಿಗಳನ್ನು ಸನ್ನದ್ಧ ಮಾಡಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಸರ್ವೇಶ್ವರನು ಬಾಬಿಲೋನನ್ನು ಹಾಳುಮಾಡಬೇಕೆಂದು ಉದ್ದೇಶಿಸಿ, ಅದನ್ನು ಮೇದ್ಯರ ಅರಸರು ನಾಶಮಾಡುವಂತೆ ಅವರನ್ನು ಪ್ರೇರೇಪಿಸಿದ್ದಾರೆ. ಆ ನಾಶವು, ಸರ್ವೇಶ್ವರನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತೀಕಾರವೇ ಆಗಿದೆ. ‘ಮೇದ್ಯರೇ, ಬಾಣಗಳನ್ನು ಮಸೆಯಿರಿ, ಯುದ್ಧಸನ್ನದ್ಧರಾಗಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನಿಮ್ಮ ಬಾಣಗಳನ್ನು ಮಸೆಯಿರಿ. ನಿಮ್ಮ ಕವಚಗಳನ್ನು ಧರಿಸಿರಿ. ಯೆಹೋವನು ಮೇದ್ಯರ ರಾಜರನ್ನು ಪ್ರಚೋದಿಸಿದ್ದಾನೆ. ಬಾಬಿಲೋನನ್ನು ನಾಶಪಡಿಸಬೇಕೆಂಬ ಉದ್ದೇಶದಿಂದ ಆತನು ಅವರನ್ನು ಪ್ರಚೋದಿಸಿದ್ದಾನೆ. ಯೆಹೋವನು ಬಾಬಿಲೋನಿನ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ. ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿದ್ದ ಯೆಹೋವನ ಪವಿತ್ರ ಆಲಯವನ್ನು ನಾಶಮಾಡಿತು. ಆದ್ದರಿಂದ ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 “ಬಾಣಗಳನ್ನು ಮೆರುಗು ಮಾಡಿರಿ; ಡಾಲುಗಳನ್ನು ಎತ್ತಿಕೊಳ್ಳಿರಿ, ಯೆಹೋವ ದೇವರು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾರೆ; ಆತನ ಆಲೋಚನೆ ಬಾಬಿಲೋನಿಗೆ ವಿರೋಧವಾಗಿ ಅದನ್ನು ನಾಶಮಾಡುವುದಕ್ಕೆ ಇದೆ. ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯು, ಅವರ ದೇವಾಲಯದ ಪ್ರತಿದಂಡನೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:11
39 ತಿಳಿವುಗಳ ಹೋಲಿಕೆ  

ರಥಾಶ್ವಗಳನ್ನು ಕಟ್ಟಿರಿ, ವಾಹನಾಶ್ವಗಳನ್ನು ಹತ್ತಿರಿ, ಶಿರಸ್ತ್ರಾಣಗಳನ್ನು ಹಾಕಿಕೊಂಡು ಯುದ್ಧಕ್ಕೆ ನಿಲ್ಲಿರಿ, ಬರ್ಜಿಗಳನ್ನು ಬೆಳಗಿರಿ, ಕವಚ ತೊಟ್ಟುಕೊಳ್ಳಿರಿ.


ಹೀಗಿರಲು ಯೆಹೋವನು ಬಾಬೆಲಿನ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನೂ ಆತನು ಕಸ್ದೀಯರ ದೇಶವನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನೂ ಆಲಿಸಿರಿ; [ಮೃಗಗಳು] ಹಿಂಡಿನ ಮರಿಗಳನ್ನು ಖಂಡಿತವಾಗಿ ಎಳೆದುಕೊಂಡು ಹೋಗುವವು; ನಿಶ್ಚಯವಾಗಿ ಅವುಗಳ ಹುಲ್ಗಾವಲು ಅವುಗಳ ನಾಶನಕ್ಕೆ ಬೆದರುವದು.


ಇಗೋ, ನಾನು ಮಹಾ ಜನಾಂಗಗಳ ಸಮೂಹವನ್ನು ಎಬ್ಬಿಸಿ ಬಡಗಲಿಂದ ಬಾಬೆಲಿನ ಮೇಲೆ ಬೀಳಮಾಡುವೆನು; ಅವು ಬಾಬೆಲಿಗೆ ವಿರುದ್ಧವಾಗಿ ವ್ಯೂಹ ಕಟ್ಟಿ ಅದನ್ನು ಸ್ಥಳದೊಳಗಿಂದ ಕಿತ್ತುಬಿಡುವವು; ಅವುಗಳ ಬಾಣಗಳು ಸುಮ್ಮನೆ ಹಿಂದಿರುಗದ ಯುದ್ಧಪ್ರವೀಣ ಶೂರನಂತಿರುವವು.


ಅಶ್ವಗಳೇ, ಕುಣಿದಾಡಿರಿ! ರಥಗಳೇ, ರಭಸವಾಗಿರಿ! ಶೂರರು ಹೊರಡಲಿ! ಖೇಡ್ಯಸನ್ನದ್ಧರಾದ ಕೂಷ್ಯರು, ಪೂಟ್ಯರು, ಧನುರ್ಧಾರಿಗಳಾದ ಲೂದ್ಯರು ಮುಂದರಿಯಲಿ!


ಯೆರೂಸಲೇವಿುನ ಮೇಲೆ ಯುದ್ಧಮಾಡಿದ ಸಕಲ ಜನಾಂಗಗಳಿಗೂ ಯೆಹೋವನು ಈ ವ್ಯಾಧಿಯನ್ನು ತಗಲಿಸುವನು - ಹೆಜ್ಜೆಯ ಮೇಲೆ ನಿಂತ ನಿಂತ ಹಾಗೆಯೇ ಅವರ ಮಾಂಸವು ಕೊಳೆತುಹೋಗುವದು, ಕಣ್ಣು ಗುಣಿಯಲ್ಲೇ ಇಂಗುವದು, ನಾಲಿಗೆಯು ಬಾಯಲ್ಲೇ ಕ್ಷಯಿಸುವದು.


ನಾನು ಸಕಲ ಜನಾಂಗಗಳನ್ನು ಯೆರೂಸಲೇವಿುಗೆ ವಿರುದ್ಧವಾಗಿ ಕೂಡಿಸುವೆನು; ಅವು ಪಟ್ಟಣವನ್ನು ಆಕ್ರವಿುಸಿಕೊಂಡು ಮನೆಗಳನ್ನು ಸೂರೆಮಾಡಿ ಹೆಂಗಸರನ್ನು ಕೆಡಿಸುವವು; ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು, ವಿುಕ್ಕವರೋ ಪಟ್ಟಣದಲ್ಲೇ ಉಳಿಯುವರು.


ನಮ್ಮ ಪ್ರಾಣವನ್ನು ಹಿಂಸಿಸಿದ ದೋಷ ಬಾಬೆಲಿಗೆ ತಟ್ಟಲಿ ಎಂದು ಚೀಯೋನಿನವರು ಅನ್ನುತ್ತಾರೆ; ನಮ್ಮ ರಕ್ತವನ್ನು ಸುರಿಸಿದ ಅಪರಾಧವು ಕಸ್ದೀಯರಿಗೆ ಬಡಿಯಲಿ ಎಂದು ಯೆರೂಸಲೇವಿುನವರು ಹೇಳುತ್ತಾರೆ.


ಆದರೆ ಬಾಬೆಲಿನವರೂ ಕಸ್ದೀಯರೂ ಚೀಯೋನಿನಲ್ಲಿ ಮಾಡಿದ ಎಲ್ಲಾ ಹಾನಿಗೆ ಪ್ರತಿಯಾಗಿ ನಾನು ಅವರೆಲ್ಲರಿಗೂ ಚೀಯೋನಿನವರ ಕಣ್ಣೆದುರಿಗೆ ಮುಯ್ಯಿತೀರಿಸುವೆನು ಎಂದು ಯೆಹೋವನು ಅನ್ನುತ್ತಾನೆ.


ಬಾಬೆಲ್ ಕೋಟೆಗೆ ಎದುರಾಗಿ ಧ್ವಜವೆತ್ತಿರಿ, ಠಾಣ್ಯವನ್ನು ಬಲಪಡಿಸಿರಿ, ಕಾವಲುಗಾರರನ್ನು ನಿಲ್ಲಿಸಿರಿ, ಹೊಂಚುಗಾರರನ್ನು ಗೊತ್ತುಮಾಡಿರಿ; ಯೆಹೋವನು ಬಾಬೆಲಿನವರ ವಿಷಯದಲ್ಲಿ ನುಡಿದದ್ದನ್ನು ಚಿತ್ತಕ್ಕೆ ತಂದು ನೆರವೇರಿಸಿದ್ದಾನೆ.


ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕಸ್ದೀಯರ ದೇಶದಲ್ಲಿ ನಿರ್ವಹಿಸಬೇಕಾದ ಕಾರ್ಯವೊಂದುಂಟು; ಅದಕ್ಕಾಗಿ ಯೆಹೋವನು ತನ್ನ ಆಯುಧ ಶಾಲೆಯನ್ನು ತೆರೆದು ತನ್ನ ರೋಷದ ಅಸ್ತ್ರಶಸ್ತ್ರಗಳನ್ನು ಹೊರಗೆ ತೆಗೆದಿದ್ದಾನೆ.


ಮೂಡಲಿಂದ ಹದ್ದು ಎರಗಲಿ ಎಂದು, ಅಂದರೆ ನನ್ನ ಸಂಕಲ್ಪವನ್ನು ನೆರವೇರಿಸತಕ್ಕವನು ದೂರದೇಶದಿಂದ ಬರಲಿ ಎಂದು ಕೂಗಿದ್ದೇನೆ; ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.


ನಾನೇ ಯೆಹೋವ, ಇನ್ನು ಯಾವನೂ ಅಲ್ಲ, ನಾನು ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡುಕಟ್ಟುವೆನು.


ಯೆಹೋವನು ಯಾವನ ಕೈಹಿಡಿದು ಯಾವನೆದುರಿಗೆ ಜನಾಂಗಗಳನ್ನು ತುಳಿದು ರಾಜರ ನಡುಕಟ್ಟನ್ನು ಬಿಚ್ಚಿ ಯಾವನ ಮುಂದೆ ಬಾಗಿಲುಹೆಬ್ಬಾಗಿಲುಗಳನ್ನು ತೆರೆದು ಮುಚ್ಚಲೀಸನೋ ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ -


ನಾನು ಬಡಗಲಿಂದ ಒಬ್ಬನನ್ನು ಎಬ್ಬಿಸಿ ಕರತಂದಿದ್ದೇನೆ, ನನ್ನ ನಾಮವನ್ನು ಪ್ರಚುರಪಡಿಸತಕ್ಕವನು ಮೂಡಲಿಂದ ಬಂದಿದ್ದಾನೆ; ಅವನು ಉಪರಾಜರನ್ನು ಮಣ್ಣೇ ಎಂದು ಭಾವಿಸಿ ಮೇಲೆ ಬಿದ್ದು ಕುಂಬಾರನು ಜೇಡಿಯನ್ನು ತುಳಿಯುವ ಹಾಗೆ ತುಳಿಯುವನು.


ಔತಣಕ್ಕೆ ಸಿದ್ಧಪಡಿಸಿಕೊಂಡು ಚಾಪೆಗಳನ್ನು ಹಾಸಿಕೊಂಡು ಉಂಡು ಕುಡಿಯುತ್ತಿದ್ದಾರಲ್ಲಾ; ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಬಳಿಯಿರಿ!


ಘೋರದರ್ಶನವು ನನಗೆ ತಿಳಿಯ ಬಂದಿದೆ; ಬಾಧಕನು ಬಾಧಿಸುತ್ತಿದ್ದಾನೆ; ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ, ಮುತ್ತು! ನಿಮ್ಮ ನಿಟ್ಟುಸುರನ್ನು ನಿಲ್ಲಿಸಿಬಿಟ್ಟಿದ್ದೇನೆ.


ಸೇನಾಧೀಶ್ವರನಾದ ಯೆಹೋವನು ಓರೇಬನ ಬಂಡೆಯ ಹತ್ತಿರ ವಿುದ್ಯಾನ್ಯರನ್ನು ಹತಮಾಡಿದಂತೆ ಅವರ ಮೇಲೆಯೂ ಕೊರಡೆಯನ್ನು ಬೀಸುವನು; ಆತನು ದಂಡವನ್ನು ಸಮುದ್ರದ ಮೇಲೆ ಚಾಚಿ ಐಗುಪ್ತ್ಯರ ಮೇಲೆ ಎತ್ತಿದಂತೆ ಎತ್ತುವನು.


ಪಾರಸಿಯ ಅರಸನಾದ ಕೋರೆಷನ ಮೊದಲನೆಯ ವರುಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವದಕ್ಕಾಗಿ ಆ ಪಾರಸಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರಿಸಿದ್ದರಿಂದ ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ ಪತ್ರಗಳಿಂದಲೂ -


ಪಾರಸಿಯ ಅರಸನಾದ ಕೋರೆಷನ ಮೊದಲನೆಯ ವರುಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವದಕ್ಕಾಗಿ ಆ ಪಾರಸಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರಿಸಿದ್ದರಿಂದ ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ ಪತ್ರಗಳಿಂದಲೂ -


ಆದದರಿಂದ ಅಶ್ಶೂರದ ಅರಸನಾದ ಪೂಲ್, ತಿಗ್ಲತ್ಪಿಲೆಸರ್ ಎಂಬವರು ಇಸ್ರಾಯೇಲ್ ದೇವರ ಪ್ರೇರಣೆಯಿಂದ ಬಂದು ರೂಬೇನ್ಯರು, ಗಾದ್ಯರು, ಮನಸ್ಸೆಕುಲದ ಅರ್ಧ ಜನರು ಇವರನ್ನು ಹಲಹ, ಹಾಬೋರ್ ಹಾರ ಎಂಬ ಪ್ರಾಂತಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ಸೆರೆಯೊಯ್ದರು. ಅವರು ಇಂದಿನವರೆಗೂ ಅಲ್ಲೇ ಇರುತ್ತಾರೆ.


ದೇವರು ಸೊಲೊಮೋನನಿಗೆ ವಿರೋಧವಾಗಿ ಎಬ್ಬಿಸಿದ ಎರಡನೆಯ ವೈರಿಯು ಎಲ್ಯಾದಾವನ ಮಗನಾದ ರೆಜೋನ್ ಎಂಬವನು.


ಯೆಹೋವನು ಎದೋಮ್ಯನೂ ರಾಜಪುತ್ರನೂ ಆದ ಹದದನನ್ನು ಸೊಲೊಮೋನನಿಗೆ ವಿರೋಧವಾಗಿ ಏಳಮಾಡಿದನು.


ಶತ್ರುಗಳ ಕತ್ತಿಯ ಮೂಲಕವಾಗಿ ನಿಮ್ಮನ್ನು ಸಂಹರಿಸುವೆನು; ನೀವು ನನ್ನ ನಿಬಂಧನವನ್ನು ಮೀರಿದದರಿಂದ ಆ ಕತ್ತಿಯು ಪ್ರತಿದಂಡನೆಮಾಡುವದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ನಿಮ್ಮಲ್ಲಿ ಅಂಟುರೋಗವುಂಟಾಗುವಂತೆ ಮಾಡುವೆನು; ಹೀಗೆ ನೀವು ಶತ್ರುಗಳ ಕೈಗೆ ಬೀಳುವಿರಿ.


ಜಿಮ್ರಿಯ ಎಲ್ಲಾ ಅರಸರು, ಏಲಾವಿುನ ಎಲ್ಲಾ ಅರಸರು,


ಗುರಾಣಿಖೇಡ್ಯಗಳನ್ನು ಸನ್ನಾಹಮಾಡಿಕೊಂಡು ಯುದ್ಧಕ್ಕೆ ಹೊರಡಿರಿ!


ಒಂದು ಜನಾಂಗವು ಬಡಗಲಿಂದ ಬಾಬೆಲಿನ ಮೇಲೆ ಬರುತ್ತಿದೆ, ಅದು ಬಾಬೆಲ್ ದೇಶವನ್ನು ಹಾಳುಮಾಡುವದು, ಅಲ್ಲಿ ಯಾರೂ ವಾಸಿಸರು, ಪಶುಗಳೂ ಜನರೂ ಓಡಿಹೋಗಿದ್ದಾರೆ, ತೊಲಗಿಬಿಟ್ಟಿದ್ದಾರೆ.


ಆದದರಿಂದ ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ನಿನ್ನ ಪಕ್ಷವಾಗಿ ವ್ಯಾಜ್ಯವಾಡಿ ನಿನ್ನನ್ನು ಹಿಂಸಿಸಿದ ರಾಜ್ಯಕ್ಕೆ ಮುಯ್ಯಿತೀರಿಸುವೆನು; ಅದರ ಸರೋವರವು ಬತ್ತುವಂತೆಯೂ ಅದರ ಪ್ರವಾಹವು ಒಣಗುವಂತೆಯೂ ಮಾಡುವೆನು.


ಅದೇ ರಾತ್ರಿಯಲ್ಲಿ ಕಸ್ದೀಯ ರಾಜನಾದ ಬೇಲ್ಶಚ್ಚರನು ಕೊಲ್ಲಲ್ಪಟ್ಟನು.


ಜನಾಂಗಗಳಲ್ಲಿ ಹೀಗೆ ಪ್ರಕಟಿಸಿರಿ - [ಜನಾಂಗಗಳೇ,] ಸನ್ನದ್ಧರಾಗಿರಿ, ಶೂರರನ್ನು ಎಚ್ಚರಪಡಿಸಿರಿ, ಯೋಧರೆಲ್ಲರೂ ಕೂಡಲಿ, ಯುದ್ಧಕ್ಕೆ ಹೊರಡಲಿ.


ನಿಮ್ಮ ಗುಳಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿಯೂ ಕುಡುಗೋಲುಗಳನ್ನು ಬರ್ಜಿಗಳನ್ನಾಗಿಯೂ ಮಾಡಿರಿ; ದುರ್ಬಲನೂ ಶೂರನೆಂದುಕೊಳ್ಳಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು