ಯೆರೆಮೀಯ 39:4 - ಕನ್ನಡ ಸತ್ಯವೇದವು J.V. (BSI)4 ಯೆಹೂದದ ಅರಸನಾದ ಚಿದ್ಕೀಯನೂ ಸಮಸ್ತ ಸೈನಿಕರೂ ಇವರನ್ನು ನೋಡಿ ಅದೇ ರಾತ್ರಿಯಲ್ಲಿ ಹೊರಟು ಅರಸನ ಉದ್ಯಾನಮಾರ್ಗವಾಗಿ ಎರಡು ಗೋಡೆಗಳ ನಡುವಣ ಬಾಗಿಲಿಂದ ಪಟ್ಟಣವನ್ನು ಬಿಟ್ಟು ಅರಾಬಾ ಎಂಬ ತಗ್ಗಾದ ಪ್ರದೇಶದ ಕಡೆಗೆ ಪಲಾಯನಮಾಡಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಯೆಹೂದದ ಅರಸನಾದ ಚಿದ್ಕೀಯನೂ ಮತ್ತು ಸಮಸ್ತ ಸೈನಿಕರೂ ಇವರನ್ನು ನೋಡಿ ಅದೇ ರಾತ್ರಿಯಲ್ಲಿ ಹೊರಟು ಅರಸನ ಉದ್ಯಾನದ ಮಾರ್ಗವಾಗಿ ಎರಡು ಗೋಡೆಗಳ ನಡುವಣ ಬಾಗಿಲಿನಿಂದ ಪಟ್ಟಣವನ್ನು ಬಿಟ್ಟು ಅರಾಬಾ ಎಂಬ ತಗ್ಗಾದ ಪ್ರದೇಶದ ಕಡೆಗೆ ಪಲಾಯನ ಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಇವರನ್ನು ನೋಡಿ, ಜುದೇಯದ ಅರಸ ಚಿದ್ಕೀಯನು ಮತ್ತು ಸಮಸ್ತ ಸೈನಿಕರು ಅದೇ ರಾತ್ರಿಯಲ್ಲಿ ಹೊರಟು, ಅರಸನ ಉದ್ಯಾನ ಮಾರ್ಗವಾಗಿ ಎರಡು ಗೋಡೆಗಳ ನಡುವಣ ಬಾಗಿಲಿನಿಂದ ನಗರವನ್ನು ಬಿಟ್ಟು, ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಯೆಹೂದದ ರಾಜನಾದ ಚಿದ್ಕೀಯನು ಬಾಬಿಲೋನಿನ ಆ ಅಧಿಕಾರಿಗಳನ್ನು ನೋಡಿದನು. ಅವನು ಮತ್ತು ಅವನ ಜೊತೆಗಿದ್ದ ಸೈನಿಕರು ಓಡಿಹೋದರು. ಅವರು ರಾತ್ರಿಯಲ್ಲಿ ಜೆರುಸಲೇಮ್ ನಗರವನ್ನು ಬಿಟ್ಟು ರಾಜನ ಉದ್ಯಾನದ ಮಾರ್ಗವಾಗಿ ಹೊರಗೆ ಹೋದರು. ಅವರು ಎರಡು ಗೋಡೆಗಳ ಮಧ್ಯದಲ್ಲಿದ್ದ ಬಾಗಿಲಿನಿಂದ ಹೊರಗೆ ಬಂದು ಮರುಭೂಮಿಯ ಕಡೆಗೆ ಹೊರಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಇವರನ್ನು ನೋಡಿ ಯೆಹೂದದ ಅರಸನಾದ ಚಿದ್ಕೀಯನು ಮತ್ತು ಸಮಸ್ತ ಸೈನಿಕರು ಅದೇ ರಾತ್ರಿಯಲ್ಲಿ ಹೊರಟು, ಅರಸನ ಉದ್ಯಾನ ಮಾರ್ಗವಾಗಿ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನಿಂದ ನಗರವನ್ನು ಬಿಟ್ಟು, ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು. ಅಧ್ಯಾಯವನ್ನು ನೋಡಿ |