Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 31:5 - ಕನ್ನಡ ಸತ್ಯವೇದವು J.V. (BSI)

5 ನೀನು ತಿರಿಗಿ ಸಮಾರ್ಯದ ಗುಡ್ಡಗಳಲ್ಲಿ ತೋಟಗಳನ್ನು ಮಾಡಿಕೊಳ್ಳುವಿ; ನೆಡುವವರು ನೆಟ್ಟು ಫಲವನ್ನನುಭವಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನೀನು ತಿರುಗಿ ಸಮಾರ್ಯದ ಗುಡ್ಡಗಳಲ್ಲಿ ದ್ರಾಕ್ಷಿತೋಟಗಳನ್ನು ಮಾಡಿಕೊಳ್ಳುವಿ; ನೆಡುವವರು ನೆಟ್ಟು ಫಲವನ್ನು ಅನುಭವಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಸಮಾರಿಯದ ಗುಡ್ಡಗಳಲ್ಲಿ ಮರಳಿ ದ್ರಾಕ್ಷಾತೋಟಗಳನ್ನು ಮಾಡಿಕೊಳ್ಳುವೆ. ನೆಡುವವರೇ ನೆಟ್ಟ ಫಲಗಳನ್ನು ಸವಿಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಇಸ್ರೇಲಿನ ರೈತರಾದ ನೀವು ಮತ್ತೆ ದ್ರಾಕ್ಷಿತೋಟಗಳನ್ನು ಬೆಳೆಸುವಿರಿ. ನೀವು ಸಮಾರ್ಯ ನಗರದ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಆ ದ್ರಾಕ್ಷಿತೋಟವನ್ನು ಬೆಳೆಸುವಿರಿ. ರೈತರಾದ ನೀವು ಅದರ ಫಲವನ್ನು ಅನುಭವಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಸಮಾರ್ಯದ ಪರ್ವತಗಳಲ್ಲಿ ತಿರುಗಿ ದ್ರಾಕ್ಷಿಗಿಡಗಳನ್ನು ನೆಡುವೆ. ರೈತರು ನೆಟ್ಟು ಸಾಧಾರಣವಾದವುಗಳಂತೆ ಫಲ ಅನುಭವಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 31:5
15 ತಿಳಿವುಗಳ ಹೋಲಿಕೆ  

ನಾನು ನನ್ನ ಜನರಾದ ಇಸ್ರಾಯೇಲ್ಯರ ದುರವಸ್ಥೆಯನ್ನು ತಪ್ಪಿಸುವೆನು; ಅವರು ಹಾಳುಬಿದ್ದ ಪಟ್ಟಣಗಳನ್ನು ಪುನಃ ಕಟ್ಟಿ ಅವುಗಳಲ್ಲಿ ವಾಸಿಸುವರು; ದ್ರಾಕ್ಷೆಯ ತೋಟಗಳನ್ನು ಮಾಡಿಕೊಂಡು ಅವುಗಳ ದ್ರಾಕ್ಷಾರಸವನ್ನು ಕುಡಿಯುವರು; ಫಲವೃಕ್ಷಗಳನ್ನು ಬೆಳೆಯಿಸಿ ಅವುಗಳ ಹಣ್ಣುಗಳನ್ನು ತಿನ್ನುವರು.


ನೀವು ಮದುವೆಮಾಡಿಕೊಂಡ ಸ್ತ್ರೀಯನ್ನು ಮತ್ತೊಬ್ಬನು ಮಾನಭಂಗಪಡಿಸುವನು; ನೀವು ಕಟ್ಟಿಕೊಂಡ ಮನೆಯಲ್ಲಿ ಮತ್ತೊಬ್ಬನು ವಾಸಮಾಡುವನು; ನೀವು ಮಾಡಿಕೊಂಡ ದ್ರಾಕ್ಷೇತೋಟದ ಬೆಳೆಯು ನಿಮಗೆ ದೊರೆಯುವದಿಲ್ಲ.


ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.


ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಆ ದಿನದಲ್ಲಿ ನೀವೆಲ್ಲರು ನಿಮ್ಮ ನಿಮ್ಮ ನೆರೆಹೊರೆಯವರನ್ನು ದ್ರಾಕ್ಷಾಲತೆ ಅಂಜೂರಗಿಡ ಇವುಗಳ ನೆರಳಿಗೆ ಕರೆಯುವಿರಿ.


ಆಗ ದಕ್ಷಿಣಪ್ರಾಂತದವರು ಏಸಾವಿನ ಪರ್ವತವನ್ನು ಸ್ವಾಧೀನಮಾಡಿಕೊಳ್ಳುವರು; ಇಳಕಲಿನ ಪ್ರದೇಶದವರು ಫಿಲಿಷ್ಟಿಯವನ್ನೂ ಎಫ್ರಾಯೀವಿುನ ಭೂವಿುಯನ್ನೂ ಸಮಾರ್ಯದ ನೆಲವನ್ನೂ ವಶಮಾಡಿಕೊಳ್ಳುವರು; ಬೆನ್ಯಾಮೀನಿನವರು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವರು;


ಇಸ್ರಾಯೇಲಿನ ಪರ್ವತಗಳೇ, ನಿಮ್ಮ ಗಿಡಗಳು ರೆಂಬೆಗಳನ್ನು ಹರಡಿಕೊಂಡು ನನ್ನ ಜನರಾದ ಇಸ್ರಾಯೇಲ್ಯರಿಗೆ ಫಲಕೊಡುವವು; ಅವರ ಬರುವಿಕೆಯು ಸಮೀಪವಾಯಿತು.


ನಮ್ಮ ಎಲ್ಲಾ ಯುದ್ಧಪ್ರಯಾಣಗಳಲ್ಲಿ ಸ್ತ್ರೀನಿಷೇಧ ಮಾಡುವಂತೆ ಈಗಲೂ ಮಾಡಿದ್ದೇವೆ. ನಾವು ಸಾಧಾರಣಕಾರ್ಯಕ್ಕೆ ಹೊರಟಾಗಲೂ ಆಳುಗಳ ಸಾಮಾನುಗಳು ಪರಿಶುದ್ಧವಾಗಿರುತ್ತಿದ್ದವು. ಈ ದಿನದಲ್ಲಿ ಅವು ಎಷ್ಟೋ ಹೆಚ್ಚಾಗಿ ಪರಿಶುದ್ಧವಾಗಿರುವವಲ್ಲವೇ ಎಂದು ಉತ್ತರಕೊಟ್ಟನು.


ಯಾವನಾದರೂ ದ್ರಾಕ್ಷೇತೋಟವನ್ನು ಮಾಡಿ ಅದರ ಹಣ್ಣುಗಳನ್ನು ಇನ್ನೂ ಅನುಭೋಗಿಸದಿದ್ದರೆ ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಆ ತೋಟದ ಹಣ್ಣುಗಳನ್ನು ಅನುಭೋಗಿಸಾನು.


ಹೊಲಗಳನ್ನು ಬಿತ್ತಿ ದ್ರಾಕ್ಷಾಲತೆಗಳನ್ನು ನೆಟ್ಟು ಆದಾಯವನ್ನು ಕೂಡಿಸಿಕೊಂಡರು.


ಈ ದೇಶದಲ್ಲಿ ಜನರು ಮನೆಹೊಲತೋಟಗಳನ್ನು ಮತ್ತೆ ಕೊಳ್ಳುವರು, ಕೊಡುವರು. ಇದು ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿ ಎಂದು ಖಂಡಿತವಾಗಿ ಹೇಳಿದೆನು.


ಅಲ್ಲಿ ನಿರ್ಭಯವಾಗಿರುವರು, ಮನೆಗಳನ್ನು ಕಟ್ಟಿಕೊಂಡು ತೋಟಗಳನ್ನು ಮಾಡಿಕೊಂಡು ಸುಖವಾಗಿ ವಾಸಿಸುವರು; ಅವರನ್ನು ಹೀನೈಸುವ ನೆರೆಹೊರೆಯವರಿಗೆ ನಾನು ದಂಡನೆಮಾಡಿದ ಮೇಲೆ ನಾನೇ ತಮ್ಮ ದೇವರಾದ ಯೆಹೋವನು ಎಂದು ಅವರಿಗೆ ನಿಶ್ಚಯವಾಗುವದು.


ಆದಕಾರಣ ನಾನು ಸಮಾರ್ಯವನ್ನು ಹೊಲದಲ್ಲಿನ ಹಾಳು ದಿಬ್ಬವನ್ನಾಗಿಯೂ ದ್ರಾಕ್ಷೆಯ ತೋಟದ ಮಡಿಗಳನ್ನಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿಗೆ ಸುರಿದು ಬಿಡುವೆನು; ಅದರ ಅಸ್ತಿವಾರಗಳನ್ನು ಬೈಲುಮಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು