Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 32:14 - ಕನ್ನಡ ಸತ್ಯವೇದವು J.V. (BSI)

14 ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನೀನು ಈ ಕ್ರಯಪತ್ರಗಳನ್ನು, ಅಂದರೆ ಮುಚ್ಚಿದ ಪತ್ರವನ್ನೂ ಮುಚ್ಚಳದ ಪತ್ರವನ್ನೂ ತೆಗೆದುಕೊಂಡು ಬಹು ದಿವಸ ಇರುವ ಹಾಗೆ ಮಡಿಕೆಯಲ್ಲಿ ಬಚ್ಚಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ನೀನು ಈ ಕ್ರಯಪತ್ರಗಳನ್ನು, ಅಂದರೆ ಮುಚ್ಚಿದ ಪತ್ರವನ್ನೂ ಮತ್ತು ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು ಬಹು ದಿನ ಇರುವ ಹಾಗೆ ಅದನ್ನು ಮಡಿಕೆಯಲ್ಲಿ ಬಚ್ಚಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 “ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: ನೀನು ಈ ಕ್ರಯಪತ್ರಗಳನ್ನು, ಅಂದರೆ ಮುದ್ರಿತಪತ್ರವನ್ನೂ ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು ಒಂದು ಮಡಕೆಯಲ್ಲಿ ಬಚ್ಚಿಡು. ಅದು ಬಹಳ ದಿನ ಸುರಕ್ಷಿತವಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 “ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: ‘ಕ್ರಯಪತ್ರದ ಎರಡೂ ಪ್ರತಿಗಳನ್ನು ಅಂದರೆ ರುಜುಮಾಡಿದ ಮತ್ತು ರುಜುಮಾಡದ ಪ್ರತಿಗಳನ್ನು ತೆಗೆದುಕೊಂಡು ಅವುಗಳು ಬಹುಕಾಲ ಉಳಿಯುವಂತೆ ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಮುಚ್ಚಿಡು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ. ಈ ಪತ್ರಗಳನ್ನೂ, ಮುದ್ರೆ ಹಾಕಿದ ಈ ಕ್ರಯ ಪತ್ರವನ್ನೂ, ತೆರೆದಿರುವ ಈ ಪತ್ರವನ್ನೂ ತೆಗೆದು, ಅವು ಬಹು ದಿವಸವಿರುವ ಹಾಗೆ ಅವುಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಇಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 32:14
3 ತಿಳಿವುಗಳ ಹೋಲಿಕೆ  

ಅವರೆಲ್ಲರ ಮುಂದೆ ಅವನಿಗೆ -


ಈ ದೇಶದಲ್ಲಿ ಜನರು ಮನೆಹೊಲತೋಟಗಳನ್ನು ಮತ್ತೆ ಕೊಳ್ಳುವರು, ಕೊಡುವರು. ಇದು ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿ ಎಂದು ಖಂಡಿತವಾಗಿ ಹೇಳಿದೆನು.


ಯೆಹೋವನು ನನಗೆ ಹೀಗೆ ಹೇಳಿದನು - ಹೊರಡು, ಕುಂಬಾರನು ಮಾಡಿದ ಮಣ್ಣಿನ ಕೂಜವನ್ನು ಕೊಂಡುಕೊಂಡು ಜನರ ಹಿರಿಯರಲ್ಲಿಯೂ ಯಾಜಕರ ಹಿರಿಯರಲ್ಲಿಯೂ ಕೆಲವರನ್ನು ಕರೆದುಕೊಂಡು


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು