Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 30:3 - ಕನ್ನಡ ಸತ್ಯವೇದವು J.V. (BSI)

3 ಇಗೋ ನಾನು ನನ್ನ ಜನರಾದ ಇಸ್ರಾಯೇಲ್ಯರನ್ನೂ ಯೆಹೂದ್ಯರನ್ನೂ ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. ಆಗ ನಾನು ಅವರನ್ನು ಅವರ ಪಿತೃಗಳಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಇಗೋ, ನಾನು ನನ್ನ ಜನರಾದ ಇಸ್ರಾಯೇಲರನ್ನು ಮತ್ತು ಯೆಹೂದ್ಯರನ್ನು ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. ಆಗ ನಾನು ಅವರನ್ನು ಅವರ ಪೂರ್ವಿಕರಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಯೆಹೋವನ ನುಡಿ” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಇಗೋ, ನಾನು ನನ್ನ ಪ್ರಜೆಯಾದ ಇಸ್ರಯೇಲರನ್ನೂ ಯೆಹೂದ್ಯರನ್ನೂ ಅವರ ದುರವಸ್ಥೆಯಿಂದ ಬಿಡುಗಡೆಮಾಡುವ ದಿನಗಳು ಬರುವುವು. ಆಗ ನಾನು ಅವರನ್ನು ಅವರ ಪೂರ್ವಜರಿಗೆ ಅನುಗ್ರಹಿಸಿದ ನಾಡಿಗೆ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಸರ್ವೇಶ್ವರನಾದ ನನ್ನ ನುಡಿ’.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಏಕೆಂದರೆ ನಾನು ನನ್ನ ಜನರಾದ ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ಸೆರೆವಾಸದಿಂದ ಕರೆದುಕೊಂಡು ಬರುವ ದಿನಗಳು ಬರುತ್ತಿವೆ.” ಈ ಸಂದೇಶವು ಯೆಹೋವನಿಂದ ಬಂದದ್ದು. “ಆ ಜನರನ್ನು ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶದಲ್ಲಿ ನೆಲಸುವಂತೆ ಮಾಡುತ್ತೇನೆ. ಆಗ ನನ್ನ ಜನರು ಆ ಪ್ರದೇಶದ ಒಡೆತನ ಪಡೆಯುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಏಕೆಂದರೆ, ದಿನಗಳು ಬರುವವು,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಆಗ ನಾನು ನನ್ನ ಜನರಾದ ಇಸ್ರಾಯೇಲ್ ಹಾಗು ಯೆಹೂದದ ಸೆರೆಯವರನ್ನು ತಿರುಗಿ ಬರಮಾಡುತ್ತೇನೆ. ಆಗ ನಾನು ಅವರ ಪಿತೃಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡುತ್ತೇನೆ. ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು,’ ಎಂದು ಯೆಹೋವ ದೇವರು ಹೇಳುತ್ತಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 30:3
45 ತಿಳಿವುಗಳ ಹೋಲಿಕೆ  

ನಾನು ನಿಮಗೆ ದೊರೆಯುವೆನು, ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ ನಾನು ನಿಮ್ಮನ್ನು ಅಟ್ಟಿಬಿಟ್ಟಿದ್ದ ಸಮಸ್ತದೇಶಗಳಿಂದಲೂ ಸಕಲಜನಾಂಗಗಳ ಮಧ್ಯದಿಂದಲೂ ಒಟ್ಟುಗೂಡಿಸಿ ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದನೋ ಅಲ್ಲಿಗೆ ತಿರಿಗಿ ಬರಮಾಡುವೆನು. ಇದು ಯೆಹೋವನ ನುಡಿ.


ಇಸ್ರಾಯೇಲ್ಯರನ್ನು ಬಡಗಣ ದೇಶದಿಂದಲೂ ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಉದ್ಧರಿಸಿದ ಯೆಹೋವನ ಜೀವದಾಣೆ ಎಂದು ಪ್ರಮಾಣಮಾಡುವರು; ನಾನು ಅವರ ಪಿತೃಗಳಿಗೆ ದಯಪಾಲಿಸಿದ ದೇಶಕ್ಕೆ ಅವರನ್ನು ಹಿಂದಿರುಗಿಸುವೆನಷ್ಟೆ.


ನಾನು ಪ್ರಮಾಣಮಾಡಿ ನಿಮ್ಮ ಪಿತೃಗಳಿಗೆ ಯಾವ ದೇಶವನ್ನು ಕೊಟ್ಟೆನೋ ಆ ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ಬರಮಾಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಯೆಹೋವನು ಹೀಗನ್ನುತ್ತಾನೆ - ಆಹಾ, ನಾನು ಯಾಕೋಬಿನ ಮನೆಗಳ ದುರವಸ್ಥೆಯನ್ನು ತಪ್ಪಿಸಿ ಅದರ ನಿವಾಸಗಳನ್ನು ಕರುಣಿಸುವೆನು; ಪಟ್ಟಣವು ತನ್ನ ಹಾಳುದಿಬ್ಬದ ಮೇಲೆ ಪುನಃ ಕಟ್ಟಲ್ಪಡುವದು, ಅರಮನೆಯು ತಾನಿದ್ದ ಸ್ಥಳದಲ್ಲೇ ನೆಲೆಯಾಗಿರುವದು.


ಆ ಕಾಲದಲ್ಲಿ ನಿಮ್ಮನ್ನು ಕರತರುವೆನು, ಹೌದು, ಆ ಕಾಲದಲ್ಲಿ ನಿಮ್ಮನ್ನು ಒಟ್ಟುಗೂಡಿಸುವೆನು; ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೆ ತಪ್ಪಿಸುವಾಗ ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿಸ್ತೋತ್ರಗಳಿಗೆ ಗುರಿಮಾಡುವೆನು. ಇದು ಯೆಹೋವನ ನುಡಿ.


ಆಗ ನಾನು ಯಾಕೋಬನ ಸಂತಾನದವರನ್ನು ತ್ಯಜಿಸಿ ಅಬ್ರಹಾಮ, ಇಸಾಕ, ಯಾಕೋಬ, ಇವರ ಸಂತತಿಯನ್ನು ಆಳತಕ್ಕ ಒಡೆಯರನ್ನು ನನ್ನ ದಾಸನಾದ ದಾವೀದನ ವಂಶದಿಂದ ಆರಿಸದೆ ಆ ವಂಶದವರನ್ನು ನಿರಾಕರಿಸಿಬಿಟ್ಟೇನು. ಅವರನ್ನು ದುರವಸ್ಥೆಯಿಂದ ತಪ್ಪಿಸಿ ಕರುಣಿಸೇ ಕರುಣಿಸುವೆನು.


ಬೆನ್ಯಮೀನ್ ಸೀಮೆ, ಯೆರೂಸಲೇವಿುನ ಸುತ್ತಣ ಪ್ರದೇಶಗಳು, ಯೆಹೂದದ ಊರುಗಳು, ಬೆಟ್ಟದ ಊರುಗಳು, ಇಳಕಲಿನ ಊರುಗಳು, ದಕ್ಷಿಣಪ್ರಾಂತದ ಊರುಗಳು, ಈ ಎಲ್ಲಾ ಸ್ಥಳಗಳಲ್ಲಿ ಜನರು ಹೊಲಗದ್ದೆಗಳಿಗೆ ಕ್ರಯಕೊಟ್ಟು ಪತ್ರಕ್ಕೆ ರುಜುಹಾಕಿ ಮುಚ್ಚಿ ಸಾಕ್ಷಿಗಳನ್ನು ಹಾಕಿಸಿ ಕೊಂಡುಕೊಳ್ಳುವರು; ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸುವೆನಷ್ಟೆ. ಇದು ಯೆಹೋವನ ನುಡಿ.


ಆದರೆ ದೇವರು ಆ ಒಡಂಬಡಿಕೆಗೆ ಸೇರಿದವರ ಮೇಲೆ ತಪ್ಪುಹೊರಿಸಿ ಹೀಗೆಂದನು - ಇಗೋ, ನಾನು ಇಸ್ರಾಯೇಲ್‍ವಂಶದವರೊಂದಿಗೂ ಯೆಹೂದವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು ಎಂದು ಕರ್ತನು ಹೇಳುತ್ತಾನೆ;


ಇಗೋ, ಆ ದಿನಗಳಲ್ಲಿ, ನಾನು ಯೆಹೂದದ ಮತ್ತು ಯೆರೂಸಲೇವಿುನ ದುರವಸ್ಥೆಯನ್ನು ತಪ್ಪಿಸುವ ಕಾಲದಲ್ಲಿ


ನಾನು ನಿಮ್ಮನ್ನು ಜನಾಂಗಗಳೊಳಗಿಂದ ಬಿಡಿಸಿ ಸಕಲ ದೇಶಗಳಿಂದ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡುವೆನು.


ಚೀಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ. ದೇವರು ದುರವಸ್ಥೆಯಿಂದ ತಪ್ಪಿಸಿದಾಗ ಆತನ ಪ್ರಜೆಗಳಾಗಿರುವ ಯಾಕೋಬ ವಂಶದವರು ಉಲ್ಲಾಸಗೊಳ್ಳುವರು; ಇಸ್ರಾಯೇಲ್ಯರು ಹರ್ಷಿಸುವರು.


ಆತನು - ನೀವು ಇವುಗಳನ್ನು ನೋಡುತ್ತೀರಲ್ಲಾ, ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದೆ ಎಲ್ಲಾ ಕೆಡವಲ್ಪಡುವ ದಿವಸಗಳು ಬರುವವು ಅಂದನು.


ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳುಕೊಳ್ಳಲಿಲ್ಲವಾದದರಿಂದ ನಿನ್ನ ವೈರಿಗಳು ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದುಮಾಡಿ ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿವಸಗಳು ನಿನ್ನ ಮೇಲೆ ಬರುವವು ಅಂದನು.


ಮತ್ತು ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - ಒಂದು ಕಾಲ ಬರುತ್ತದೆ, ಅದರಲ್ಲಿ ನೀವು ಮನುಷ್ಯಕುಮಾರನ ದಿವಸಗಳೊಳಗೆ ಒಂದು ದಿನವನ್ನು ನೋಡಬೇಕೆಂದು ಅಪೇಕ್ಷಿಸಿದರೂ ಅದನ್ನು ನೋಡದೆ ಇರುವಿರಿ.


ನಾನು ನಿಮ್ಮ ಪಿತೃಗಳಿಗೆ ಪ್ರಮಾಣವಾಗಿ ವಾಗ್ದಾನಮಾಡಿದ ಈ ದೇಶವನ್ನು ನೀವೆಲ್ಲರೂ ಸರಿಸಮಾನವಾಗಿ ಅನುಭವಿಸುವಿರಿ; ಇದು ನಿಮಗೆ ಸ್ವಾಸ್ತ್ಯವಾಗಿಯೇ ಇರುವದು.


ಇಗೋ, ನಾನು ಕೋಪರೋಷ ಮಹಾಕ್ರೋಧಭರಿತನಾಗಿ ಈ ಜನರನ್ನು ಯಾವ ದೇಶಗಳಿಗೆ ಅಟ್ಟಿದೆನೋ ಆ ಸಕಲ ದೇಶಗಳಿಂದ ಈ ಸ್ಥಳಕ್ಕೆ ಪುನಃ ಕರತಂದು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.


ಯೆಹೋವನು ಇಂತೆನ್ನುತ್ತಾನೆ - ಇಗೋ, ಮುಂದಿನ ಕಾಲದಲ್ಲಿ ಈ ಪಟ್ಟಣವು ಹನನೇಲನ ಬುರುಜಿನಿಂದ ಮೂಲೆಯ ಬಾಗಿಲಿನವರೆಗೆ ಯೆಹೋವನ ಘನತೆಗಾಗಿ ವಿಸ್ತರಿಸುವದು.


ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು;


ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಇಸ್ರಾಯೇಲ್ ಯೆಹೂದ ಕ್ಷೇತ್ರಗಳಲ್ಲಿ ಮನುಷ್ಯರನ್ನೂ ಪಶುಗಳನ್ನೂ ಬಿತ್ತುವ ದಿನಗಳು ಬರುವವು.


ಯೆಹೋವನು ಇಂತೆನ್ನುತ್ತಾನೆ - ನನ್ನ ಸೇವಕ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು; ಯಾಕೋಬು ಹಿಂದಿರುಗಿ ನೆಮ್ಮದಿಯಾಗಿಯೂ ಹಾಯಾಗಿಯೂ ಇರುವದು;


ಅವು ಬಾಬೆಲಿಗೆ ಒಯ್ಯಲ್ಪಟ್ಟು ನಾನು ಅವುಗಳನ್ನು ಉದ್ಧರಿಸುವ ದಿನದ ತನಕ ಅಲ್ಲೇ ಇರುವವು; ಆಗ ನಾನು ಅವುಗಳನ್ನು ಪುನಃ ತಂದು ಈ ಸ್ಥಳಕ್ಕೆ ಸೇರಿಸುವೆನು. ಇದು ಯೆಹೋವನ ನುಡಿ.


ಯಾವ ಜನಾಂಗವು ಬಾಬೆಲಿನ ಅರಸನ ನೊಗಕ್ಕೆ ಹೆಗಲು ಕೊಟ್ಟು ಅವನ ಅಡಿಯಾಳಾಗುವದೋ ಆ ಜನಾಂಗದವರನ್ನು ನಾನು ಅವರ ದೇಶದಲ್ಲಿ ನೆಲೆಗೊಳಿಸುವೆನು; ಅವರು ಅಲ್ಲಿ ಗೆಯ್ದು ವಾಸಿಸುವರು. ಯೆಹೋವನೇ ಇದನ್ನು ನುಡಿದಿದ್ದಾನೆ.


ಯೆಹೋವನು ಹೀಗನ್ನುತ್ತಾನೆ - ಇಗೋ, ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಿಕೆಯನ್ನು ಚಿಗುರಿಸುವೆನು; ಅವನು ರಾಜನಾಗಿ ಆಳುತ್ತಾ ವಿವೇಕದಿಂದ ಕಾರ್ಯವನ್ನು ಸಾಧಿಸುತ್ತಾ ದೇಶದಲ್ಲಿ ನೀತಿನ್ಯಾಯಗಳನ್ನು ನಿರ್ವಹಿಸುವನು.


ಆದರೆ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಗೋತ್ರ ಪ್ರಧಾನರಲ್ಲಿಯೂ ಅನೇಕರು ಅಂದರೆ ಮುಂಚಿನ ದೇವಾಲಯವನ್ನು ನೋಡಿದ್ದ ಮುದುಕರು ತಮ್ಮ ಕಣ್ಣು ಮುಂದೆ ದೇವಾಲಯದ ಅಸ್ತಿವಾರವು ಹಾಕಲ್ಪಡುವದನ್ನು ನೋಡುವಾಗ ಬಹಳವಾಗಿ ಅತ್ತರು; ಬೇರೆ ಹಲವರು ಹರ್ಷಧ್ವನಿಯಿಂದ ಆರ್ಭಟಿಸಿದರು.


ಅವರು ಯೆರೂಸಲೇವಿುನ ದೇವಾಲಯಕ್ಕೆ ಮುಟ್ಟಿದ ಎರಡನೆಯ ವರುಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್, ಯೋಚಾದಾಕನ ಮಗನಾದ ಯೇಷೂವ ಇವರೂ ಇವರ ಸಹೋದರರಾದ ಇತರ ಯಾಜಕರೂ ಲೇವಿಯರೂ ಸೆರೆಯಿಂದ ಯೆರೂಸಲೇವಿುಗೆ ತಿರಿಗಿ ಬಂದ ಬೇರೆ ಎಲ್ಲರೂ ದೇವಾಲಯವನ್ನು ಕಟ್ಟುವದಕ್ಕೆ ಪ್ರಾರಂಭಿಸಿ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚು ವಯಸ್ಸುಳ್ಳ ಲೇವಿಯರನ್ನು ಯೆಹೋವನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗೆ ನೇವಿುಸಿದರು.


ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಾಯೇಲ್ಯರು ಏಳನೆಯ ತಿಂಗಳಿನಲ್ಲಿ ಏಕಮನಸ್ಸಿನಿಂದ ಯೆರೂಸಲೇವಿುಗೆ ಕೂಡಿಬಂದರು.


ನಿಮ್ಮ ದೇವರಾದ ಯೆಹೋವನು ದುರವಸ್ಥೆಯಿಂದ ನಿಮ್ಮನ್ನು ತಪ್ಪಿಸಿ ನಿಮ್ಮನ್ನು ಕನಿಕರಿಸಿ ತಾನು ನಿಮ್ಮನ್ನು ಚದರಿಸಿರುವ ಎಲ್ಲಾ ದೇಶಗಳಿಂದ ತಿರಿಗಿ ಕೂಡಿಸುವನು.


ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸುವಾಗ ಯೆಹೂದ ದೇಶದಲ್ಲಿಯೂ ಅವರ ಪಟ್ಟಣಗಳಲ್ಲಿಯೂ - ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ ಎಂದು ಮತ್ತೆ ಮಾತಾಡುವರು.


ನಿಮ್ಮ ಪಿತೃಗಳಿಗೆ ಸ್ವಾಸ್ತ್ಯವಾಗಿದ್ದ ದೇಶದಲ್ಲಿ ಸೇರಿಸಿ ಅದು ನಿಮಗೂ ಸ್ವದೇಶವಾಗುವಂತೆ ಮಾಡಿ ನಿಮಗೆ ಮೇಲನ್ನುಂಟುಮಾಡಿ ಪಿತೃಗಳಿಗಿಂತಲೂ ಅಧಿಕವಾಗಿ ನಿಮ್ಮನ್ನು ಹೆಚ್ಚಿಸುವನು.


ಆ ಕಾಲದಲ್ಲಿ ಯೆಹೂದವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ನಡೆಯುವದು, ಎರಡೂ ಕಲೆತು ನಾನು ನಿಮ್ಮ ಪಿತೃಗಳಿಗೆ ಬಾಧ್ಯವಾಗಿ ದಯಪಾಲಿಸಿದ ದೇಶಕ್ಕೆ ಬಡಗಣ ಸೀಮೆಯೊಳಗಿಂದ ಬರುವವು.


ಯೆಹೋವನು ಇಂತೆನ್ನುತ್ತಾನೆ - ಬಾಬೆಲ್ ರಾಜ್ಯವು ಎಪ್ಪತ್ತು ವರುಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಕಟಾಕ್ಷಿಸಿ ಈ ಸ್ಥಳಕ್ಕೆ ತಿರಿಗಿ ಬರಮಾಡುವೆನೆಂಬ ನನ್ನ ಶುಭವಾಕ್ಯವನ್ನು ನಿಮಗಾಗಿ ನೆರವೇರಿಸುವೆನು.


ಯೆಹೋವನು ಇಸ್ರಾಯೇಲಿನ ಮತ್ತು ಯೆಹೂದದ ವಿಷಯವಾಗಿ ಈ ಮಾತುಗಳನ್ನು ಹೇಳಿದನು -


ಯೆಹೋವನು ಇಂತೆನ್ನುತ್ತಾನೆ - ನಿನ್ನ ಧ್ವನಿಯು ಗೋಳಾಗದಿರಲಿ, ನಿನ್ನ ಕಣ್ಣು ನೀರು ಸುರಿಸದಿರಲಿ; ನಿನ್ನ ಪ್ರಯಾಸವು ಸಾರ್ಥಕವಾಗುವದು; ಇದು ಯೆಹೋವನ ನುಡಿ; ನಿನ್ನ ಮಕ್ಕಳು ಶತ್ರುವಿನ ದೇಶದಿಂದ ಹಿಂದಿರುಗುವರು;


ಯೆರೆಮೀಯನು ಬಾಬೆಲಿಗೆ ಸಂಭವಿಸತಕ್ಕ ಎಲ್ಲಾ ಕೇಡಿನ ವಿಷಯವನ್ನು (ಅಂದರೆ ಬಾಬೆಲಿನ ಸಂಬಂಧವಾಗಿ ಹಿಂದೆ ಲಿಖಿತವಾದ ಎಲ್ಲಾ ಸಂಗತಿಗಳನ್ನು) ಒಂದು ಗ್ರಂಥವನ್ನಾಗಿ ಬರೆದು


ಯೆಹೋವನೇ, ನೀನು ದಕ್ಷಿಣದೇಶದ ಹಳ್ಳಗಳನ್ನೋ ಎಂಬಂತೆ ಸೆರೆಯಲ್ಲಿ ಉಳಿದಿರುವ ನಮ್ಮವರನ್ನೂ ತಿರಿಗಿ ಬರಮಾಡು


ಜನಾಂಗಗಳ ವಶದಿಂದ ತಪ್ಪಿಸಿ ದೇಶದೇಶಗಳಿಂದ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡಿ ಇಸ್ರಾಯೇಲಿನ ಬೆಟ್ಟಗಳಲ್ಲಿಯೂ ತೊರೆಗಳ ಬಳಿಯಲ್ಲಿಯೂ ಸೀಮೆಯ ಎಲ್ಲಾ ಹಕ್ಕೆಗಳಲ್ಲಿಯೂ ಮೇಯಿಸುವೆನು.


ಆ ಕರಾವಳಿಯು ಯೆಹೂದವಂಶಶೇಷದವರ ಪಾಲಾಗುವದು; ದನಕುರಿಗಳನ್ನು ಅಲ್ಲೇ ಮೇಯಿಸುವರು; ಸಂಜೆಗೆ ಅಷ್ಕೆಲೋನಿನ ಮನೆಗಳಲ್ಲಿ ಮಲಗಿಕೊಳ್ಳುವರು; ಅವರ ದೇವರಾದ ಯೆಹೋವನು ಅವರನ್ನು ಪರಾಂಬರಿಸಿ ಅವರ ದುರವಸ್ಥೆಯನ್ನು ತಪ್ಪಿಸುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು