Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:2 - ಕನ್ನಡ ಸತ್ಯವೇದವು J.V. (BSI)

2 ಮೋವಾಬಿನ ಕೀರ್ತಿಯು ಮಾಯವಾಯಿತು; ಶತ್ರುಗಳು ಹೆಷ್ಬೋನಿನಲ್ಲಿ ದೇಶಕ್ಕೆ ಕೇಡನ್ನು ಕಲ್ಪಿಸಿ - ಮೋವಾಬು ಇನ್ನು ಜನಾಂಗವೆನಿಸಿಕೊಳ್ಳದಂತೆ ಅದನ್ನು ನಿರ್ಮೂಲಮಾಡೋಣ ಬನ್ನಿರಿ ಎಂದು ಆಲೋಚಿಸಿಕೊಂಡಿದ್ದಾರೆ. ಮದ್ಮೆನೇ, ನೀನು ಸಹ ಸುಮ್ಮನಾಗುವಿ; ಖಡ್ಗವು ನಿನ್ನನ್ನು ಹಿಂದಟ್ಟುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಮೋವಾಬಿನ ಕೀರ್ತಿಯು ಮಾಯವಾಯಿತು; ಶತ್ರುಗಳು ಹೆಷ್ಬೋನಿನಲ್ಲಿ ದೇಶಕ್ಕೆ ಕೇಡನ್ನು ಕಲ್ಪಿಸಿ, ‘ಮೋವಾಬ್ ಇನ್ನು ಜನಾಂಗವೆನಿಸಿಕೊಳ್ಳದಂತೆ ಅದನ್ನು ನಿರ್ಮೂಲಮಾಡೋಣ ಬನ್ನಿರಿ’ ಎಂದು ಆಲೋಚಿಸಿಕೊಂಡಿದ್ದಾರೆ. ಮದ್ಮೆನೇ, ನೀನು ಸಹ ಸುಮ್ಮನಾಗುವಿ; ಖಡ್ಗವು ನಿನ್ನನ್ನು ಹಿಂದಟ್ಟುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಮೋವಾಬಿನ ಕೀರ್ತಿ ಮಾಯವಾಯಿತು ಹೆಷ್ಬೋನ್ ಶತ್ರುಗಳ ಕೈವಶವಾಯಿತು. ‘ಮೋವಾಬ್ ಇನ್ನು ರಾಷ್ಟ್ರವೆನಿಸಿಕೊಳ್ಳದಷ್ಟು ಅದನ್ನು ಹಾಳುಮಾಡೋಣ ಬನ್ನಿ’ ಎಂದಿದ್ದಾರೆ ಆ ಶತ್ರುಗಳು. ಮದ್ಮೆನೇ, ನೀನೂ ಸುಮ್ಮನಾಗುವೆ, ಖಡ್ಗ ಬರುವುದು ನಿನ್ನನ್ನು ಬೆನ್ನಟ್ಟಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಇನ್ನು ಮುಂದೆ ಮೋವಾಬ್ ಪಟ್ಟಣವು ಹೊಗಳಿಕೆಗೆ ಪಾತ್ರವಾಗುವುದಿಲ್ಲ. ಹೆಷ್ಬೋನ್ ಪಟ್ಟಣದ ಜನರು ಮೋವಾಬನ್ನು ಸೋಲಿಸುವ ಯುಕ್ತಿ ಮಾಡುವರು. ಅವರು ಆ ಜನಾಂಗವನ್ನು ನಾಶಮಾಡುವ ಆಲೋಚನೆ ಮಾಡುವರು. ಮದ್ಮೆನೆ ಪಟ್ಟಣವೇ, ನೀನೂ ಸಹ ಸುಮ್ಮನಾಗುವೆ. ಖಡ್ಗವು ನಿನ್ನನ್ನು ಬೆನ್ನಟ್ಟುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಮೋವಾಬಿನ ಸ್ತೋತ್ರ ಇನ್ನು ಮೇಲೆ ಇರುವುದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ರಾಷ್ಟ್ರವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ; ಮದ್ಮೆನೇ, ನೀನು ಸಹ ಸುಮ್ಮನಾಗುವೆ; ಖಡ್ಗವು ನಿನ್ನನ್ನು ಹಿಂದಟ್ಟುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:2
20 ತಿಳಿವುಗಳ ಹೋಲಿಕೆ  

ಈ ಕಟ್ಟಳೆಗಳು ನನ್ನ ಪರಾಂಬರಿಕೆಗೆ ಬಾರದೆ ತೊಲಗಿಹೋದರೆ ಆಗ ಇಸ್ರಾಯೇಲ್ ಸಂತಾನವು ನನ್ನ ಪರಾಂಬರಿಕೆಗೆ ಬಾರದೆ ಎಂದಿಗೂ ಜನಾಂಗವಾಗದೆ ಹೋಗುವದು.


ಈಗ ಯೆಹೋವನು ಹೇಳುವದೇನಂದರೆ - ಆಳಿನ ಒಂದೊಂದು ವರುಷ ವಾಯಿದೆಗೆ ಸರಿಯಾದ ಮೂರು ವರುಷಕ್ಕೇ ಮೋವಾಬಿನ ಮಹಿಮೆಯೂ ಅಲ್ಲಿನವರ ದೊಡ್ಡ ಗುಂಪೂ ಹೀನಾಯಕ್ಕೆ ಈಡಾಗುವವು; ಉಳಿದ ಜನವು ಹೆಚ್ಚದೆ ಕೇವಲ ಸ್ವಲ್ಪವಾಗಿಯೇ ಇರುವದು ಎಂಬದೇ.


ರೂಬೇನ್ಯರು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್, ಸಿಬ್ಮಾ ಎಂಬ ಊರುಗಳನ್ನೂ [ಬೇರೆ ಹೆಸರಿನಿಂದ ಉಚ್ಚರಿಸತಕ್ಕ] ನೆಬೋ, ಬಾಳ್ಮೆಯೋನ್ ಎಂಬಿವುಗಳನ್ನೂ ಹೊಸದಾಗಿ ಕಟ್ಟಿ ಅವುಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.


ಹೆಷ್ಬೋನಿನವರೇ, ಗೋಳಾಡಿರಿ; ಆಯಿ ಎಂಬ ಊರು ಹಾಳಾಯಿತು! ರಬ್ಬಾ ಪಟ್ಟಣಕ್ಕೆ ಸೇರಿದ ಗ್ರಾಮಗಳವರೇ, ಕಿರಿಚಿರಿ, ಗೋಣಿತಟ್ಟನ್ನು ಸುತ್ತಿಕೊಳ್ಳಿರಿ, ಪ್ರಲಾಪಿಸಿರಿ, ಹಟ್ಟಿಗಳಲ್ಲಿ ಅತ್ತಿತ್ತ ಓಡಾಡಿರಿ; ಏಕಂದರೆ ಮಲ್ಕಾಮ್ ದೇವತೆಯೂ ಅದರ ಯಾಜಕರೂ ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.


ಪಲಾಯನವಾದವರು ಬಲಗುಂದಿದವರಾಗಿ ಹೆಷ್ಬೋನಿನ ನೆರಳಿನಲ್ಲಿ ನಿಂತಿದ್ದಾರೆ; ಆದರೆ ಸೀಹೋನನ ರಾಜ್ಯಕ್ಕೆ ಸೇರಿದ ಹೆಷ್ಬೋನಿನಿಂದಲೂ ಅಗ್ನಿಜ್ವಾಲೆ ಹೊರಟು ಮೋವಾಬಿನ ಕೆನ್ನೆಯನ್ನೂ ಯುದ್ಧವೀರರ ನೆತ್ತಿಯನ್ನೂ ನುಂಗಿಬಿಟ್ಟಿದೆ.


ಮೋವಾಬು ಯೆಹೋವನನ್ನು ತಿರಸ್ಕರಿಸಿ ಉಬ್ಬಿಕೊಂಡದರಿಂದ ಅದು ಹಾಳಾಗಿ ಇನ್ನು ಜನಾಂಗವೆನಿಸಿಕೊಳ್ಳದು.


ಮೋವಾಬಿನ ನೆರೆಹೊರೆಯವರೇ, ಅದರ ಹೆಸರುವಾಸಿಯನ್ನು ಬಲ್ಲವರೇ, ನೀವೆಲ್ಲರೂ ಅದಕ್ಕಾಗಿ ಎದೆಬಡುಕೊಳ್ಳಿರಿ; ಅಯ್ಯೋ, ಬಲವಾದ ಕೋಲು, ಮಹಿಮೆಯ ದಂಡವು ಮುರಿದುಹೋಯಿತಲ್ಲಾ ಎಂದು ಪ್ರಲಾಪಿಸಿರಿ.


ನನ್ನ ಸೇವಕ ಯಾಕೋಬೇ, ಭಯಪಡಬೇಡ, ನಾನು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಅಟ್ಟಿದೆನೋ ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು; ನಿನ್ನನ್ನೋ ನಿರ್ಮೂಲಮಾಡೆನು; ವಿುತಿಮೀರಿ ಶಿಕ್ಷಿಸೆನು, ಆದರೆ ಶಿಕ್ಷಿಸದೆ ಬಿಡುವದಿಲ್ಲ. ಇದು ಯೆಹೋವನ ನುಡಿ.


ಯೆಹೋವನು ತಾನು ಆರಿಸಿಕೊಂಡ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದಾನೆ ಎಂದು ಈ ಜನರು ಆಡಿಕೊಳ್ಳುವ ಮಾತು ನಿನ್ನ ಲಕ್ಷ್ಯಕ್ಕೆ ಬರಲಿಲ್ಲವೋ? ಇವರು ಜನಾಂಗವೇ ಅಲ್ಲ ಎನ್ನುವಷ್ಟು ನನ್ನ ಜನರನ್ನು ಅಸಡ್ಡೆಮಾಡುತ್ತಾರಲ್ಲಾ.


ಆಗ ನಾನು ಯೆಹೋವನ ಕೈಯಿಂದ ಆ ಪಾತ್ರೆಯನ್ನು ತೆಗೆದುಕೊಂಡು ಯೆಹೋವನು ಯಾವ ಜನಾಂಗಗಳ ಬಳಿಗೆ ನನ್ನನ್ನು ಕಳುಹಿಸಿದನೋ ಆ ಸಕಲ ಜನಾಂಗಗಳು ಅದರಲ್ಲಿ ಕುಡಿಯುವಂತೆ ಮಾಡಿದೆನು.


ಇಸ್ರಾಯೇಲ್ಯರ ದೇವರಾದ ಯೆಹೋವನು ನನಗೆ - ರೋಷರೂಪಮದ್ಯದ ಈ ಪಾತ್ರೆಯನ್ನು ನೀನು ನನ್ನ ಕೈಯಿಂದ ತೆಗೆದುಕೊಂಡು ಯಾವ ಜನಾಂಗಗಳ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಕಲ ಜನಾಂಗಗಳು ಇದರಲ್ಲಿ ಕುಡಿಯುವಂತೆ ಮಾಡು.


ಏಕೆಂದರೆ ಯೆಹೋವನ ಹಸ್ತವು ಈ ಪರ್ವತದಲ್ಲಿ ನೆಲೆಯಾಗಿರುವದು; ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿಯಲ್ಪಡುವ ಹಾಗೆ ತಾನಿದ್ದಲ್ಲೇ ತುಳಿಯಲ್ಪಡುವದು.


ನನ್ನ ಹೃದಯವು ಮೋವಾಬಿನ ನಿವಿುತ್ತವಾಗಿ ಮೊರೆಯಿಡುತ್ತದೆ; ಅಲ್ಲಿಂದ ಪಲಾಯನವಾದವರು ಚೋಯರಿಗೂ ಎಗ್ಲತ್ ಶೆಲಿಶೀಯಕ್ಕೂ ಓಡಿಹೋಗುತ್ತಾರೆ, ಅಳುತ್ತಾ ಲೂಹೀಥ್ ದಿಣ್ಣೆಯನ್ನು ಹತ್ತುತ್ತಾರೆ, ಹೊರೊನಯಿವಿುನ ದಾರಿಯಲ್ಲಿ ನಡೆಯುತ್ತಾ ನಾಶನವಾದೆವಲ್ಲಾ ಎಂದು ದನಿಗೈಯುತ್ತಾರೆ.


ಮೋವಾಬಿನ ವಿಷಯವಾದ ದೈವೋಕ್ತಿ. ಒಂದು ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿರ್ಮೂಲವಾಯಿತಲ್ಲಾ! ಹೌದು, ಒಂದು ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವೂ ಹಾಳಾಗಿ ನಿರ್ಮೂಲವಾಯಿತು.


ಏಲಾಮ್ಯರು ತಮ್ಮ ಪ್ರಾಣ ಹುಡುಕುವ ಶತ್ರುಗಳಿಂದ ಕಂಗೆಡುವಂತೆ ಮಾಡುವೆನು; ನನ್ನ ರೋಷಾಗ್ನಿಯ ವಿಪತ್ತನ್ನು ಅವರ ಮೇಲೆ ಬರಮಾಡುವೆನು; ಇದು ಯೆಹೋವನ ನುಡಿ; ಅವರು ನಿರ್ಮೂಲವಾಗುವ ತನಕ ಅವರ ಹಿಂದೆ ಖಡ್ಗವನ್ನು ಅಟ್ಟುವೆನು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು