ಯೆರೆಮೀಯ 36:3 - ಕನ್ನಡ ಸತ್ಯವೇದವು J.V. (BSI)3 ಒಂದು ವೇಳೆ ಯೆಹೂದ ವಂಶದವರು ನಾನು ಅವರಿಗೆ ಮಾಡಬೇಕೆಂದಿರುವ ಕೇಡನ್ನು ಕೇಳಿ ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಹಿಂದಿರುಗಿದರೆ ಅವರ ಪಾಪಾಪರಾಧಗಳನ್ನು ಕ್ಷವಿುಸಿಬಿಡುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಒಂದು ವೇಳೆ ಯೆಹೂದ ವಂಶದವರು ನಾನು ಅವರಿಗೆ ಮಾಡಬೇಕೆಂದಿರುವ ಕೇಡನ್ನು ಕೇಳಿ ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು; ಹಿಂದಿರುಗಿದರೆ ಅವರ ಪಾಪ ಮತ್ತು ಅಪರಾಧಗಳನ್ನು ಕ್ಷಮಿಸಿಬಿಡುವೆನು” ಎಂಬ ಮಾತನ್ನು ತಿಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಬಹುಶಃ, ಯೆಹೂದ ವಂಶದವರು ನಾನು ಅವರಿಗೆ ಮಾಡಬೇಕೆಂದಿರುವ ಕೇಡನ್ನಾದರು ಕೇಳಿ ತಮ್ಮ ದುರ್ಮಾರ್ಗಗಳನ್ನು ಬಿಟ್ಟು ಹಿಂದಿರುಗಬಹುದು. ಹಿಂದಿರುಗಿದರೆ, ಅವರ ಪಾಪಾಪರಾಧಗಳನ್ನು ಕ್ಷಮಿಸಿಬಿಡುವೆನು.” ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ನಾನು ಮಾಡಬೇಕೆಂದು ಯೋಚಿಸಿರುವುದನ್ನು ಯೆಹೂದ ಕುಲದವರು ಕೇಳಿಸಿಕೊಳ್ಳಬಹುದು. ಅವರು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಅವರು ಹಾಗೆ ಮಾಡಿದರೆ ಅವರು ಮಾಡಿದ ಪಾಪಗಳನ್ನು ನಾನು ಕ್ಷಮಿಸುವೆನು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಒಂದು ವೇಳೆ ಯೆಹೂದದ ಮನೆತನದವರು ನಾನು ಅವರಿಗೆ ಮಾಡುವುದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ, ಅವರ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು,” ಎಂದನು. ಅಧ್ಯಾಯವನ್ನು ನೋಡಿ |
ಇದಲ್ಲದೆ ನಾನು ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿತ್ಯವೂ ಕಳುಹಿಸುತ್ತಾ - ನೀವೆಲ್ಲರೂ ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ, ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸದಿರಿ; ಹೀಗೆ ಮಾಡಿದರೆ ನಾನು ನಿಮಗೂ ನಿಮ್ಮ ಪಿತೃಗಳಿಗೂ ದಯಪಾಲಿಸಿದ ದೇಶದಲ್ಲಿ ನೀವು ಸುಖವಾಸಿಗಳಾಗಿರುವಿರಿ ಎಂದು ಹೇಳಿಸಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.