ಯೆರೆಮೀಯ 50:13 - ಕನ್ನಡ ಸತ್ಯವೇದವು J.V. (BSI)13 ಯೆಹೋವನ ರೋಷದ ದೆಸೆಯಿಂದ ಅದು ನಿರ್ಜನವಾಗಿ ತೀರಾ ಹಾಳುಬೀಳುವದು; ಬಾಬೆಲನ್ನು ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಯೆಹೋವನ ರೋಷದ ದೆಸೆಯಿಂದ ಅದು ನಿರ್ಜನವಾಗಿ ತೀರಾ ಹಾಳುಬೀಳುವುದು; ಬಾಬೆಲನ್ನು ಹಾದು ಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಪರಿಹಾಸ್ಯ ಮಾಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಸರ್ವೇಶ್ವರನ ಕೋಪದ ನಿಮಿತ್ತ ಅದು ನಿರ್ಜನವಾಗುವುದು. ಪೂರ್ತಿಯಾಗಿ ಅದು ಪಾಳುಬೀಳುವುದು. ಬಾಬಿಲೋನನ್ನು ಹಾದುಹೋಗುವವರೆಲ್ಲರು ಅದಕ್ಕೆ ಬಂದೊದಗಿದ ವಿಪತ್ತುಗಳನ್ನು ಕಂಡು ನಿಬ್ಬೆರಗಾಗುವರು, ಸಿಳ್ಳುಹಾಕಿ ಮೂದಲಿಸುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ದೇವರು ಅವಳ ಮೇಲೆ ತನ್ನ ಕೋಪವನ್ನು ಪ್ರಕಟಿಸುವನು ಆದ್ದರಿಂದ ಅಲ್ಲಿ ಯಾರೂ ವಾಸಮಾಡಲಾರರು. ಬಾಬಿಲೋನ್ ನಗರವು ಸಂಪೂರ್ಣವಾಗಿ ನಿರ್ಜನವಾಗುವುದು. ಬಾಬಿಲೋನಿನಿಂದ ಹಾದುಹೋಗುವವರೆಲ್ಲ ಭಯಪಡುವರು. ಅದಕ್ಕೆ ಉಂಟಾದ ದುರ್ಗತಿಯನ್ನು ನೋಡಿ ಅವರು ತಮ್ಮ ತಲೆಯಾಡಿಸುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಯೆಹೋವ ದೇವರ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವುದಿಲ್ಲ; ಸಂಪೂರ್ಣ ಹಾಳಾಗುವುದು; ಬಾಬಿಲೋನನ್ನು ಹಾದುಹೋಗುವವರೆಲ್ಲರು ಅದರ ಎಲ್ಲಾ ಗಾಯಗಳ ವಿಷಯ ವಿಸ್ಮಯಪಟ್ಟು ಸಿಳ್ಳುಹಾಕುವರು. ಅಧ್ಯಾಯವನ್ನು ನೋಡಿ |