Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 47:5 - ಕನ್ನಡ ಸತ್ಯವೇದವು J.V. (BSI)

5 ಗಾಜಾ ಊರು ಬೋಳಿಸಿಕೊಂಡಿದೆ, ಅಷ್ಕೆಲೋನ್ ನಾಶನಹೊಂದಿದೆ ಫಿಲಿಷ್ಟಿಯದ ಬೈಲುಸೀಮೆಯಲ್ಲಿ ಉಳಿದ ಪಟ್ಟಣವೇ, ನಿನ್ನನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 “ಗಾಜಾ ಊರು ಬೋಳಿಸಿಕೊಂಡಿದೆ, ಅಷ್ಕೆಲೋನ್ ನಾಶಹೊಂದಿದೆ; ಫಿಲಿಷ್ಟಿಯದ ಬಯಲು ಸೀಮೆಯಲ್ಲಿ ಉಳಿದ ಪಟ್ಟಣವೇ, ನಿನ್ನನ್ನು ಎಂದಿನ ವರೆಗೆ ಕತ್ತರಿಸಿಕೊಳ್ಳುತ್ತಿರುವಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಗಾಜಾ ಊರು ತಲೆಬೋಳಿಸಿಕೊಂಡಿದೆ ಅಷ್ಕೆಲೋನ್ ಊರು ನಿಶ್ಶಬ್ದವಾಗಿದೆ. ಅನಕಿಮ್ ಬೈಲುನಾಡಿನ ಅವಶೇಷವೇ, ಎಂದಿನವರೆಗೆ ನಿನ್ನನ್ನೇ ಕತ್ತರಿಸಿಕೊಳ್ಳುತ್ತಿರುವೆ !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಗಾಜಾದ ಜನರು ದುಃಖಿತರಾಗಿ ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವರು. ಅಷ್ಕೆಲೋನಿನ ಜನರನ್ನು ಸ್ತಬ್ಧಗೊಳಿಸಲಾಗುವುದು. ಕಣಿವೆ ಪ್ರದೇಶದಿಂದ ಉಳಿದುಕೊಂಡವರೇ, ನಿಮ್ಮನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಗಾಜಾ ಊರು ಬೋಳಿಸಿಕೊಂಡಿದೆ. ಅಷ್ಕೆಲೋನ್ ನಾಶನ ಹೊಂದಿದೆ. ಫಿಲಿಷ್ಟಿಯದ ಬಯಲುಸೀಮೆಯಲ್ಲಿ ಉಳಿದ ಪಟ್ಟಣವೇ ನಿನ್ನನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 47:5
20 ತಿಳಿವುಗಳ ಹೋಲಿಕೆ  

ಎಲ್ಲರ ತಲೆಯು ಬೋಳು, ಎಲ್ಲರ ಗಡ್ಡವು ವಿಕಾರ, ಎಲ್ಲರ ಕೈಯಲ್ಲಿ ಗಾಯ, ಎಲ್ಲರ ನಡುವಿನ ಮೇಲೆ ಗೋಣಿತಟ್ಟು.


ಅವನ ಎಲ್ಲಾ ಜನರು, ಬಗೆಬಗೆಯ ಎಲ್ಲಾ ವಿದೇಶೀಯರು, ಊಚ್ ದೇಶದ ಎಲ್ಲಾ ಅರಸರು, ಫಿಲಿಷ್ಟಿಯ ದೇಶದ ಎಲ್ಲಾ ಅರಸರು, ಅಷ್ಕೆಲೋನ್,


[ಯೆಹೂದವೇ,] ನಿನ್ನ ಮುದ್ದು ಮಕ್ಕಳಿಗಾಗಿ ಕ್ಷೌರಮಾಡಿಸಿಕೋ, ತಲೆಬೋಳಿಸಿಕೋ; ನಿನ್ನ ಬೋಳುತನವನ್ನು ರಣಹದ್ದಿನ ಹಾಗೆ ವಿಸ್ತರಿಸಿಕೋ; ಅವರು ನಿನ್ನ ಕಡೆಯಿಂದ ಸೆರೆಹೋಗಿದ್ದಾರಲ್ಲಾ!


ಗಡ್ಡ ಬೋಳಿಸಿ ಬಟ್ಟೆಹರಿದು ಗಾಯಮಾಡಿಕೊಂಡಿದ್ದ ಎಂಭತ್ತು ಜನರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಒಂದು ಕೈಯಲ್ಲಿ ಧೂಪನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಹೋಗುತ್ತಿದ್ದರು.


ಅವನು ನಿತ್ಯ ರಾತ್ರಿಹಗಲು ಸಮಾಧಿಯ ಗವಿಗಳಲ್ಲಿಯೂ ಗುಡ್ಡಗಳಲ್ಲಿಯೂ ಆರ್ಭಟಿಸುತ್ತಾ ಕಲ್ಲುಗಳಿಂದ ತನ್ನನ್ನು ಕಡಿದುಕೊಳ್ಳುತ್ತಾ ಇದ್ದನು.


ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಫಿಲಿಷ್ಟಿಯರ ಮೇಲೆ ಕೈಯೆತ್ತುವೆನು; ಕೆರೇತಿಯರನ್ನು ಕತ್ತರಿಸಿಬಿಟ್ಟು ಸಮುದ್ರತೀರದಲ್ಲಿನ ಜನಶೇಷವನ್ನು ನಿಶ್ಶೇಷಮಾಡುವೆನು;


ಅವರು ಗೋಣಿತಟ್ಟನ್ನು ಸುತ್ತಿಕೊಳ್ಳುವರು, ದಿಗಿಲು ಅವರನ್ನು ಮುಚ್ಚಿಬಿಡುವದು; ಎಲ್ಲರ ಮುಖದಲ್ಲಿಯೂ ನಾಚಿಕೆತೋರುವದು. ಎಲ್ಲರೂ ತಲೆ ಬೋಳಿಸಿಕೊಂಡಿರುವರು.


ಏಕಂದರೆ ಆ ದಿನದಲ್ಲಿ ಫಿಲಿಷ್ಟಿಯರೆಲ್ಲರೂ ಸೂರೆಯಾಗುವರು, ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಕಳೆದುಳಿದವರೆಲ್ಲಾ ನಿರ್ಮೂಲವಾಗುವರು; ಕಫ್ತೋರ್ ದ್ವೀಪದವರಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು ಯೆಹೋವನೇ ಸೂರೆಮಾಡುವನು.


ಫರೋಹನು ಗಾಜಾ ಊರನ್ನು ಹೊಡೆದದ್ದಕ್ಕೆ ಮುಂಚಿತವಾಗಿ ಯೆಹೋವನು ಫಿಲಿಷ್ಟಿಯರ ವಿಷಯವಾಗಿ ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ.


ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು -


ಬಯಿತ್ ಮತ್ತು ದೀಬೋನ್ ಊರುಗಳವರು ಅಳುವದಕ್ಕಾಗಿ ಪೂಜಾಸ್ಥಾನಗಳಿಗೆ ಹತ್ತಿದ್ದಾರೆ; ನೆಬೋವಿನಲ್ಲಿಯೂ ಮೇದೆಬದಲ್ಲಿಯೂ ಮೋವಾಬ್ಯರು ಗೋಳಾಡುತ್ತಾರೆ; ಎಲ್ಲರ ತಲೆಯು ಬೋಳು, ಎಲ್ಲರ ಗಡ್ಡವು ವಿಕಾರವಾಗಿ ಕತ್ತರಿಸಿದೆ.


ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ಧತಿಯ ಪ್ರಕಾರ ಈಟಿಕತ್ತಿಗಳಿಂದ ರಕ್ತಸೋರುವಷ್ಟು ಗಾಯ ಮಾಡಿಕೊಂಡರು.


ಅನಂತರ ಅವರು ಗಾಜಾ, ಅಷ್ಕೆಲೋನ್, ಎಕ್ರೋನ್ ಎಂಬ ಪಟ್ಟಣಗಳನ್ನೂ ಅವುಗಳ ಮೇರೆಗಳನ್ನೂ ಸ್ವಾಧೀನಮಾಡಿಕೊಂಡರು.


ನೀವು ನಿಮ್ಮ ದೇವರಾಗಿರುವ ಯೆಹೋವನ ಮಕ್ಕಳಾಗಿರುವದರಿಂದ ಸತ್ತವರಿಗೋಸ್ಕರ ದೇಹವನ್ನು ಗಾಯಮಾಡಿಕೊಳ್ಳಬಾರದು; ಮುಂದಲೆಯನ್ನು ಬೋಳಿಸಿಕೊಳ್ಳಲೂಬಾರದು.


ಅವರು ತಲೆಬೋಳಿಸಿಕೊಳ್ಳಬಾರದು; ಗಡ್ಡವನ್ನು ಕತ್ತರಿಸಿ ವಿಕಾರಗೊಳಿಸಬಾರದು; ದೇಹವನ್ನು ಗಾಯ ಮಾಡಿಕೊಳ್ಳಬಾರದು.


ಸತ್ತವರಿಗೋಸ್ಕರ ದುಃಖವನ್ನು ಸೂಚಿಸುವದಕ್ಕಾಗಿ ದೇಹವನ್ನು ಗಾಯಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಚುಚ್ಚಿಸಿಕೊಳ್ಳಬಾರದು. ನಾನು ಯೆಹೋವನು.


ಈ ದೇಶದಲ್ಲಿನ ದೊಡ್ಡವರೂ ಅಲ್ಪರೂ ಸಾಯುವರು; ಅವರನ್ನು ಯಾರೂ ಹೂಣಿಡರು, ಅವರಿಗಾಗಿ ಯಾರೂ ಗೋಳಾಡರು, ಗಾಯ ಮಾಡಿಕೊಳ್ಳರು, ತಲೆಬೋಳಿಸಿಕೊಳ್ಳರು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು