Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 46:15 - ಕನ್ನಡ ಸತ್ಯವೇದವು J.V. (BSI)

15 ನಿನ್ನ ಬಸವ ಬಿದ್ದು ಹೋದದ್ದೇನು? ಯೆಹೋವನು ಅದನ್ನು ಕೆಡವಿದನು. ನಿಲ್ಲಲಾರದೆ ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನಿನ್ನ ಬಸವ ಬಿದ್ದು ಹೋದದ್ದೇನು? ಯೆಹೋವನು ಅದನ್ನು ಕೆಡವಿದನು, ನಿಲ್ಲಲಾರದೆ ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ನಿನ್ನ ಎಪಿಸ್ ಬಸವ ಬಿದ್ದುಹೋದದ್ದೇನು? ಸರ್ವೇಶ್ವರನೆ ಕೆಡವಲು ಅದು ನಿಲ್ಲಲಾರದೆ ಹೋಯಿತು !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಈಜಿಪ್ಟೇ, ನಿಮ್ಮ ಶೂರಸೈನಿಕರು ಏಕೆ ಕೊಲ್ಲಲ್ಪಡುವರು? ಅವರು ನಿಲ್ಲಲಾರರು. ಏಕೆಂದರೆ ಯೆಹೋವನು ಅವರನ್ನು ನೆಲಕ್ಕೆ ತಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನಿನ್ನ ಬಲಿಷ್ಠರು ಏಕೆ ಬಡಕೊಂಡು ಹೋಗಿದ್ದಾರೆ? ಯೆಹೋವ ದೇವರು ಅವರನ್ನು ಓಡಿಸಿದ್ದರಿಂದ ಅವರು ನಿಲ್ಲಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 46:15
12 ತಿಳಿವುಗಳ ಹೋಲಿಕೆ  

ಹೊಗೆಯು [ಗಾಳಿಯಿಂದ] ಹೇಗೋ ಹಾಗೆ ಅವರು ಆತನಿಂದ ಹಾರಿಹೋಗುವರು; ಬೆಂಕಿಯ ಮುಂದೆ ಮೇಣವು ಕರಗಿ ಲಯವಾಗಿ ಹೋಗುವಂತೆ ದೇವರ ಎದುರಿನಲ್ಲಿ ದುಷ್ಟರು ನಾಶವಾಗಿ ಹೋಗುವರು.


ಆಹಾ, ನನ್ನ ಕಣ್ಣಿಗೆ ಬಿದ್ದದ್ದೇನು? ಅವರು ಧೈರ್ಯಗೆಟ್ಟು ಬೆನ್ನು ಕೊಟ್ಟಿದ್ದಾರೆ. ಅವರ ಶೂರರು ಪೆಟ್ಟುತಿಂದು ಹಿಂದಿರುಗದೆ ಓಡಿಹೋಗುತ್ತಾರೆ; ಸುತ್ತುಮುತ್ತಲು ದಿಗಿಲು ಎಂದು ಯೆಹೋವನು ಅನ್ನುತ್ತಾನೆ.


ನೀನು ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದೀ; ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನ ಮಾಡಿದ್ದೀ.


ಆತನು ಬಾಣಗಳನ್ನೆಸೆದು ಶತ್ರುಗಳನ್ನು ಚದರಿಸಿಬಿಟ್ಟನು; ಸಿಡಿಲುಗಳಿಂದ ಕಳವಳಗೊಳಿಸಿದನು.


ಸಂಬಳಕ್ಕಾಗಿ ಐಗುಪ್ತವನ್ನು ಸೇರಿರುವ ದಂಡಾಳುಗಳು ಕೊಬ್ಬಿದ ಕರುಗಳಂತಿದ್ದಾರೆ; ಅವರೂ ಬೆನ್ನುಕೊಟ್ಟು ಓಡಿಹೋಗಿದ್ದಾರೆ; ನಿಲ್ಲಲೇ ಇಲ್ಲ; ಅವರಿಗೆ ವಿಪತ್ಕಾಲವು ಒದಗಿದೆ, ದಂಡನೆಯ ದಿನವು ಸಂಭವಿಸಿದೆ.


ನಿನ್ನ ಹಸ್ತವೇ ಈ ದೇಶದಲ್ಲಿದ್ದ ಜನಾಂಗಗಳನ್ನು ಹೊರಡಿಸಿ ನಮ್ಮ ಪಿತೃಗಳನ್ನೇ ನೆಲೆಗೊಳ್ಳಿಸಿದೆ; ನೀನು ಆ ಅನ್ಯಜನಗಳನ್ನು ತೆಗೆದುಬಿಟ್ಟು ನಮ್ಮವರನ್ನು ಹಬ್ಬಿಸಿದಿ.


ಆತನು ಆ ಜನಾಂಗಗಳನ್ನೆಲ್ಲಾ ನಿಮ್ಮ ಎದುರಿನಿಂದ ಹೊರಡಿಸುವನು; ನಿಮಗಿಂತಲೂ ಮಹಾಬಲಿಷ್ಠ ಜನಾಂಗಗಳ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ.


ಅದಕ್ಕೆ ಯೆಹೋವನು - ನಾನು ಫರೋಹನಿಗೆ ಮಾಡುವದನ್ನು ನೀನು ಈಗ ನೋಡುವಿ. ಅವನು ನನ್ನ ಭುಜಬಲದಿಂದ ಅವರನ್ನು ಹೋಗಗೊಡಿಸುವನು; ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ದೇಶದಿಂದ ಹೊರಡಿಸುವನು ಅಂದನು.


ದೇವರು ಎದ್ದು ಹೊರಡುವಾಗ ಆತನ ವೈರಿಗಳು ಚದರಿಹೋಗುವರು; ಆತನ ಹಗೆಗಾರರು ಬೆಂಗೊಟ್ಟು ಓಡಿಹೋಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು