Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 31:13 - ಕನ್ನಡ ಸತ್ಯವೇದವು J.V. (BSI)

13 ಆಗ ಯುವತಿಯು ನಾಟ್ಯವಾಡುತ್ತಾ ಉಲ್ಲಾಸಿಸುವಳು; ಯುವಕರೂ ವೃದ್ಧರೂ ಜೊತೆಯಾಗಿ ಹರ್ಷಿಸುವರು; ನಾನು ಅವರ ದುಃಖವನ್ನು ನೀಗಿಸಿ ಸಂತೋಷವನ್ನುಂಟುಮಾಡಿ ಅವರು ತಮ್ಮ ವ್ಯಸನವನ್ನು ಬಿಟ್ಟು ಆನಂದಿಸುವಂತೆ ಅವರನ್ನು ಸಂತೈಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆಗ ಯುವತಿಯು ನಾಟ್ಯವಾಡುತ್ತಾ ಉಲ್ಲಾಸಿಸುವಳು; ಯುವಕರು ಮತ್ತು ವೃದ್ಧರು ಜೊತೆಯಾಗಿ ಹರ್ಷಿಸುವರು. ನಾನು ಅವರ ದುಃಖವನ್ನು ನೀಗಿಸಿ ಸಂತೋಷವನ್ನು ಉಂಟುಮಾಡಿ, ಅವರು ತಮ್ಮ ವ್ಯಸನವನ್ನು ಬಿಟ್ಟು ಆನಂದಿಸುವಂತೆ ಅವರನ್ನು ಸಂತೈಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಆಗ ನಾಟ್ಯವಾಡಿ ನಲಿವಳು ಯುವತಿ ಹರ್ಷಿಸುವರು ಯುವಕರು ಮುದುಕರು ಜೊತೆಯಾಗಿ. ಅವರ ದುಃಖವನ್ನು ಸಂತೋಷವಾಗಿಸುವೆನು ವ್ಯಸನ ತೊರೆದು ಆನಂದಿಸುವಂತೆ ಅವರನ್ನು ಸಂತೈಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆಗ ಇಸ್ರೇಲಿನ ತರುಣಿಯರು ಸಂತೋಷದಿಂದ ನರ್ತಿಸುವರು. ತರುಣರು ಮತ್ತು ವೃದ್ಧರು ಆ ನರ್ತನದಲ್ಲಿ ಭಾಗವಹಿಸುವರು. ನಾನು ಅವರ ದುಃಖವನ್ನು ಸಂತೋಷವಾಗಿ ಪರಿವರ್ತಿಸುವೆನು. ನಾನು ಇಸ್ರೇಲರನ್ನು ಸಂತೈಸುವೆನು. ಅವರ ದುಃಖವನ್ನು ಹೋಗಲಾಡಿಸಿ ಅವರನ್ನು ಸಂತೋಷಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆಗ ಕನ್ನಿಕೆಯರೂ, ಪ್ರಾಯದವರೂ, ವೃದ್ಧರ ಸಹಿತವಾಗಿ ನಾಟ್ಯವಾಡುತ್ತಾ ಹರ್ಷಿಸುವರು. ಏಕೆಂದರೆ ನಾನು ಅವರ ದುಃಖವನ್ನು ಆನಂದಕ್ಕೆ ಬದಲಾಯಿಸುವೆನು. ನಾನು ಅವರನ್ನು ಆಧರಿಸಿ, ಅವರ ದುಃಖದಿಂದ ಬಿಡಿಸಿ, ಅವರಿಗೆ ಸಂತೋಷವನ್ನುಂಟು ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 31:13
22 ತಿಳಿವುಗಳ ಹೋಲಿಕೆ  

ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ ಸಂತೋಷದಿಂದ ಕುಣಿದಾಡುವಂತೆ ಮಾಡಿದಿ; ನಾನು ಕಟ್ಟಿಕೊಂಡಿದ್ದ ಗೋಣಿತಟ್ಟನ್ನು ತೆಗೆದುಬಿಟ್ಟು ಹರ್ಷವಸ್ತ್ರವನ್ನು ನನಗೆ ಧಾರಣೆಮಾಡಿಸಿದಿ.


ದುಃಖಿತರೆಲ್ಲರನ್ನು ಸಂತೈಸುವದಕ್ಕೂ ಚೀಯೋನಿನಲ್ಲಿ ಶೋಕಿಸುವವರಿಗೆ ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದತೈಲ, ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹಸ್ತೋತ್ರದ ವಸ್ತ್ರ ಇವುಗಳನ್ನು ಒದಗಿಸಿಕೊಡುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ. ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವದು.


ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.


ಇಸ್ರಾಯೇಲೆಂಬ ಯುವತಿಯೇ, ನಾನು ನಿನ್ನ ಹಾಳುಪ್ರದೇಶಗಳನ್ನು ಪುನಃ ಕಟ್ಟುವೆನು; ಅವು ಕಟ್ಟಡಗಳಾಗುವವು. ನೀನು ಮತ್ತೆ ದಮ್ಮಡಿಗಳಿಂದ ವೈಭವಗೊಂಡು ವಿನೋದಪಡುವವರ ನಾಟ್ಯಗಳಲ್ಲಿ ಸೇರಿಕೊಳ್ಳುವಿ.


ಹಾಗೆಯೇ ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರಿಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವದು, ಮತ್ತು ನಿಮ್ಮ ಆನಂದವನ್ನು ಯಾರೂ ನಿವ್ಮಿುಂದ ತೆಗೆಯುವದಿಲ್ಲ.


ಯೆಹೋವನು ಚೀಯೋನನ್ನು ಸಂತೈಸೇ ಸಂತೈಸುವನು; ಅಲ್ಲಿನ ಹಾಳು ಪ್ರದೇಶಗಳನ್ನೆಲ್ಲಾ ಸುಧಾರಿಸಿ ಕಾಡುನೆಲವನ್ನು ಏದೆನ್ ಉದ್ಯಾನದಂತೆಯೂ ಬೀಳುಭೂವಿುಯನ್ನು ಯೆಹೋವನ ವನದ ಹಾಗೂ ಕಳಕಳಿಸುವಂತೆ ಮಾಡುವನು; ಹರ್ಷ, ಉಲ್ಲಾಸ, ಸ್ತೋತ್ರ, ಗಾನಧ್ವನಿ, ಇವುಗಳು ಅಲ್ಲಿ ನೆಲೆಯಾಗಿರುವವು.


ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.


ಕುಣಿಯುತ್ತಾ ಆತನ ನಾಮವನ್ನು ಕೀರ್ತಿಸಲಿ; ದಮ್ಮಡಿಕಿನ್ನರಿಗಳಿಂದ ಆತನನ್ನು ಭಜಿಸಲಿ.


ಆ ದಿನಗಳಲ್ಲಿ ಯೆಹೂದ್ಯರಿಗೆ ಶತ್ರುಪೀಡೆ ತಪ್ಪಿ ವಿಶ್ರಾಂತಿಯುಂಟಾಯಿತು; ಆ ತಿಂಗಳಿನಲ್ಲಿ ಸಂತಾಪವು ಪರಿಹಾರವಾಗಿ ಅವರಿಗೆ ಸಂತೋಷವುಂಟಾಯಿತು; ದುಃಖವು ಹೋಗಿ ಸುಖಕಾಲವು ಬಂತು. ಆದದರಿಂದ ಅವರು ಆ ದಿನಗಳಲ್ಲಿ ಉತ್ಸವಭೋಜನ ಮಾಡಿ ಒಬ್ಬರಿಗೊಬ್ಬರು ಭೋಜನಭಾಗಗಳನ್ನು ಕಳುಹಿಸಿ ಬಡವರಿಗೆ ದಾನಧರ್ಮಮಾಡಬೇಕು.


ದೇವರು ತಮಗೆ ವಿಶೇಷಾನಂದವನ್ನುಂಟುಮಾಡಿದ್ದರಿಂದ ಜನರು ಆ ದಿನದಲ್ಲಿ ಅನೇಕ ಯಜ್ಞಗಳನ್ನು ಸಮರ್ಪಿಸಿ ತಮ್ಮ ಹೆಂಡತಿ ಮಕ್ಕಳೊಡನೆ ಮಹೋತ್ಸವ ಮಾಡಿದರು. ಯೆರೂಸಲೇವಿುನ ಉತ್ಸವದ ಹರ್ಷಧ್ವನಿಯು ಬಹುದೂರದವರೆಗೂ ಕೇಳಿಸಿತು.


ಯೆರೂಸಲೇವಿುನ ಗೋಡೆಯನ್ನು ಪ್ರತಿಷ್ಠಿಸುವ ಸಮಯ ಬಂದಾಗ ಆಯಾ ಸ್ಥಳಗಳಲ್ಲಿದ್ದ ಲೇವಿಯರನ್ನು ಕೀರ್ತನಗಾಯನಗಳಿಂದಲೂ ತಾಳ ಸ್ವರಮಂಡಲ ಕಿನ್ನರಿ ಇವುಗಳಿಂದಲೂ ಪ್ರತಿಷ್ಠೆಯ ಉತ್ಸವವನ್ನು ಆಚರಿಸುವದಕ್ಕಾಗಿ ಯೆರೂಸಲೇವಿುಗೆ ಕರೆಯಿಸಿದರು.


ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನಾಲ್ಕನೆಯ ತಿಂಗಳಿನ ಉಪವಾಸ, ಐದನೆಯ ತಿಂಗಳಿನ ಉಪವಾಸ, ಏಳನೆಯ ತಿಂಗಳಿನ ಉಪವಾಸ, ಹತ್ತನೆಯ ತಿಂಗಳಿನ ಉಪವಾಸ, ಇವು ಯೆಹೂದ ವಂಶಕ್ಕೆ ವಿಶೇಷವಾದ ಹಬ್ಬಗಳಾಗಿ ಹರ್ಷೋಲ್ಲಾಸಗಳನ್ನುಂಟುಮಾಡುವವು; ಹೀಗಿರಲು ಸತ್ಯವನ್ನೂ ಸಮಾಧಾನವನ್ನೂ ಪ್ರೀತಿಸಿರಿ.


ನಿನ್ನ ಸೂರ್ಯನು ಇನ್ನು ಮುಣುಗನು, ನಿನ್ನ ಚಂದ್ರನು ತೊಲಗನು; ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು, ನೀನು ದುಃಖಿಸುವ ದಿನಗಳು ಕೊನೆಗಾಣುವವು.


ಇದಲ್ಲದೆ ಇಸ್ರಾಯೇಲ್‍ದೇವರ ಆಲಯವನ್ನು ಕಟ್ಟುವದರಲ್ಲಿ ಅಶ್ಶೂರದ ಅರಸನು ತಮಗೆ ಸಹಾಯ ಮಾಡುವಂತೆ ಯೆಹೋವನು ಅವನ ಮನಸ್ಸನ್ನು ತಿರುಗಿಸಿ ತಮಗೆ ಸಂತೋಷವನ್ನು ಉಂಟುಮಾಡಿದ್ದಾನೆ ಎಂದು ಹರ್ಷಿಸುತ್ತಾ ಏಳು ದಿವಸಗಳವರೆಗೂ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನು ಆಚರಿಸಿದರು.


ಶೀಲೋವಿನ ಕನ್ಯೆಯರು ಹೊರಗೆ ಬಂದು ನಾಟ್ಯವಾಡುವಾಗ ನೀವು ತೋಟಗಳಿಂದ ಹೊರಗೆ ಬಂದು ಪ್ರತಿಯೊಬ್ಬನು ತನತನಗೆ ಶೀಲೋವಿನ ಕನ್ನಿಕೆಗಳಿಂದ ಒಬ್ಬಳನ್ನು ಹೆಂಡತಿಯಾಗಿ ತೆಗೆದುಕೊಂಡು ನಿಮ್ಮ ಸೀಮೆಗೆ ಓಡಿ ಹೋಗಿರಿ.


ಯೆಹೋವನು ನೇವಿುಸಿರುವ ಶುಭವರುಷ, ನಮ್ಮ ದೇವರು ಮುಯ್ಯಿ ತೀರಿಸುವ ದಿನ, ಇವುಗಳನ್ನು ಪ್ರಚುರಗೊಳಿಸುವದಕ್ಕೂ


ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು.


ಪ್ರಾಯಸ್ಥರಾದ ಸ್ತ್ರೀಪುರುಷರೂ ಮುದುಕರೂ ಹುಡುಗರೂ


ಆ ದಿನದಲ್ಲಿ ನೀನು ಹೇಳುವದೇನಂದರೆ - ಯೆಹೋವನೇ, ನಾನು ನಿನಗೆ ಕೃತಜ್ಞತೆಯನ್ನು ಸಲ್ಲಿಸುವೆನು; ನೀನು ನನ್ನ ಮೇಲೆ ಕೋಪಗೊಂಡಿದ್ದರೂ ಆ ನಿನ್ನ ಕೋಪವು ಪರಿಹಾರವಾಗಿ ನನ್ನನ್ನು ಸಂತೈಸುತ್ತೀಯಲ್ಲವೆ.


ಉಲ್ಲಾಸ ಕೋಲಾಹಲ, ವಧೂವರರ ಸ್ವರ, ಇವುಗಳು ಕೇಳ ಬರುವವು. ಸೇನಾಧೀಶ್ವರನಾದ ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಯೆಹೋವನು, ಒಳ್ಳೆಯವನು, ಆತನ ಕೃಪೆಯು ಶಾಶ್ವತ ಎಂದು ಕೀರ್ತಿಸುತ್ತಾ ಕೃತಜ್ಞತಾಬಲಿಯನ್ನು ಯೆಹೋವನ ಆಲಯಕ್ಕೆ ತರುವವರ ಗಾನವೂ ಕಿವಿಗೆ ಬೀಳುವದು. ನಾನು ದೇಶವನ್ನು ದುರವಸ್ಥೆಯಿಂದ ತಪ್ಪಿಸಿ ಪೂರ್ವಸ್ಥಿತಿಗೆ ತರುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು