ಯೆರೆಮೀಯ 47:4 - ಕನ್ನಡ ಸತ್ಯವೇದವು J.V. (BSI)4 ಏಕಂದರೆ ಆ ದಿನದಲ್ಲಿ ಫಿಲಿಷ್ಟಿಯರೆಲ್ಲರೂ ಸೂರೆಯಾಗುವರು, ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಕಳೆದುಳಿದವರೆಲ್ಲಾ ನಿರ್ಮೂಲವಾಗುವರು; ಕಫ್ತೋರ್ ದ್ವೀಪದವರಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು ಯೆಹೋವನೇ ಸೂರೆಮಾಡುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಏಕೆಂದರೆ ಆ ದಿನದಲ್ಲಿ ಫಿಲಿಷ್ಟಿಯರೆಲ್ಲರೂ ಸೂರೆಯಾಗುವರು, ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಉಳಿದವರೆಲ್ಲಾ ನಿರ್ಮೂಲವಾಗುವರು; ಕಫ್ತೋರ್ ದ್ವೀಪದವರಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು ಯೆಹೋವನೇ ಸೂರೆಮಾಡುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಆ ದಿನದಲ್ಲಿ ಸೂರೆಯಾಗುವರು ಫಿಲಿಷ್ಟಿಯರೆಲ್ಲರು ನಿರ್ಮೂಲವಾಗುವರು ಟೈರ್-ಸಿಡೋನಿನ ಸಹಾಯಕರಲ್ಲಿ ಅಳಿದುಳಿದವರು. ಸರ್ವೇಶ್ವರನೆ ನಾಶಮಾಡುವನು ಕ್ರೇಟ್ ದ್ವೀಪದಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಎಲ್ಲಾ ಫಿಲಿಷ್ಟಿಯರ ವಿನಾಶನದ ಕಾಲ ಬಂದಿದೆ. ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಅಳಿದುಳಿದವರನ್ನೆಲ್ಲ ನಾಶಮಾಡುವ ಕಾಲ ಬಂದಿದೆ. ಯೆಹೋವನು ಬಹುಬೇಗ ಫಿಲಿಷ್ಟಿಯರನ್ನು ನಾಶಮಾಡುವನು. ಕಪ್ತೋರ್ ದಿಬಪದ ಅಳಿದುಳಿದ ಜನರನ್ನು ಆತನು ನಾಶಮಾಡುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಏಕೆಂದರೆ ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವುದಕ್ಕೂ ಟೈರಿನಿಂದಲೂ ಸೀದೋನಿನಿಂದಲೂ ಉಳಿದವರನ್ನು ಕಡಿದುಬಿಡುವುದಕ್ಕೂ ಆ ದಿವಸ ಬಂತು. ಏಕೆಂದರೆ ಯೆಹೋವ ದೇವರು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆಮಾಡುವನು. ಅಧ್ಯಾಯವನ್ನು ನೋಡಿ |