ಯೆರೆಮೀಯ 44:24 - ಕನ್ನಡ ಸತ್ಯವೇದವು J.V. (BSI)24 ಇದಲ್ಲದೆ ಯೆರೆಮೀಯನು ಹೆಂಗಸರಿಗೂ ಎಲ್ಲಾ ಜನರಿಗೂ ಹೀಗೆ ಹೇಳಿದನು - ಐಗುಪ್ತದಲ್ಲಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ - ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಇದಲ್ಲದೆ ಯೆರೆಮೀಯನು ಹೆಂಗಸರಿಗೂ, ಎಲ್ಲಾ ಜನರಿಗೂ ಹೀಗೆ ಹೇಳಿದನು, “ಐಗುಪ್ತದಲ್ಲಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24-25 ಇದಲ್ಲದೆ ಯೆರೆಮೀಯನು ಆ ಎಲ್ಲ ಜನರಿಗೆ ಮುಖ್ಯವಾಗಿ ಮಹಿಳೆಯರಿಗೆ, ಹೀಗೆ ಹೇಳಿದನು: “ಈಜಿಪ್ಟಿನಲ್ಲಿರುವ ಯೆಹೂದ್ಯರೇ, ನಿಮ್ಮೆಲ್ಲರಿಗೆ ಸರ್ವೇಶ್ವರ ಹೀಗೆನ್ನುತ್ತಾರೆ - ‘ಗಗನದೊಡತಿಗೆ ಧೂಪಾರತಿ ಎತ್ತಿ ಪಾನನೈವೇದ್ಯವನ್ನು ಸುರಿಯುತ್ತೇವೆ. ಅದಕ್ಕಾಗಿ ಮಾಡಿಕೊಂಡ ಹರಕೆಯನ್ನು ಖಂಡಿತವಾಗಿ ತೀರಿಸುತ್ತೇವೆ ಎಂಬುದಾಗಿ ನೀವೂ ನಿಮ್ಮ ಹೆಂಡತಿಯರೂ ಬಾಯಿಂದ ಪ್ರತಿಜ್ಞೆಮಾಡಿದ್ದೀರಿ, ಕೈಯಿಂದ ನೆರವೇರಿಸಿದ್ದೀರಿ! ಸರಿಸರಿ, ನಿಮ್ಮ ಹರಕೆಗಳನ್ನು ತೀರಿಸಿರಿ, ಅವುಗಳನ್ನು ಬಿಡದೆ ನೆರವೇರಿಸಿರಿ! ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ಆಮೇಲೆ ಯೆರೆಮೀಯನು ಆ ಎಲ್ಲಾ ಸ್ತ್ರೀಪುರುಷರೊಂದಿಗೆ ಮಾತನಾಡಿದನು. ಯೆರೆಮೀಯನು ಹೀಗೆ ಹೇಳಿದನು: “ಈಗ ಈಜಿಪ್ಟಿನಲ್ಲಿರುವ ಎಲ್ಲಾ ಯೆಹೂದ್ಯರೇ, ಯೆಹೋವನ ಸಂದೇಶವನ್ನು ಕೇಳಿರಿ: ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಇದಲ್ಲದೆ, ಯೆರೆಮೀಯನು ಎಲ್ಲಾ ಜನರಿಗೂ, ಎಲ್ಲಾ ಹೆಂಗಸರಿಗೂ, “ಈಜಿಪ್ಟ್ ದೇಶದಲ್ಲಿರುವ ಯೆಹೂದ್ಯರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಅಧ್ಯಾಯವನ್ನು ನೋಡಿ |