Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 46:7 - ಕನ್ನಡ ಸತ್ಯವೇದವು J.V. (BSI)

7 ನೈಲ್ ನದಿಯಂತೆ ಉಬ್ಬಿರುವದು ಇದೇನು? ನೈಲಿನ ಶಾಖೆಗಳ ಹಾಗೆ ತುಂಬಿತುಳುಕುವ ಈ ಪ್ರವಾಹವು ಯಾವದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನೈಲ್ ನದಿಯಂತೆ ಉಬ್ಬಿಕೊಂಡಿರುವ ಇವರು ಯಾರು? ನೈಲ್ ನದಿಯ ಶಾಖೆಗಳ ಹಾಗೆ ತುಂಬಿತುಳುಕುವ ಈ ಪ್ರವಾಹವು ಯಾರದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಈ ಪ್ರವಾಹ ಯಾವುದು? ನೈಲ್ ನದಿಯಂತೆ ಉಬ್ಬಿರುವುದಲ್ಲಾ? ನೈಲಿನ ಶಾಖೆಗಳ ಹಾಗೆ ತುಂಬಿ ತುಳುಕುತ್ತಿದೆಯಲ್ಲಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನೈಲ್ ನದಿಯಂತೆ ಯಾರು ಬರುತ್ತಿರುವರು? ಶಕ್ತಿಶಾಲಿಯಾದ ಮತ್ತು ರಭಸದಿಂದ ಹರಿಯುವ ನದಿಯಂತೆ ಯಾರು ಬರುತ್ತಿರುವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 “ನೈಲ್ ನದಿಯಂತೆ ಕದಲುವ ನೀರುಗಳಂತಿದ್ದು ಪ್ರಳಯದ ಹಾಗೆ ಬರುವವನು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 46:7
11 ತಿಳಿವುಗಳ ಹೋಲಿಕೆ  

ಯೆಹೋವನು ಇಂತೆನ್ನುತ್ತಾನೆ - ಇಗೋ, ಪ್ರವಾಹವು ಬಡಗಲಿಂದ ಹೊರಟು ತುಂಬಿತುಳುಕುವ ತೊರೆಯಾಗಿ ದೇಶವನ್ನೂ ಅದರಲ್ಲಿರುವ ಸಮಸ್ತವನ್ನೂ ಪಟ್ಟಣವನ್ನೂ ಪಟ್ಟಣದ ನಿವಾಸಿಗಳನ್ನೂ ಆಕ್ರವಿುಸುವದು; ಆಗ ಅಲ್ಲಿನವರು ಮೊರೆಯಿಡುವರು, ದೇಶದವರೆಲ್ಲಾ ಗೋಳಾಡುವರು.


ತುಂಬಿತುಳುಕುವ ವ್ಯೂಹಗಳೂ ದೇವರ ನಿಬಂಧನಾಧಿಪತಿಯೂ ಅವನ ರಭಸಕ್ಕೆ ಸಿಕ್ಕಿ ಹೊಡೆದುಕೊಂಡು ಹೋಗಿ ಭಂಗವಾಗುವರು.


ಆ ಸರ್ಪನು ಸ್ತ್ರೀಯನ್ನು ಬಡಿಸಿಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಬಿಟ್ಟನು.


ಆ ಕೃತ್ಯಗಳಿಗೆ ದೇಶವು ನಡುಗಬೇಕಾಗುವದಲ್ಲವೆ, ಅದರ ನಿವಾಸಿಗಳೆಲ್ಲರೂ ದುಃಖಿಸುವರಲ್ಲವೆ; ದೇಶವೆಲ್ಲಾ ನೈಲ್ ನದಿಯಂತೆ ಉಬ್ಬಿ ಅಲ್ಲಕಲ್ಲೋಲವಾಗುವದು, ಐಗುಪ್ತದ ನದಿಯ ಹಾಗೆಯೇ ಇಳಿದುಹೋಗುವದು.


ಅರುವತ್ತೆರಡು ವಾರಗಳಾದ ಮೇಲೆ ಅಭಿಷಿಕ್ತನೊಬ್ಬನು ಛೇದಿಸಲ್ಪಡುವನು; ಅವನಿಗೆ ಏನೂ ಇರದು; ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ ಪವಿತ್ರಾಲಯವನ್ನೂ ಹಾಳುಮಾಡುವರು; ತುಂಬಿತುಳುಕುವ ಪ್ರಲಯವು ಪಟ್ಟಣವನ್ನು ಕೊನೆಗಾಣಿಸುವದು; ಅಂತ್ಯದವರೆಗೂ ಯುದ್ಧವಾಗುವದು, ನಿಶ್ಚಿತನಾಶನಗಳು ಸಂಭವಿಸುವವು.


ಆಹಾ, ರಕ್ತವರ್ಣದ ಉಡುಪನ್ನುಟ್ಟು ಘನವಸ್ತ್ರಗಳನ್ನು ಧರಿಸಿಕೊಂಡು ಮಹಾಶೌರ್ಯಯುಕ್ತನಾಗಿ ಮೆರೆಯುತ್ತಾ ಎದೋವಿುನ ಬೊಚ್ರದಿಂದ ಬರುವ ಈತನು ಯಾರು? ಸತ್ಯಾನುಸಾರವಾಗಿ ಮಾತಾಡುವ, ರಕ್ಷಿಸಲು ಸಮರ್ಥನಾದ ನಾನೇ.


ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಆ ಸೇಬುಮರದ ಕೆಳಗೆ ನಿನ್ನನ್ನು ಎಬ್ಬಿಸಿದೆನಲ್ಲಾ! ಇಗೋ, ಅಲ್ಲಿ ನಿನ್ನ ತಾಯಿಯು ನಿನ್ನನ್ನು ಹೆತ್ತಳು, ಅಲ್ಲೇ ಪ್ರಸವವೇದನೆ ಪಟ್ಟು, ನಿನ್ನನ್ನು ಪಡೆದಳು!


ರಕ್ತಬೋಳ, ಧೂಪ, ವರ್ತಕರ ಸಕಲಸುಗಂಧ ದ್ರವ್ಯಗಳನ್ನು ಧೂಪಿಸಿದ ಧೂಮಸ್ತಂಭಗಳಂತೆ ಅರಣ್ಯದಿಂದ ಬರುವ ಈ ಮೆರವಣಿಗೆ ಯಾರದು?


ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ವಿಷಯವಾಗಿ ಶೋಕಗೀತವನ್ನೆತ್ತಿ ಅವನಿಗೆ ಹೀಗೆ ನುಡಿ - ನೀನು ಜನಾಂಗಗಳಲ್ಲಿ ಮೃಗರಾಜನೆನಿಸಿಕೊಂಡಿದ್ದಿ; ಇಗೋ ಮಹಾನದಿಯಲ್ಲಿನ ಪೇರ್ಮೊಸಳೆಯಾಗಿಬಿಟ್ಟಿ; ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು ನೀರನ್ನು ನಿನ್ನ ಕಾಲುಗಳಿಂದ ಕಲಕಿ ಜನಾಂಗಗಳ ಹೊಳೆಗಳನ್ನೂ ತುಳಿದು ಬದಿಮಾಡಿದಿ.


ಆಮೇಲೆ ಅವನ ಮಕ್ಕಳು ಯುದ್ಧಸನ್ನಾಹಮಾಡಿ ವ್ಯೂಹವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು; ಆ ಸೈನ್ಯವು ಮುಂದರಿದು ತುಂಬಿ ತುಳುಕಿ ಹಬ್ಬಿಕೊಳ್ಳುವದು; ಅವರು ಪುನಃ ಯುದ್ಧಕ್ಕೆ ಹೊರಟು ದಕ್ಷಿಣರಾಜನ ದುರ್ಗದವರೆಗೆ ನುಗ್ಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು