Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 32:36 - ಕನ್ನಡ ಸತ್ಯವೇದವು J.V. (BSI)

36 ಹೀಗಿರಲು ಖಡ್ಗಕ್ಷಾಮವ್ಯಾಧಿಗಳಿಂದ ಕ್ಷೀಣವಾಗಿ ಬಾಬೆಲಿನ ಅರಸನ ಕೈವಶವಾಗಿದೆ ಎಂದು ನೀವು ಹೇಳುವ ಈ ಪಟ್ಟಣದ ವಿಷಯವಾಗಿ ಇಸ್ರಾಯೇಲ್ಯರ ದೇವರಾದ ಯೆಹೋವನು ಈಗ ಇಂತೆನ್ನುತ್ತಾನೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಹೀಗಿರಲು “ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಕ್ಷೀಣವಾಗಿ ಬಾಬೆಲಿನ ಅರಸನ ಕೈವಶವಾಗಿದೆ ಎಂದು ನೀವು ಹೇಳುವ ಈ ಪಟ್ಟಣದ ವಿಷಯವಾಗಿ ಇಸ್ರಾಯೇಲರ ದೇವರಾದ ಯೆಹೋವನು ಈಗ ಇಂತೆನ್ನುತ್ತಾನೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 “ಖಡ್ಗ-ಕ್ಷಾಮ-ವ್ಯಾಧಿ ಇವುಗಳಿಂದ ಈ ನಗರವು ಬಾಬಿಲೋನಿನ ಅರಸನ ಕೈ ಹಿಡಿತಕ್ಕೆ ಸಿಕ್ಕಲಿದೆ ಎಂದು ನೀವು ಹೇಳುವ ವಿಷಯದಲ್ಲಿ ಇಸ್ರಯೇಲರ ದೇವರಾದ ಸರ್ವೇಶ್ವರ ಈಗ ಇಂತೆನ್ನುತ್ತಾರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 “‘ಬಾಬಿಲೋನಿನ ರಾಜನು ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು. ಈ ಪಟ್ಟಣವನ್ನು ವಶಪಡಿಸಿಕೊಳ್ಳಲು ಅವನು ಖಡ್ಗ, ಕ್ಷಾಮ, ಭಯಂಕರವಾದ ವ್ಯಾಧಿಗಳನ್ನು ಬಳಸಿಕೊಳ್ಳುವನು’ ಎಂದು ನೀವು ಹೇಳುತ್ತಿದ್ದೀರಿ. ಆದರೆ ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 “ ‘ಹೀಗಾದರೂ ಈಗ ಅದು ಖಡ್ಗದಿಂದಲೂ ಬರದಿಂದಲೂ ವ್ಯಾಧಿಯಿಂದಲೂ ಬಾಬಿಲೋನಿನ ಅರಸನ ಕೈವಶವಾಗಿದೆ,’ ಎಂದು ನೀವು ಹೇಳುವ ಈ ಪಟ್ಟಣದ ವಿಷಯ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 32:36
11 ತಿಳಿವುಗಳ ಹೋಲಿಕೆ  

ಇಗೋ, ಮುತ್ತಿಗೆಯ ದಿಬ್ಬಗಳು, ಪಟ್ಟಣವನ್ನು ಆಕ್ರವಿುಸುವದಕ್ಕೆ ಬಂದಿದ್ದಾರೆ; ಪಟ್ಟಣವು ಖಡ್ಗಕ್ಷಾಮವ್ಯಾಧಿಗಳಿಂದ ಕ್ಷೀಣವಾಗಿ ವಿರೋಧಿಗಳಾದ ಕಸ್ದೀಯರ ಕೈಗೆ ಸಿಕ್ಕಿದೆ; ನೀನು ನುಡಿದದ್ದು ನೆರವೇರಿದೆ, ಇಗೋ, ನೋಡುತ್ತಿದ್ದೀ.


ಯೆಹೂದದ ಅರಸನಾದ ಚಿದ್ಕೀಯನು ಯೆರೆಮೀಯನಿಗೆ - ನೀನು ಪ್ರವಾದನೆ ಮಾಡುತ್ತಾ - ಯೆಹೋವನು ಇಂತೆನ್ನುತ್ತಾನೆ - ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಗೆ ಸಿಕ್ಕಿಸುವೆನು, ಅವನು ಇದನ್ನು ಆಕ್ರವಿುಸುವನು;


ಆದಕಾರಣ ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಈ ಪಟ್ಟಣವನ್ನು ಕಸ್ದೀಯರ ವಶಕ್ಕೆ, ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಸಿಕ್ಕಿಸುವೆನು, ಅವನು ಇದನ್ನು ಆಕ್ರವಿುಸುವನು;


ಅಪರಾಧಗಳು ಹೆಚ್ಚಾಗಿ ಕಂಡುಬರುವ ಹಾಗೆ ಧರ್ಮಶಾಸ್ತ್ರವು ಮಧ್ಯೆ ಬಂತು. ಆದರೆ ಪಾಪವು ಹೆಚ್ಚಿದಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು.


ಆಹಾ, ನಾನು ಅವಳನ್ನು ಒಲಿಸಿ ಅಡವಿಗೆ ಕರಕೊಂಡು ಹೋಗಿ ಅವಳೊಂದಿಗೆ ಹೃದಯಂಗಮವಾಗಿ ಮಾತಾಡುವೆನು.


ಇಗೋ, ನಾನು ಕೋಪರೋಷ ಮಹಾಕ್ರೋಧಭರಿತನಾಗಿ ಈ ಜನರನ್ನು ಯಾವ ದೇಶಗಳಿಗೆ ಅಟ್ಟಿದೆನೋ ಆ ಸಕಲ ದೇಶಗಳಿಂದ ಈ ಸ್ಥಳಕ್ಕೆ ಪುನಃ ಕರತಂದು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು