ಯೆರೆಮೀಯ 49:37 - ಕನ್ನಡ ಸತ್ಯವೇದವು J.V. (BSI)37 ಏಲಾಮ್ಯರು ತಮ್ಮ ಪ್ರಾಣ ಹುಡುಕುವ ಶತ್ರುಗಳಿಂದ ಕಂಗೆಡುವಂತೆ ಮಾಡುವೆನು; ನನ್ನ ರೋಷಾಗ್ನಿಯ ವಿಪತ್ತನ್ನು ಅವರ ಮೇಲೆ ಬರಮಾಡುವೆನು; ಇದು ಯೆಹೋವನ ನುಡಿ; ಅವರು ನಿರ್ಮೂಲವಾಗುವ ತನಕ ಅವರ ಹಿಂದೆ ಖಡ್ಗವನ್ನು ಅಟ್ಟುವೆನು; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201937 ಏಲಾಮ್ಯರು ತಮ್ಮ ಪ್ರಾಣಹುಡುಕುವ ಶತ್ರುಗಳಿಂದ ಕಂಗೆಡುವಂತೆ ಮಾಡುವೆನು; ನನ್ನ ರೋಷಾಗ್ನಿಯ ವಿಪತ್ತನ್ನು ಅವರ ಮೇಲೆ ಬರಮಾಡುವೆನು; ಇದು ಯೆಹೋವನ ನುಡಿ; ಅವರು ನಿರ್ಮೂಲವಾಗುವ ತನಕ ಅವರ ಹಿಂದೆ ಖಡ್ಗವನ್ನು ಅಟ್ಟುವೆನು; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)37 ತಮ್ಮ ಪ್ರಾಣ ಹುಡುಕುವ ಶತ್ರುಗಳ ಮುಂದೆ ಆ ಏಲಾಮ್ಯರು ನಡುಗುವಂತೆ ಮಾಡುವೆನು. ನನ್ನ ಕೋಪಾಗ್ನಿಯ ಬಿಸಿ ಅವರಿಗೆ ತಟ್ಟುವಂತೆ ಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ. ಅವರು ನಿರ್ಮೂಲವಾಗುವ ತನಕ ಅವರ ಹಿಂದೆಯೇ ಖಡ್ಗವನ್ನು ಕಳುಹಿಸುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್37 ಅವರ ಶತ್ರುಗಳ ಕಣ್ಣೆದುರಿನಲ್ಲಿಯೇ ನಾನು ಏಲಾಮನ್ನು ಚೂರುಚೂರು ಮಾಡುವೆನು. ಏಲಾಮ್ಯರನ್ನು ಕೊಲ್ಲಬೇಕೆಂದಿರುವ ಜನರೆದುರಿಗೆ ನಾನು ಎಲಾಮ್ಯರನ್ನು ಮುರಿದುಬಿಡುವೆನು. ನಾನು ಅವರ ಮೇಲೆ ಭಯಂಕರವಾದ ವಿಪತ್ತುಗಳನ್ನು ತರುವೆನು. ನನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ನಾನು ಅವರಿಗೆ ತೋರಿಸುವೆನು.” ಇದು ಯೆಹೋವನ ನುಡಿ. “ಏಲಾಮನ್ನು ಬೆನ್ನಟ್ಟಲು ನಾನೊಂದು ಖಡ್ಗವನ್ನು ಕಳುಹಿಸುವೆನು. ನಾನು ಏಲಾಮ್ಯರನ್ನೆಲ್ಲ ಕೊಂದುಹಾಕುವವರೆಗೆ ಆ ಖಡ್ಗವು ಅವರನ್ನು ಬೆನ್ನಟ್ಟುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ37 ಏಕೆಂದರೆ ಏಲಾಮನ್ನು ಅವರ ಶತ್ರುಗಳ ಮುಂದೆಯೂ, ಅವರ ಪ್ರಾಣವನ್ನು ಹುಡುಕುವವರ ಮುಂದೆಯೂ ಹೆದರುವಂತೆ ಮಾಡುವೆನು; ಅವರ ಮೇಲೆ ಕೇಡನ್ನೂ, ನನ್ನ ಕೋಪದ ಉಗ್ರವನ್ನೂ ಬರಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವನನ್ನು ಮುಗಿಸಿಬಿಡುವವರೆಗೆ ಖಡ್ಗವನ್ನು ಅವರ ಹಿಂದೆ ಕಳುಹಿಸುವೆನು. ಅಧ್ಯಾಯವನ್ನು ನೋಡಿ |