Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:19 - ಕನ್ನಡ ಸತ್ಯವೇದವು J.V. (BSI)

19 ನಮ್ಮ ದೇವರಾದ ಯೆಹೋವನು ಇವುಗಳನ್ನೆಲ್ಲಾ ನಮಗೆ ಏಕೆ ಮಾಡಿದ್ದಾನೆ ಎಂದು ನನ್ನ ಜನರು ಅನ್ನುವಾಗ ನೀನು ಅವರಿಗೆ - ನೀವು ಯೆಹೋವನನ್ನು ತೊರೆದು ಸ್ವದೇಶದಲ್ಲಿ ಅನ್ಯದೇವತೆಗಳನ್ನು ಸೇವಿಸಿದ ಹಾಗೆ ಪರದೇಶದಲ್ಲಿ ಅನ್ಯರನ್ನು ಸೇವಿಸುವಿರಿ ಎಂದು ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 “ನಮ್ಮ ದೇವರಾದ ಯೆಹೋವನು ಇವುಗಳನ್ನೆಲ್ಲಾ ನಮಗೆ ಏಕೆ ಮಾಡಿದ್ದಾನೆ?” ಎಂದು ನಿನ್ನ ಜನರು ಅನ್ನುವಾಗ ನೀನು ಅವರಿಗೆ, “ನೀವು ಯೆಹೋವನನ್ನು ತೊರೆದು, ಸ್ವದೇಶದಲ್ಲಿ ಅನ್ಯದೇವತೆಗಳನ್ನು ಆರಾಧಿಸಿದ ಹಾಗೆ ಪರದೇಶದಲ್ಲಿ ಅನ್ಯರನ್ನು ಆರಾಧಿಸುವಿರಿ” ಎಂದು ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ‘ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯೇ ಇವುಗಳನ್ನೆಲ್ಲ ನಮಗೇಕೆ ಮಾಡಿದ್ದಾರೆ?’ ಎಂದು ಕೇಳುವಾಗ ನೀನು ಅವರಿಗೆ, ‘ನೀವು ಸರ್ವೇಶ್ವರನನ್ನೇ ತೊರೆದು, ಸ್ವಂತನಾಡಿನಲ್ಲೆ ಅನ್ಯದೇವತೆಗಳಿಗೆ ಸೇವೆಸಲ್ಲಿಸಿದ್ದೀರಿ. ಅಂತೆಯೇ ಹೊರನಾಡಿನಲ್ಲಿ ಅನ್ಯರಿಗೆ ಸೇವೆಮಾಡುವಿರಿ’ ಎಂದು ಹೇಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಯೆಹೂದದ ಜನರು ನಿನ್ನನ್ನು, ‘ಯೆರೆಮೀಯನೇ, ನಮ್ಮ ದೇವರಾದ ಯೆಹೋವನು ನಮಗೆ ಇಂಥಾ ಕೇಡನ್ನು ಏಕೆ ಮಾಡಿದನು’ ಎಂದು ಕೇಳಬಹುದು. ಆಗ ಅವರಿಗೆ ಹೀಗೆ ಉತ್ತರಕೊಡು: ‘ಯೆಹೂದದ ಜನರಾದ ನೀವು ಯೆಹೋವನನ್ನು ತೊರೆದಿದ್ದೀರಿ, ನಿಮ್ಮ ದೇಶದಲ್ಲಿ ನೀವು ಅನ್ಯರ ವಿಗ್ರಹಗಳ ಸೇವೆ ಮಾಡುತ್ತಿದ್ದೀರಿ. ಆದ್ದರಿಂದಲೇ ನೀವು ಪರದೇಶದಲ್ಲಿ ಪರದೇಶಿಯರ ಸೇವೆಯನ್ನು ಮಾಡುವಿರಿ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 “ ‘ನಮ್ಮ ದೇವರಾದ ಯೆಹೋವ ದೇವರು ನಮಗೆ ಯಾತಕ್ಕೆ ಇವುಗಳನ್ನೆಲ್ಲಾ ಮಾಡುತ್ತಾರೆ,’ ಎಂದು ನೀವು ಕೇಳುವಾಗ, ನೀನು ಅವರಿಗೆ ಹೀಗೆ ಹೇಳಬೇಕು: ‘ನೀವು ನನ್ನನ್ನು ಬಿಟ್ಟು, ನಿಮ್ಮ ದೇಶದಲ್ಲಿ ಬೇರೆ ದೇವರುಗಳನ್ನು ಸೇವಿಸಿದ ಹಾಗೆ, ನಿಮ್ಮದಲ್ಲದ ದೇಶದಲ್ಲಿ ಅನ್ಯರನ್ನು ಸೇವಿಸುವಿರಿ.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:19
18 ತಿಳಿವುಗಳ ಹೋಲಿಕೆ  

ನೀವಾಗಲಿ ನಿಮ್ಮ ಪಿತೃಗಳಾಗಲಿ ನೋಡದ ದೇಶಕ್ಕೆ ನಿಮ್ಮನ್ನು ಈ ದೇಶದೊಳಗಿಂದ ಎಸೆದುಬಿಡುವೆನು; ಅಲ್ಲಿ ಹಗಲಿರುಳೂ ಅನ್ಯದೇವತೆಗಳನ್ನು ಸೇವಿಸುವಿರಿ; ನಾನು ನಿಮಗೆ ದಯೆತೋರಿಸೆನು.


ಇವು ನನಗೆ ಏಕೆ ಸಂಭವಿಸಿದವು ಎಂದು ನೀನು ಮನದೊಳಗೆ ಅಂದುಕೊಂಡರೆ ನಿನ್ನ ನೆರಿಗೆಯು ಕೀಳಲ್ಪಟ್ಟು ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವದು.


ದಾಸರು ನಮಗೆ ದಣಿಗಳಾದರು, ಅವರ ಕೈಯಿಂದ ನಮ್ಮನ್ನು ಬಿಡಿಸುವವರೇ ಇಲ್ಲ.


ನೀನಾದರೆ - ನಾನು ನಿರ್ದೋಷಿ, ಆತನ ಕೋಪವು ನನ್ನ ಮೇಲಿಂದ ತೊಲಗಿ ಹೋಗಿದೆ ನಿಶ್ಚಯ ಎಂದುಕೊಂಡಿದ್ದೀ; ನಾನು ಪಾಪಮಾಡಲಿಲ್ಲವೆಂದು ನೀನು ಹೇಳಿದ ಕಾರಣ, ಇಗೋ ನಾನು ನಿನಗೆ ನ್ಯಾಯತೀರಿಸುವೆನು.


ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನು ಬಿಟ್ಟಿದ್ದಾರೆ, ತಮಗೋಸ್ಕರ ತೊಟ್ಟಿಗಳನ್ನು, ನೀರು ನಿಲ್ಲದ ಬಿರಿದ ತೊಟ್ಟಿಗಳನ್ನು ಕೊರೆದುಕೊಂಡಿದ್ದಾರೆ.


ಇಸ್ರಾಯೇಲು ಒಬ್ಬ ದಾಸನೋ? ಮನೆಯ ಗುಲಾಮನಾಗಿ ಹುಟ್ಟಿದವನೋ? ಏಕೆ ಸೂರೆಯಾದನು?


ಆದರೆ ಆ ದಿನಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣವಾಗಿ ನಿರ್ಮೂಲಮಾಡೆನು; ಇದು ಯೆಹೋವನೆಂಬ ನನ್ನ ನುಡಿ.


ಯಾಕೋಬ ಮನೆತನದೊಳಗೆ ಇದನ್ನು ಸಾರಿರಿ, ಯೆಹೂದದಲ್ಲಿ ಹೀಗೆ ಪ್ರಕಟಿಸಿರಿ -


ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಹೀಗನ್ನುತ್ತಾನೆ - ನಾನು ಇವರ ಕಣ್ಣೆದುರಿಗೇ ಇಟ್ಟಿರುವ ಧರ್ಮೋಪದೇಶವನ್ನು ಇವರು ಲಕ್ಷ್ಯಕ್ಕೆ ತಾರದೆ ನನ್ನ ಮಾತನ್ನು ಕೇಳದೆ ಆ ಧರ್ಮಮಾರ್ಗದಲ್ಲಿ ನಡೆಯದೆ


ಯಾರೂ ದಾಟದ ಹಾಗೆ ದೇಶವು ಹಾಳಾಗಿ ಕಾಡಿನಂತೆ ಸುಟ್ಟುಹೋದದ್ದು ಏಕೆ? ಈ ವಿಚಾರವನ್ನು ಗ್ರಹಿಸತಕ್ಕ ಜ್ಞಾನಿಯು ಯಾರು? ಅದನ್ನು ಯೆಹೋವನ ಬಾಯಿಂದಲೇ ಕೇಳಿ ತಿಳಿಸಬಲ್ಲವನು ಯಾರು?


ನಾನು ನಿಮಗೆ ದಯಪಾಲಿಸಿದ ಸ್ವಾಸ್ತ್ಯವನ್ನು ಸ್ವದೋಷದಿಂದಲೇ ಕಳೆದುಕೊಳ್ಳುವಿರಿ; ನೀವು ನೋಡದ ದೇಶದಲ್ಲಿ ನಿಮ್ಮನ್ನು ನಿಮ್ಮ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು; ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ, ಅದು ನಿತ್ಯವೂ ಜ್ವಲಿಸುತ್ತಿರುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು